About Us

ಪೊಲೀಸ್ ವಾರ್ತೆ ಪತ್ರಿಕೆ ನಮ್ಮ ಪೊಲೀಸ್ ಇಲಾಖೆಯ ಘನತೆ ಮತ್ತು ಶಿಸ್ತನ್ನು ಬಿಂಬಿಸುತ್ತವೆ.ಪೊಲೀಸ್ ಇಲಾಖೆಯ ಕೆಲಸಗಳನ್ನು ಕನ್ನಡಿಯಂತೆ ಪ್ರತಿಫಲಿಸುವ,ಸಮಾಜದ ರಕ್ಷಕರಿಂದ ಬರುವ ಸುದ್ದಿ ಪತ್ರಿಕೆ.ನಿರಂತರ ಸೇವೆಯ ಹಾದಿಯನ್ನು ವಿವರಿಸುವ ನಮ್ಮ ಪ್ರಯತ್ನ. ಕಾನೂನಿನ ಬಗ್ಗೆ ಬೆಳಕು ಚೆಲ್ಲುವ ಸಾರ್ವಜನಿಕರಲ್ಲಿ ಎಚ್ಚರಿಕೆ ಮೂಡಿಸುವ ಉದ್ದೇಶಕ್ಕೆ. ಪೊಲೀಸ್ ಸಿಬ್ಬಂದಿಯ ಕರ್ತವ್ಯ ನಿಷ್ಠೆಯನ್ನು ತೋರಿಸುತ್ತದೆ.ಖಾಕಿ ಉಡುಪಿನ ಹಿಂದಿರುವ ಶಕ್ತಿಯ ಸಂಕೇತ.. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಾಧನೆ, ವರ್ಗಾವಣೆ ಮತ್ತು ಇಲಾಖೆಯ ನಿಯಮಗಳ ಬಗ್ಗೆ ಮಾಹಿತಿ ನೀಡಲು,ಅಪರಾಧ ಲೋಕದ ಸುದ್ದಿಗಳು ಮತ್ತು ಕಾನೂನಿನ ಅರಿವು ಮೂಡಿಸಲು,ಜನರಿಗೆ ನ್ಯಾಯ ಮತ್ತು ಕಾನೂನಿನ ಬಗ್ಗೆ ಬೆಳಕು ನೀಡುವ ಉದ್ದೇಶ. ಸೈಬರ್ ಕ್ರೈಮ್ ಅಥವಾ ಇತರೆ ವಂಚನೆಗಳ ಬಗ್ಗೆ ಜನರನ್ನು ಎಚ್ಚರಿಸಲು ಈ ನಮ್ಮ ಪೊಲೀಸ್ ವಾರ್ತೆ ಪತ್ರಿಕೆ ಸಾಮಾನ್ಯ ಜನರಿಗೂ ಪೋಲಿಸ್ ಇಲಾಖೆಗೂ ನೇರ ಸಂಪರ್ಕ ಕಲ್ಪಿಸುವ ಒಂದು ಮಾರ್ಗವಾಗಿದೆ. ಪಾರದರ್ಶಕತೆಯ ಸುದ್ದಿಗಳನ್ನು ಮಾತ್ರವಲ್ಲದೆ ಸಾಮಾನ್ಯ ಜನರಿಗೂ ಸುದ್ದಿ ಅರ್ಥವಾಗುವ ರೀತಿಯಲ್ಲಿ ನಮ್ಮ ಪೊಲೀಸ್ ವಾರ್ತೆ ಪತ್ರಿಕೆ ಹಾಗೂ ಡಿಜಿಟಲ್ ಮೀಡಿಯಾ ಕಾರ್ಯ ನಿರ್ವಹಿಸುತ್ತದೆ. ಈ ನಮ್ಮ ಪೊಲೀಸ್ ವಾರ್ತೆ ಪತ್ರಿಕೆ ಹಾಗೂ ಡಿಜಿಟಲ್ ಮೀಡಿಯಾ ಪ್ರತಿದಿನ ನಡೆಯುವ ದೇಶ ವಿದೇಶ, ರಾಜ್ಯ ಇತರ ರಾಜ್ಯಗಳ ಸುದ್ದಿಗಳನ್ನು, ಕ್ರೈಂ ಸುದ್ದಿಗಳು, ರಾಜಕೀಯ ಸುದ್ದಿಗಳು, ಸಿನಿಮಾರಂಗದ ಸುದ್ದಿಗಳು ಇನ್ನು ಮುಂದೆ ಪ್ರತಿದಿನ ನಿಮ್ಮ ಮುಂದೆ ಬರಲಿವೆ ನಿಮ್ಮ ಪ್ರೋತ್ಸಾಹ ಬೆಂಬಲ ಸಂಪೂರ್ಣವಾಗಿ ನಮ್ಮ ಪೊಲೀಸ್ ವಾರ್ತೆ ಪತ್ರಿಕೆಗೂ ಹಾಗೂ ಡಿಜಿಟಲ್ ಮೀಡಿಯಾಗೂ ಬೇಕಾಗಿದೆ.

Back to top button
error: Content is protected !!