ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಅನಧಿಕೃತ ಜೆಪಿ ಅಕಾಡೆಮಿ

ಜೆಪಿ ಅಕಾಡೆಮಿ ವಿರುದ್ಧ ಗಂಭೀರ ಆರೋಪಗಳು ಮಾಡಿದ ಸಾಮಾಜಿಕ ಪರಿವರ್ತನೆ ಸಂಘಟನೆ
ಚಿಕ್ಕಬಳ್ಳಾಪುರ :ಜಿಲ್ಲೆಯ ಚಿಂತಾಮಣಿ ನಗರದ ಅಂಜನಿ ಬಡಾವಣೆ ಪ್ರಭಾಕರ್ ಲೇಔಟ್ ಮೋರ್ ಸೂಪರ್ ಮಾರ್ಕೆಟ್ ಎದುರುಗಡೆ ಇರುವ ಎನ್ ಎನ್ ಕೆ ಬಿಲ್ಡಿಂಗ್ ಎರಡನೇ ಮಹಡಿಯಲ್ಲಿ ಜೆಪಿ ಅಕಾಡೆಮಿ ಎಂಬ ಹೆಸರಿನಲ್ಲಿ ಸರ್ಕಾರದಿಂದ ಯಾವುದೇ ಅಧಿಕೃತ ಮಾನ್ಯತೆ ಪಡೆಯದೆ ಶಿಕ್ಷಣ ಇಲಾಖೆಯ ವತಿಯಿಂದಲೂ ಅನುಮತಿ ಪಡೆಯದೆ ಪಿಯು ಕಾಲೇಜನ್ನು ನಡೆಸಲಾಗುತ್ತಿದೆ ಇದರ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಡಿ ಡಿ ಪಿ ಐ ರವರಿಗೆ ದೂರು ನೀಡಿದರು.
ಯಾವುದೇ ಕ್ರಮ ವಹಿಸದೆ ಮೌನವಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಸಾಮಾಜಿಕ ಪರಿವರ್ತನಾ ಸಂಘಟನೆಯ ಜಿಲ್ಲಾಧ್ಯಕ್ಷರಾದ ಎವಿ ವೆಂಕಟರಾಮ, ಜಿಲ್ಲಾ ಕಾರ್ಯದರ್ಶಿ ಮದುಲತಾ,ರೈತ ಸಂಘದ ತಾಲೂಕು ಅಧ್ಯಕ್ಷರಾದ ರವಿಪ್ರಕಾಶ್,ಟಿಪ್ಪು ಸೆಕ್ಯುಲರ್ ಸೇನೆಯ ಜಿಲ್ಲಾಧ್ಯಕ್ಷ ಮೊಹಿಯುದ್ದಿನ್ ಪಾಷಾ ರವರು ಗಂಭೀರ ಆರೋಪ ಮಾಡಿದರು.
ಇಂದು ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರುಗಳು ಈಗಾಗಲೇ ಪ್ರವೇಶ ದಾಖಲಾತಿ ಪ್ರಾರಂಭವಾಗಿದೆ ಎಂದು ನಿಯಮಗಳನ್ನು ಉಲ್ಲಂಸಿ ಜೆಪಿ ಅಕಾಡೆಮಿ ವಂಚನೆ ಮಾಡುತ್ತಿರುವ ಬಗ್ಗೆ ಉಪನಿರ್ದೇಶಕರು ಪದವಿಪೂರ್ವ ಶಿಕ್ಷಣ ಇಲಾಖೆ ರವರಿಗೆ ಮನವಿ ನೀಡಲಾಗಿದೆ.ಆದರೆ ಇದುವರೆಗೂ ಯಾವುದೇ ರೀತಿಯ ಕ್ರಮ ಜರುಗಿಸದೆ ನಿರ್ಲಕ್ಷ ವಹಿಸಿದ್ದಾರೆ ಎಂದು ಹೇಳಿದವರು ನಾವು ಕಚೇರಿಯಲ್ಲಿ ಬಂದು ಖುದ್ದಾಗಿ ವಿಚಾರಿಸಲಾಗಿ ಅಕ್ರಮವಾಗಿ ನಡೆಸುತ್ತಿರುವ ಜೆಪಿ ಅಕಾಡೆಮಿ ಶಿಕ್ಷಣ ಸಂಸ್ಥೆಗೆ ಮೌಖಿಕವಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಉಪ ನಿರ್ದೇಶಕರು ಹಾರಿಕೆಯ ಉತ್ತರ ನೀಡಿದ್ದಾರೆ.
ಇವರ ನಡೆಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲೆ ಅನುಮಾನ ಉಂಟಾಗಿದೆ,ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಕ್ರಮವಾಗಿ ಪಿಯು ಕಾಲೇಜು ಮತ್ತು JEE NEET ಕೋಚಿಂಗ್ ನಡೆಸುತ್ತಿರುವ ಚಿಂತಾಮಣಿ ಜೆಪಿ ಅಕಾಡೆಮಿ ಸಂಸ್ಥೆಯ ಚಟುವಟಿಕೆಗಳನ್ನು ಪರಿಶೀಲಿಸಿ ವಂಚನೆ ನಡೆಯುತ್ತಿರುವ ಬಗ್ಗೆ ಹಾಗೂ ಶಿಕ್ಷಣ ವ್ಯಾಪಾರಿಕರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ವರದಿ:ಕೆ.ಮುತ್ತಕದಹಳ್ಳಿ ವೆಂಕಟಾಚಲಪತಿ ಪೊಲೀಸ್ ವಾರ್ತೆ ಜಿಲ್ಲಾ ವರದಿಗಾರರು ಚಿಕ್ಕಬಳ್ಳಾಪುರ



