ಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿ

ವರ್ಗಾವಣೆ ಮಾರ್ಗಸೂಚಿ ಉಲ್ಲಂಘನೆ ಆರೋಪ!

Share News

🟥 ಕ್ರೈಂ ಬ್ರೇಕಿಂಗ್ ನ್ಯೂಸ್ | ಪೊಲೀಸ್ ವಾರ್ತೆ 🟥

🚨 ವರ್ಗಾವಣೆ ಮಾರ್ಗಸೂಚಿ ಉಲ್ಲಂಘನೆ ಆರೋಪ!

⚠️ ಅಮಾನತುಗೊಂಡ ನೌಕರನಿಗೆ ಸೂಕ್ಷ್ಮ ಹುದ್ದೆ? ಕುಂದಾಪುರ ತಹಸೀಲ್ದಾರ್ ಕಚೇರಿಯಲ್ಲಿ ವಿವಾದ!

ಕುಂದಾಪುರ: ಸರಕಾರಿ ನೌಕರರ ವರ್ಗಾವಣೆ ಕುರಿತು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಇಲಾಖಾ ವಿಚಾರಣೆ ಬಾಕಿ ಇರುವ ನೌಕರನಿಗೆ ಸೂಕ್ಷ್ಮ ಹುದ್ದೆ ನೀಡಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ.

ಕುಂದಾಪುರ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾಂತರಾಜ್ ಎಂಬುವವರು, ಹಿಂದಿನ ಅವಧಿಯಲ್ಲಿ ಹಲವಾರು ಬಾರಿ ಕರ್ತವ್ಯ ಲೋಪ ಎಸಗಿ ಅಮಾನತುಗೊಂಡಿದ್ದು, ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿದ್ದು ಇನ್ನೂ ಬಾಕಿ ಇರುವುದಾಗಿ ತಿಳಿದುಬಂದಿದೆ.

🔍 ಏನು ಆರೋಪ?

👉 ಅಮಾನತು ಮತ್ತು ವಿಚಾರಣೆ ಬಾಕಿಯಿದ್ದರೂ ಪ್ರಮುಖ ಕಡತ ನಿರ್ವಹಣೆಯ ಜವಾಬ್ದಾರಿ

👉 ಗ್ರಾಮ ಲೆಕ್ಕಾಧಿಕಾರಿಯಿಂದ ತಹಸೀಲ್ದಾರ್ ಸಹಾಯಕರ ಹುದ್ದೆಗೆ ನಿಯೋಜನೆ

👉 ಸರ್ಕಾರದ ವರ್ಗಾವಣೆ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆ

👉 ಪ್ರಭಾವಿ ವ್ಯಕ್ತಿಗಳ ಒತ್ತಡದಲ್ಲಿ ಹುದ್ದೆ ಲಾಭ ಪಡೆದ ಆರೋಪ

⚖️ ಗಂಭೀರ ಪ್ರಶ್ನೆಗಳು

❓ ವಿಚಾರಣೆ ಬಾಕಿಯಿದ್ದ ನೌಕರನಿಗೆ ಸೂಕ್ಷ್ಮ ಹುದ್ದೆ ಯಾಕೆ?

❓ 10 ವರ್ಷಗಳಲ್ಲಿ ಎಷ್ಟು ಬಾರಿ ನಿಯೋಜನೆ ಮತ್ತು ಅಮಾನತು?

❓ ಯಾರ ಪ್ರಭಾವದಲ್ಲಿ ನಿಯಮ ಉಲ್ಲಂಘನೆ?

📢 ತನಿಖೆಗೆ ಆಗ್ರಹ

👉 ಕಳೆದ 10 ವರ್ಷಗಳ ಸೇವಾ ದಾಖಲೆಗಳ ಪರಿಶೀಲನೆ

👉 ನಿಯೋಜನೆ ಮತ್ತು ಹುದ್ದೆಗಳ ಸಂಪೂರ್ಣ ಮಾಹಿತಿ ಬಹಿರಂಗಪಡಿಸಲು ಒತ್ತಾಯ

👉 ಭ್ರಷ್ಟಾಚಾರದ ಆರೋಪಗಳ ಬಗ್ಗೆ ಸಮಗ್ರ ತನಿಖೆ.

ಈ ನಿಟ್ಟಿನಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರರಾದ ಉದಯ ದೇವಾಡಿಗ ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್, ತಹಸೀಲ್ದಾರ್ ರವರಿಗೆ ಕಾಂತರಾಜ್ ವಿರುದ್ಧ ದೂರು ನೀಡಿದ್ದಾರೆ.

ವರದಿ : ಕೆ. ಪಿ, ಕುಂದಾಪುರ


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!