ರಾಷ್ಟ್ರೀಯ ಸುದ್ದಿCrime News

ಪುಣೆ: ‘ನಾನು ಶಿವ, ನೀನೇ ಪಾರ್ವತಿ’ ಎಂದು ನಂಬಿಸಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ; ಕಾಮುಕ ಜ್ಯೋತಿಷಿಯ ಬಂಧನ

Share News

ಪುಣೆ: ತಾನು ಸಾಕ್ಷಾತ್ ಶಿವನ ಅವತಾರ ಎಂದು ನಂಬಿಸಿ, ಜ್ಯೋತಿಷ್ಯದ ಹೆಸರಿನಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸ್ವಘೋಷಿತ ದೇವಮಾನವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪಾಲ್ಸರ್ ಮೂಲದ ಋಷಿಕೇಶ್ ವೈದ್ಯ ಎಂದು ಗುರುತಿಸಲಾಗಿದೆ.

ಪುಣೆ ನಿವಾಸಿಯಾಗಿರುವ 35 ವರ್ಷದ ಸಂತ್ರಸ್ತ ಮಹಿಳೆಗೆ 2023ರಲ್ಲಿ ಫೇಸ್‌ಬುಕ್ ಮೂಲಕ ಋಷಿಕೇಶ್ ಪರಿಚಯವಾಗಿದ್ದನು. ಈ ಸ್ನೇಹದ ಲಾಭ ಪಡೆದ ಆರೋಪಿಯು, ಡಿಸೆಂಬರ್ 2023ರಲ್ಲಿ ಪುಣೆಯಲ್ಲಿ ಮೊದಲ ಬಾರಿಗೆ ಮಹಿಳೆಯನ್ನು ಭೇಟಿಯಾಗಿದ್ದನು. ಜ್ಯೋತಿಷ್ಯದ ಮಾತುಗಳಿಂದ ಮಹಿಳೆಯನ್ನು ನಂಬಿಸಿದ್ದ ಈತ, ತಾನು ಶಿವನ ಅವತಾರವೆಂದು ಬಿಂಬಿಸಿಕೊಂಡಿದ್ದನು.

ನೀನು ಪೂರ್ವ ಜನ್ಮದಲ್ಲಿ ನನ್ನ ಪತ್ನಿಯಾಗಿದ್ದೆ, ಈ ಜನ್ಮದಲ್ಲೂ ನೀನೇ ನನ್ನ ಪಾರ್ವತಿ” ಎಂದು ಮಹಿಳೆಯನ್ನು ನಂಬಿಸಿದ ಆರೋಪಿ, ಪೂಜೆ ಮತ್ತು ಆಧ್ಯಾತ್ಮದ ನೆಪದಲ್ಲಿ ಆಕೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ದೌರ್ಜನ್ಯ ಎಸಗುವ ವೇಳೆ ಮಹಿಳೆಗೆ ತಿಳಿಯದಂತೆ ಆರೋಪಿ ತನ್ನ ಮೊಬೈಲ್‌ನಲ್ಲಿ ನಗ್ನ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದನು. ಬಳಿಕ ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಬ್ಲ್ಯಾಕ್‌ಮೇಲ್ ತಂತ್ರ ಶುರು ಮಾಡಿದ್ದನು. ವಿಡಿಯೋ ಇಟ್ಟುಕೊಂಡು ಪದೇ ಪದೇ ಕಿರುಕುಳ ನೀಡುತ್ತಿದ್ದ ಕಾಮುಕನ ಕಾಟ ತಾಳಲಾರದೆ ಮಹಿಳೆ ಅಂತಿಮವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

​ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ದೇವಮಾನವರ ಹೆಸರಿನಲ್ಲಿ ನಡೆಯುವ ಇಂತಹ ವಂಚನೆಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!