ಅಂತಾರಾಷ್ಟ್ರೀಯರಾಜಕೀಯರಾಷ್ಟ್ರೀಯ ಸುದ್ದಿ

ಬಾಂಗ್ಲಾದಲ್ಲಿ ತೈಲ ಸಂಕಷ್ಟ: ಭಾರತದ ಸಹಾಯ ಕೋರಿದ ನೆರೆ ರಾಷ್ಟ್ರ

Share News

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಕಾರ್ಮೋಡ ಹಾಗೂ ಜಾಗತಿಕ ತೈಲ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಬಾಂಗ್ಲಾದೇಶ ತೀವ್ರ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಭಾರತದಿಂದ 50,000 ಮೆಟ್ರಿಕ್ ಟನ್ ಹೆಚ್ಚುವರಿ ಡೀಸೆಲ್ ಪೂರೈಸುವಂತೆ ಬಾಂಗ್ಲಾ ಸರ್ಕಾರ ಅಧಿಕೃತವಾಗಿ ಮನವಿ ಮಾಡಿದೆ.

ಹಾರ್ಮುಜ್ ಜಲಸಂಧಿಯ ಭಾಗದಲ್ಲಿ ತೈಲ ಸಾಗಣೆಗೆ ಅಡ್ಡಿಯಾಗಿರುವುದು ಬಾಂಗ್ಲಾದೇಶದ ಇಂಧನ ಭಂಡಾರದ ಮೇಲೆ ನೇರ ಪರಿಣಾಮ ಬೀರಿದೆ.

ಮಾರ್ಚ್‌ನಿಂದ ಜೂನ್‌ ಅವಧಿಯವರೆಗೆ ಒಟ್ಟು 50,000 ಮೆಟ್ರಿಕ್ ಟನ್ ಡೀಸೆಲ್ ನೀಡುವಂತೆ ಕೋರಲಾಗಿದೆ. ಈ ಸಂಬಂಧ ಭಾರತೀಯ ಹೈಕಮಿಷನರ್ ಪ್ರಣಯ್ ವರ್ಮಾ ಮತ್ತು ಬಾಂಗ್ಲಾ ಹಣಕಾಸು ಸಚಿವ ಅಮೀರ್ ಖಾಸ್ರು ನಡುವೆ ಮಾತುಕತೆ ನಡೆದಿದೆ.

ಅಸ್ಸಾಂನ ನುಮಾಲಿಗಢ ಸಂಸ್ಕರಣಾಗಾರದಿಂದ “ಭಾರತ-ಬಾಂಗ್ಲಾದೇಶ ಮೈತ್ರಿ ಪೈಪ್‌ಲೈನ್” ಮೂಲಕ ಈಗಾಗಲೇ ಇಂಧನ ಸರಬರಾಜು ಮಾಡಲಾಗುತ್ತಿದೆ. ಇದರೊಂದಿಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮೂಲಕವೂ ಹೆಚ್ಚುವರಿ ತೈಲ ಪಡೆಯಲು ಸಿದ್ಧತೆ ನಡೆಸಲಾಗಿದೆ.

ದೇಶದಲ್ಲಿ ತೈಲ ಮತ್ತು ವಿದ್ಯುತ್ ಉಳಿತಾಯ ಮಾಡಲು ಬಾಂಗ್ಲಾದೇಶ ಸರ್ಕಾರ ಅನಿವಾರ್ಯವಾಗಿ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಂಡಿದೆ:

ವಿದ್ಯುತ್ ಬಳಕೆ ಕಡಿಮೆ ಮಾಡಲು ವಿಶ್ವವಿದ್ಯಾಲಯಗಳಿಗೆ ತಾತ್ಕಾಲಿಕ ರಜೆ ಘೋಷಿಸಲಾಗಿದೆ.ಇಂಧನ ಉಳಿತಾಯದ ಭಾಗವಾಗಿ ಈದ್ ಹಬ್ಬದ ರಜೆಯನ್ನು ನಿಗದಿತ ಸಮಯಕ್ಕಿಂತ ಮೊದಲೇ ನೀಡಲಾಗಿದೆ.ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಮಾರಾಟದ ಮೇಲೆ ಮಿತಿ ಹೇರಲಾಗಿದ್ದು, ಸಾರ್ವಜನಿಕ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ.

ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಏರಿಳಿತದಿಂದ ಕಂಗಾಲಾಗಿರುವ ಬಾಂಗ್ಲಾದೇಶಕ್ಕೆ ಭಾರತವು ಈಗ ಭರವಸೆಯ ಆಸರೆಯಾಗಿದೆ. ಅಸ್ತಿತ್ವದಲ್ಲಿರುವ ಒಪ್ಪಂದದಂತೆ 90,000 ಮೆಟ್ರಿಕ್ ಟನ್ ಡೀಸೆಲ್ ಪೂರೈಕೆಯ ಜೊತೆಗೆ ಹೆಚ್ಚುವರಿ ಬೇಡಿಕೆಯನ್ನು ಈಡೇರಿಸುವ ಬಗ್ಗೆ ಭಾರತ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆಯಿದೆ.

ವರದಿ :- ಆಂಟೋನಿ ಪತ್ರಕರ್ತ


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!