ನಾರಾಯಣಹಳ್ಳಿ ಮಾರುತಿ ಕ್ಷೇತ್ರದಲ್ಲಿ ಅದ್ದೂರಿ ಶ್ರೀ ಸೀತಾರಾಮ ಕಲ್ಯಾಣ ಮಹೋತ್ಸವ

ಚಿಕ್ಕಬಳ್ಳಾಪುರ:ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈಲಾಸ ಗಿರಿ ರಸ್ತೆಯಲ್ಲಿರುವ ಶ್ರೀ ಅಭಯ ಆಂಜನೇಯಸ್ವಾಮಿ ಮಾರುತಿ ಕ್ಷೇತ್ರದಲ್ಲಿ ಶ್ರೀರಾಮನವಮಿ ಅಂಗವಾಗಿ ಶ್ರೀ ಸೀತಾರಾಮ ಕಲ್ಯಾಣ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
ಶನಿವಾರದಂದು ಕಳಶ ಸ್ಥಾಪನೆ,ಗಣಪತಿಹೋಮ,ಮೃತ್ಯುಂಜಯ ಹೋಮ,ರಾಮತಾರಕಹೋಮ,ಅಂಜನೇಯಸ್ವಾಮಿಗೆ ಪವನ ಹೋಮ,ನವಗ್ರಹ ಹೋಮ,ಮಹಾಪೂರ್ಣಾಹುತಿ ಹೋಮ ನಡೆಯಿತು.
ಬಾನುವಾರದಂದು ಸ್ವಾಮಿಗೆ ಪಂಚಾಮೃತ ಮಹಾಭಿಷೇಕ, ಏಕಾದಶವಾರ ರುದ್ರಾಭಿಷೇಕ ಹಾಗೂ ಲೋಕಕಲ್ಯಾಣಾರ್ಥಕಾಗಿ ವೇದ ಪಂಡಿತರಿಂದ ಸೀತಾರಾಮ ಕಲ್ಯಾಣೋತ್ಸವ ಅದ್ದೂರಿಯಾಗಿ ನಡೆಸಲಾಯಿತು,ಮಂತ್ರ ಪುಷ್ಪ ಅಷ್ಟಾವಧಾನ ಸೇವೆ ಮಹಾಮಂಗಳಾರತಿ ಸ್ವಾಮಿಗೆ ನೆರವೇರಿಸಲಾಯಿತು. ನಂತರ ತೀರ್ಥ ಪ್ರಸಾದ ವಿನಯೋಗಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಾಲಯದ ಪ್ರಧಾನ ಅರ್ಚಕ ಮಂಜುನಾಥ್ ಶರ್ಮ, ವೇದಬ್ರಹ್ಮ ಶ್ರೀಕಂಠ ಶಾಸ್ತ್ರಿಗಳು ಮತ್ತು ಮಕ್ಕಳು, ಸುರೇಶ್ ಶರ್ಮ,ನಾಗೇಶ್ ಶರ್ಮ ಸೇರಿದಂತೆ ಹಲವಾರು ಪುರೋಹಿತರು,ಭಕ್ತಾಧಿಗಳು ಭಗವಂತನ ದರ್ಶನ ಪಡೆದು ಧನ್ಯರಾದರು.
ವರದಿ:ಕೆ.ಮುತ್ತಕದಹಳ್ಳಿ ವೆಂಕಟಾಚಲಪತಿ ಪೊಲೀಸ್ ವಾರ್ತೆ ಜಿಲ್ಲಾ ವರದಿಗಾರರು ಚಿಕ್ಕಬಳ್ಳಾಪುರ



