ತಾಲೂಕು

ಶಾಲೆಗೆ ಭೂಮಿ ಧಾನ ನೀಡಿದ ಕುಟುಂಬಸ್ಥರ ದೊಡ್ಡ ಮನಸ್ಸು ಮಕ್ಕಳ ಉಜ್ವಲ ಭವಿಷ್ಯಕ್ಕೆ ಬೆಳಕ್ಕಾಗಿದೆ. ಎಂದು ಶಾಸಕ ಎಂ.ಆರ್. ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

Share News

ಹನೂರು :- ತಾಲ್ಲೂಕಿನ ನೆಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ 2026-27 ನೇ ಸಾಲಿನ ನವೋದಯಶಾಲೆಗೆ ಆಯ್ಕೆ ಆದ ಮಕ್ಕಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾಗದಪ್ರಕೃತಿ ಮಧ್ಯದಲ್ಲಿರುವ ಶಾಲೆಗೆ ಪ್ರಕೃತಿಯೂ ಸಹ ಪೂರಕವಾಗಿದೆ. ಮಕ್ಕಳು ಸಾಧಕರ ಬಗ್ಗೆ ಹೆಚ್ಚು ಅಧ್ಯಾಯನಮಾಡಿದಾಗ ಜ್ಞಾನಾರ್ಧಜನೆ ಹೆಚ್ಚು ಶಕ್ತಿ ತುಂಬುತ್ತದೆ. ಮಕ್ಕಳ ಪರಿಶ್ರಮದ ಶಕ್ತಿ ಜ್ಞಾನ ಸಂಕೇತ ಆಗಾಗಿ ಮಕ್ಕಳು ಓದಿನಕಡೆಗೆ ಹೆಚ್ಚು ಗಮನ ಹರಿಸುವ ಜೊತೆಗೆ ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳುವುದು ಉತ್ತಮ. ಇಂದಿನ ಸ್ಪರ್ಧಾತ್ಮಕಜಗತ್ತಿನಲ್ಲಿ ಮಕ್ಕಳು ತಮ್ಮ ಪ್ರತಿಭೆ ಆನಾವರಣವನ್ನು ಭಯಭೀತಿ ಬದಿಗೊತ್ತಿ ತಮ್ಮ ಜ್ಞಾನದ ಬುದ್ದಿವಂತಿಕೆ ಪ್ರರ್ದಶನಮಾಡಲು ಹಿಂಜರಿಯ ಬಾರದು. ಎಂದರು

ತಾಲ್ಲೂಕಿನ ಸರ್ಕಾರಿ ಶಾಲೆಯಲ್ಲಿ 2000 ಸಾವಿರ ಮಕ್ಕಳಲ್ಲಿ 12 ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದುನವೋದಯ ಶಾಲೆಗೆ ಆಯ್ಕೆ ಆಗಿರುವುದು ಉತ್ತಮ ಬೆಳವಣಿಗೆ ಅದರಲ್ಲಿ ತಮಿಳನಾಡಿನ ಭಾಗ ಮತ್ತು ಕಾಡಂಚಿನಪ್ರದೇಶದ ಶಾಲೆಗಳಲ್ಲಿ 8 ಮಕ್ಕಳು ನವೋದಯ ಶಾಲೆಗೆ ಆಯ್ಕೆ ಆಗಿರುವುದು ಗ್ರಾಮೀಣ ಭಾಗದ ಮಕ್ಕಳುಯಾವುದರಲ್ಲೂ ನಾವು ಕಮ್ಮಿ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಮತ್ತು ಇಲ್ಲಿನ ಶಿಕ್ಷಕರ ಪರಿಶ್ರಮ ಬಗ್ಗೆ ಮೆಚ್ಚುಗೆವ್ಯಕ್ತ ಪಡಿಸಬೇಕು. ಹಾಗೆಯೇ ಭೂಮಿ ಕೊಡುಗೆ ನೀಡಿದ ಕುಟುಂಬದವರಿಂದ ಎಷ್ಟೋ ಮಕ್ಕಳಿಗೆ ಉತ್ತಮವಿಧ್ಯಾಭ್ಯಾಸ ಸಿಕ್ಕಿದ್ದು ಭವಿಷ್ಯದಲ್ಲಿ ಪರಿಗಣಿಸಿ ಅವರಿಗೂ ಸಹ ಅಭಿನಂದನೆ ತಿಳಿಸ ಬೇಕಾಗುತ್ತದೆ.

ಗುಡ್ಡಗಾಡು ಕಾಡಂಚಿನ ಶಾಲೆ ಮಕ್ಕಳು ಪ್ರಕೃತಿ ಮಧ್ಯದಲ್ಲಿದ್ದು ಒಂದು ಪ್ರಕೃತಿ ನಿಮಗೆ ಹೆಚ್ಚಿನ ಸಹಕಾರ ನೀಡುತ್ತಿದೆ. ನೈಸರ್ಗಿಕವಾಗಿ ದೊರೆಯುವ ಯಾವುದೇ ವಸ್ತುಗಳು ಉತ್ತಮವಾಗಿರುತ್ತದೆ ಎಂಬುದಕ್ಕೆ ಇಲ್ಲಿನ ಸುತ್ತಮುತ್ತಲಿನವಾತಾವರಣವೇ ಸಾಕ್ಷಿಯಾಗಿದೆ. ಭಾಗದ ಜನರು ಮನವಿಯಂತೆ ಇಂಗ್ಲೀಷ್ ಪೂರ್ವ ಪ್ರಾಥಮಿಕ ಶಾಲೆ ಕೇಳುತ್ತಿದ್ದುಕ್ರಮ ವಹಿಸಲಾಗುವುದು. ಮುಂದಿನ ವರ್ಷವು ಸಹ ಹೆಚ್ಚು ಮಕ್ಕಳು ಆಯ್ಕೆ ಆಗಲೆಂದು ಹಾರೈಸುತ್ತೇನೆ ಹಾಗೆಯೇಶಿಕ್ಷಕ ವೃಂದದವರ ಶ್ರಮವನ್ನು ಶ್ಲಾಘಿಸುವುದಾಗಿ ತಿಳಿಸಿದರು.

ಇದೆ ಸಮಯದಲ್ಲಿ ಚಾಮುಲ್ ನಿರ್ದೇಶಕರಾದ ಉದ್ದನೂರು ಪ್ರಸಾದ್,ಗ್ರಾಮ ಪಂಚಾಯತಿಯ ಮಾಜಿಸದಸ್ಯರುಗಳಾದ ಮಾಣಿಕ್ಯ, ಪಳನಿಸ್ವಾಮಿ, ಬಸವಣ್ಣ,ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷತಂಗವೇಲು,ಉಪಾಧ್ಯಕ್ಷರಾದ ಕೃಷಿ ಪತ್ತಿನ ಸಹಕಾರ ಕುಂಜಿಶೆಟ್ಟಿ,ಸಂಘದ ನಿರ್ದೇಶಕರಾದ ನಾಗರಾಜು,

ಭದ್ರಯ್ಯ,ಕೃಷ್ಣ,ಕೃಷ್ಣಶೆಟ್ಟಿ,ಹುಚ್ಚಯ್ಯ,ಮುನಿಯಪ್ಪ,

ಬಸವರಾಜು,ಚಿನ್ನರಾಜ್,ಪಿಜಿ ಮಣಿ,ಚಿನ್ನವೆಂಕಟ್ ಮಹದೇವ್, ಶಿಕ್ಷಕ ವೃಂದದವರು ಹಾಗೂ ಗ್ರಾಮಸ್ಥರು ಇದ್ದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!