ಶಾಸಕ ಎ.ಎಸ್. ಪೊನ್ನಣ್ಣನವರಿಗೆ ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದಿಂದ ಸನ್ಮಾನ

ವಿರಾಜಪೇಟೆ: ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ (ಸಂಪುಟ ದರ್ಜೆ ಸ್ಥಾನಮಾನದೊಂದಿಗೆ) ನೇಮಕಗೊಂಡಿರುವ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ‘ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟ’ದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ, ಅಭಿನಂದಿಸಲಾಯಿತು.
ಒಕ್ಕೂಟದ ಅಧ್ಯಕ್ಷರಾದ ಪಡಿಜ್ಞರಂಡ ಜಿ. ಅಯ್ಯಪ್ಪ (ವಕೀಲರು) ಅವರ ನೇತೃತ್ವದಲ್ಲಿ ಶಾಸಕರನ್ನು ಭೇಟಿ ಮಾಡಿದ ನಿಯೋಗವು, ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿತು. ಇದೇ ಸಂದರ್ಭದಲ್ಲಿ ಕೊಡವ ಭಾಷೆ ಮಾತನಾಡುವ 21 ಸಮುದಾಯಗಳಿಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳು ಹಾಗೂ ಬೇಡಿಕೆಗಳ ಕುರಿತು ಶಾಸಕರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಯಿತು.
ನಿಯೋಗದಲ್ಲಿದ್ದ ಪ್ರಮುಖರು:
ಈ ಅಭಿನಂದನಾ ನಿಯೋಗದಲ್ಲಿ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಕೊರಕುಟೀರ ಸರ ಚಂಗಪ್ಪ, ಉಪಾಧ್ಯಕ್ಷ ಕುಡಿಯರ ಮುತಪ್ಪ, ಪ್ರಧಾನ ಕಾರ್ಯದರ್ಶಿ ಮೊಳ್ಳೆಕುಟ್ಟಂಡ ದಿನು ಭೋಜಪ್ಪ, ಸಹ ಕಾರ್ಯದರ್ಶಿ ತಟ್ಟಂಡ ರಾಜ ಜೋಯಪ್ಪ, ಹಾಗೂ ನಿರ್ದೇಶಕರಾದ ನಾಯಂದೀರ ಶಿವಾಜಿ, ಭೀಮಚ್ಚಂಡ ಬೆಳ್ಳಿಯ್ಯಪ್ಪ ಮತ್ತು ಚೆಲ್ಲಿಯಂಡ ಪ್ರಣೀತ್ ಉಪಸ್ಥಿತರಿದ್ದರು.



