ಉಪಯುಕ್ತ ಮಾಹಿತಿಗಳುಉದ್ಯೋಗ ವಾರ್ತೆಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

47 ಹೊರಗುತ್ತಿಗೆ ನೌಕರರಿಗೆ ‘ನೇರಪಾವತಿ’ ಆದೇಶ ಪ್ರತಿ ವಿತರಿಸಿದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ

Share News

ಯಾದಗಿರಿ: ನಗರದ ಸೌಂದರ್ಯೀಕರಣ ಹಾಗೂ ನೈರ್ಮಲ್ಯಕ್ಕಾಗಿ ಶ್ರಮಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ನೇರಪಾವತಿ ವ್ಯವಸ್ಥೆ ಕಲ್ಪಿಸುವ ಮೂಲಕ ಸರ್ಕಾರ ಸಿಹಿ ಸುದ್ದಿ ನೀಡಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ತಿಳಿಸಿದರು.

​ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 47 ಹೊರಗುತ್ತಿಗೆ ನೌಕರರಿಗೆ ನೇರಪಾವತಿಯ ಅಧಿಕೃತ ಆದೇಶದ ಪ್ರತಿಗಳನ್ನು ವಿತರಿಸಿ ಅವರು ಮಾತನಾಡಿದರು.

​ವೇತನ ಸಮಸ್ಯೆಗೆ ಶಾಶ್ವತ ಪರಿಹಾರ:

ಹಗಲಿರುಳು ನಗರದ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಈ ಹಿಂದೆ ಎನ್‌ಜಿಒ (NGO) ಸಂಸ್ಥೆಗಳ ಮೂಲಕ ವೇತನ ಪಾವತಿಯಾಗುತ್ತಿತ್ತು. ಇದರಿಂದ ಸಮಯಕ್ಕೆ ಸರಿಯಾಗಿ ಸಂಬಳ ಸಿಗದೆ ನೌಕರರು ತೀವ್ರ ಸಂಕಷ್ಟ ಅನುಭವಿಸುವಂತಾಗಿತ್ತು. ಇದೀಗ ಸರ್ಕಾರ ನೇರಪಾವತಿ ಆದೇಶ ಜಾರಿಗೆ ತಂದಿರುವುದರಿಂದ ನೌಕರರ ದೀರ್ಘಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ ಎಂದ ಶಾಸಕರು, ನೌಕರರು ಇನ್ನಷ್ಟು ನಿಷ್ಠೆಯಿಂದ ನಗರದ ಸೌಂದರ್ಯೀಕರಣಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು.

​ನಗರಸಭೆ ಆಯುಕ್ತರ ಶ್ಲಾಘನೆ:

ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ ಮಾತನಾಡಿ, ನಗರಸಭೆಯ ಯಾವುದೇ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರೂ ಅವರು ತಕ್ಷಣ ಸ್ಪಂದಿಸಿ ಪರಿಹಾರ ಒದಗಿಸುತ್ತಾರೆ. ಶಾಸಕರ ಈ ಸಹಕಾರದಿಂದ ನಗರಸಭೆ ಸಿಬ್ಬಂದಿಗೆ ಕೆಲಸ ಮಾಡಲು ಹೆಚ್ಚಿನ ಉತ್ಸಾಹ ಮೂಡಿದೆ ಎಂದರು.

​ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪ್ರಶಾಂತ್ ಸೂರ್ಯವಂಶಿ, ಮುಖಂಡರಾದ ಸಾಯಬಣ್ಣ ಕೆಂಗೂರಿ, ಮಲ್ಲಿಕಾರ್ಜುನ ಈಟೆ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!