ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಬೋನಾಲ ಹಬ್ಬ ಆಚರಿಸಿ ಟೀಕೆಗೆ ಗುರಿಯಾದ ನಟಿ ಫಾರಿಯಾ ಅಬ್ದುಲ್ಲಾ: ಜಾಲತಾಣದಲ್ಲಿ ಕಣ್ಣೀರಿಟ್ಟ ನಟಿ

Share News

ಹಿಂದೂಗಳ ಪವಿತ್ರ ಬೋನಾಲ ಹಬ್ಬದಲ್ಲಿ ಭಾಗವಹಿಸಿ, ಕಳಶ ಹೊತ್ತು ಸಂಭ್ರಮಿಸಿದ್ದಕ್ಕಾಗಿ ಖ್ಯಾತ ನಟಿ ಫಾರಿಯಾ ಅಬ್ದುಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಹಾಗೂ ನಿಂದನೆಗೆ ಗುರಿಯಾಗಿದ್ದಾರೆ.

​ಬೋನಾಲ ಹಬ್ಬದ ಸಂಭ್ರಮದ ವೇಳೆ ಪೋತಾಲರಾಜುಗಳೊಂದಿಗೆ ನಟಿ ಫಾರಿಯಾ ನೃತ್ಯ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಕೆಲ ಕಿಡಿಗೇಡಿಗಳು ಅವರನ್ನು ‘ಕಾಫಿರ್’ ಎಂದು ಕಟುವಾಗಿ ಟೀಕಿಸಿದ್ದರು. ಈ ನಿಂದನೆಗಳಿಂದ ತೀವ್ರ ಮನನೊಂದ ನಟಿ, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಕಣ್ಣೀರಿಡುತ್ತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

​ಪ್ರತಿಯೊಬ್ಬರಲ್ಲೂ ದೇವರನ್ನು ಕಾಣುವೆ – ಫಾರಿಯಾ ಭಾವುಕ:

“ನನ್ನ ತಂದೆ ಇಸ್ಲಾಂ ಧರ್ಮವನ್ನು ಇಷ್ಟಪಟ್ಟು ಮತಾಂತರವಾದವರು. ಅವರು ಇಸ್ಲಾಂನಲ್ಲಿರುವ ಒಳ್ಳೆಯ ವಿಚಾರಗಳನ್ನೇ ನಮಗೆ ಕಲಿಸಿದ್ದಾರೆ. ನಾನು ಕೂಡ ಧರ್ಮದಲ್ಲಿ ಸದಾ ಒಳ್ಳೆಯದನ್ನೇ ನೋಡಿದ್ದೇನೆ. ನನಗೆ ‘ಅಲ್ಲಾಹ್’ ಎಂದರೆ ಬೆಳಕು ಎಂಬುದು ಗೊತ್ತು. ಎಲ್ಲವನ್ನೂ ಒಗ್ಗೂಡಿಸುವ ಆ ಬೆಳಕನ್ನು ನೀವು ಹೇಗೆ ಸಂಕುಚಿತಗೊಳಿಸುತ್ತೀರಿ?” ಎಂದು ಫಾರಿಯಾ ಪ್ರಶ್ನಿಸಿದ್ದಾರೆ.

​”ನಾನು ಪ್ರೀತಿ, ಒಗ್ಗಟ್ಟು ಮತ್ತು ಶಾಂತಿಗಾಗಿ ಪ್ರಾರ್ಥಿಸುತ್ತೇನೆ. ನನ್ನನ್ನು ದ್ವೇಷಿಸುವವರಿಗೂ ನಾನು ಪ್ರೀತಿಯನ್ನೇ ಹಂಚುತ್ತೇನೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ದೇವರನ್ನು ಕಾಣಬೇಕು ಎಂಬುದು ನನ್ನ ನಂಬಿಕೆ,” ಎಂದು ನಟಿ ಭಾವುಕರಾಗಿ ಹೇಳಿದ್ದಾರೆ.

​ಧರ್ಮದ ಹೆಸರಿನಲ್ಲಿ ದ್ವೇಷ ಹರಡುವುದಕ್ಕಿಂತ ಪರಸ್ಪರ ಗೌರವ, ಪ್ರೀತಿ ಮತ್ತು ಸಹಬಾಳ್ವೆ ಮುಖ್ಯ ಎಂಬ ನಟಿ ಫಾರಿಯಾ ಅಬ್ದುಲ್ಲಾ ಅವರ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಹಾಗೂ ಅನೇಕರ ಬೆಂಬಲಕ್ಕೆ ಕಾರಣವಾಗಿವೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!