ಜಿಲ್ಲಾ ಸುದ್ದಿಕ್ರೈಂ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಸ್ವಾಮೀಜಿಗೆ ಹೆಣ್ಣಿನ ಶೋಕಿ — ಮಠಕ್ಕೆ ನುಗ್ಗಿ ವೆಂಕಟೇಶ‌ ತಾತನಿಗೆ ಹಿಗ್ಗಾಮುಗ್ಗ ಥಳಿಸಿದ ಮಹಿಳೆ ಸಂಬಂಧಿಕರು!

Share News

ಚಿತ್ರದುರ್ಗ: ಸಮಾಜಕ್ಕೆ ಸನ್ಮಾರ್ಗ ತೋರಬೇಕಾದ ಸ್ವಾಮೀಜಿಯೊಬ್ಬರು ಕಾಮದ ಆಸೆಗೆ ಬಿದ್ದು, ಮಹಿಳೆ ಹಾಗೂ ಆಕೆಯ ಮಗಳೊಂದಿಗೆ ಅನುಚಿತವಾಗಿ ವರ್ತಿಸಿ ಸಾರ್ವಜನಿಕರ ಕೈಯಲ್ಲಿ ಹಿಗ್ಗಾಮುಗ್ಗ ಪೆಟ್ಟು ತಿಂದಿರುವ ರೋಚಕ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

​ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ತಮ್ಮೇನಹಳ್ಳಿ‌ ಗ್ರಾಮದಲ್ಲಿರುವ ಪ್ರಸಿದ್ಧ ಜಂಭಣ್ಣ ತಾತನ ಮಠಕ್ಕೆ ಅಪಾರ ಸಂಖ್ಯೆಯ ಭಕ್ತರಿದ್ದಾರೆ. ಆದರೆ, ಈ ಮಠದಲ್ಲಿದ್ದುಕೊಂಡು ಸ್ವಾಮೀಜಿ ಸೋಗಿನಲ್ಲಿದ್ದ ವೆಂಕಟೇಶ‌ ತಾತ ಎಂಬಾತ, ಆಂಧ್ರಪ್ರದೇಶ ಮೂಲದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಲ್ಲದೆ, ಆಕೆಯ ಮಗಳ ಮೇಲೆಯೂ ಕಣ್ಣಾಕಿ ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ.

​ಸಿನಿಮಾ ಸ್ಟೈಲ್‌ನಲ್ಲಿ ಮಠದಿಂದ ಎತ್ತಿ ಕೊಯ್ದ ಸಂಬಂಧಿಕರು!

​ಸ್ವಾಮೀಜಿಯ ಈ ಕಾಮುಕ ಪ್ರವೃತ್ತಿಯಿಂದ ತೀವ್ರ ರೊಚ್ಚಿಗೆದ್ದ ಮಹಿಳೆಯ ಸಂಬಂಧಿಕರು, ಮಠಕ್ಕೆ ನುಗ್ಗಿ ವೆಂಕಟೇಶ‌ ತಾತನನ್ನು ಸಿನಿಮಾ ಸ್ಟೈಲ್‌ನಲ್ಲಿ ಕೈಕಾಲು ಹಿಡಿದು ಬಲವಂತವಾಗಿ ಕಾರಿನಲ್ಲಿ ಎತ್ತಿಕೊಂಡು ಹೋಗಿದ್ದಾರೆ. ಬಳಿಕ ಆತನಿಗೆ ಧರ್ಮದೇಟು ನೀಡಿ ಸರಿಯಾಗಿಯೇ ಶಾಸ್ತಿ ಮಾಡಿದ್ದಾರೆ. ಈ ಇಡೀ ಭೀಕರ ದೃಶ್ಯಾವಳಿಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

​ಖಾವಿಯ ಘನತೆಗೆ ಕಪ್ಪುಚುಕ್ಕೆ:

​ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಜನರನ್ನು ಸನ್ಮಾರ್ಗಕ್ಕೆ ತರಬೇಕಾದ ವ್ಯಕ್ತಿಗಳೇ ಇಂತಹ ನೀಚ ಕೃತ್ಯಕ್ಕೆ ಇಳಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಖಾವಿ ಉಟ್ಟು ಜನರ ನಂಬಿಕೆ ಮತ್ತು ಭಾವನೆಗಳ ಜೊತೆ ಚೆಲ್ಲಾಟವಾಡುವ ಬದಲು, ಸಾಂಸಾರಿಕ ಜೀವನ ನಡೆಸಬಾರದಿತ್ತೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಕೇಳಿಬರುತ್ತಿವೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!