ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಬಯಲಾಟ ಇಂದು ಭರವಸೆಯ ಆಶಾಕಿರಣ – ಬಿ. ಪರಶುರಾಮ

Share News

ಹರಪನಹಳ್ಳಿ: ಪೌರಾಣಿಕ, ಐತಿಹಾಸಿಕ ನಾಟಕ ಹಾಗೂ ಬಯಲಾಟಗಳ ಯುಗಾಂತ್ಯವಾಯಿತು ಎನ್ನುವ ಕಾಲಘಟ್ಟದಲ್ಲಿ, ಬಯಲಾಟವು ಇಂದಿಗೂ ಹೊಸ ಭರವಸೆ ಹಾಗೂ ಆಶಾಕಿರಣವನ್ನು ಮೂಡಿಸುತ್ತದೆ ಎಂದು ‘ಸಮಸ್ತರು’ ಸಂಘದ ಬಿ. ಪರಶುರಾಮ ಹೇಳಿದರು.

​ನಗರದ ಆದರ್ಶ ಮಹಿಳಾ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ, ದಿ. ಶ್ರೀಮತಿ ದೇವಿರಮ್ಮ ಆಪ್ತ ರಂಗಚಾವಡಿಯಲ್ಲಿ ಆಯೋಜಿಸಲಾಗಿದ್ದ ಡಾ. ರಾಜಪ್ಪ ದಳವಾಯಿ ವಿರಚಿತ ‘ಕುಲಂ ಕುಲಮಲ್ತು’ ನಾಟಕ ಆಧಾರಿತ ‘ಕರ್ಣನ ಅವಾಸನ’ ಬಯಲಾಟ ಪ್ರಸಂಗದ ರಂಗ ಪ್ರದರ್ಶನದಲ್ಲಿ ಅವರು ಮಾತನಾಡಿದರು.

​ಕರ್ಣನ ಪಾತ್ರದ ಹಿರಿಮೆ:

“ಮಹಾಭಾರತದಲ್ಲಿ ಕೃಷ್ಣನಷ್ಟೇ ಕರ್ಣನ ಪಾತ್ರವೂ ಪ್ರಶಂಸೆಗೆ ಪಾತ್ರವಾಗಿದೆ. ಆದಿಕವಿ ಪಂಪ, ರನ್ನ ಮತ್ತು ಕುಮಾರವ್ಯಾಸರು ಕರ್ಣನ ಪಾತ್ರವನ್ನು ಮನದಣಿಯುವಂತೆ ವರ್ಣಿಸಿದ್ದಾರೆ” ಎಂದು ಪರಶುರಾಮ ನೆನಪಿಸಿಕೊಂಡರು. ಡಾ. ರಾಜಪ್ಪ ದಳವಾಯಿ ಅವರ ನಾಟಕವನ್ನು ಆಧಾರವಾಗಿಟ್ಟುಕೊಂಡು ಬಿ. ಪರಶುರಾಮ ಅವರು ಸಂಕ್ಷಿಪ್ತವಾಗಿ ರೂಪಿಸಿದ ‘ಕರ್ಣನ ಅವಾಸನ’ ಬಯಲಾಟ ಪ್ರಸಂಗವು ಒಂದು ಗಂಟೆಯ ಪ್ರದರ್ಶನದಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

​ಮಹಿಳೆಯರೇ ಅಭಿನಯಿಸಿದ ವಿಶಿಷ್ಟ ಪ್ರಯೋಗ:

ಈ ನಾಟಕದಲ್ಲಿ ಕರ್ಣ ಮತ್ತು ಸಾರಥಿ ಪಾತ್ರಗಳನ್ನು ಹೊರತುಪಡಿಸಿ, ಉಳಿದೆಲ್ಲ ಪ್ರಮುಖ ಪಾತ್ರಗಳನ್ನು ಯುವತಿಯರೇ ನಿರ್ವಹಿಸಿ ‘ಸ್ತ್ರೀ ನಾಟಕ ಮಂಡಳಿ’ಯ ರೀತಿಯಲ್ಲಿ ವಿಶಿಷ್ಟವಾಗಿ ಮೂಡಿಬಂದಿರುವುದು ವಿಶೇಷವಾಗಿತ್ತು.

​ಅಭಿನಯಿಸಿದ ಕಲಾವಿದರು:

​ಕರ್ಣ: ಆರ್.ಬಿ. ಬಸವಕುಮಾರ್ (ಅಭಿಜಾತ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದರು)

​ಕುಂತಿ: ಮಮತಾ ವೈ. ಪಾಟೀಲ್

​ಕೃಷ್ಣ: ಕೆ.ವಿ. ಅನು

​ಭೀಷ್ಮ: ಮೀನಾಕ್ಷಿ

​ದುರ್ಯೋಧನ: ಮೀನಾ

​ಗಣನಾಯಕ: ನಾಗರತ್ನ

​ಅರ್ಜುನ ಹಾಗೂ ನೃತ್ಯಗಾರ್ತಿ: ಕೆ.ಆರ್. ಆಶಾ

​ಭಾಗವತರಾಗಿ ಬಸವರಾಜ್ ಶಿಗ್ಗಾಂವ, ಪಕ್ಕೀರೇಶ್ ಕೊಂಡಯಿ, ಚಂದ್ರಶೇಖರ್ ಗುರುವಯ್ಯ, ಮೌನೇಶ್ವರ ಭಜಂತ್ರಿ, ಎಂ. ಮಾರುತಿ ಹಾಗೂ ಪಿ. ಅಂಜಿನಪ್ಪ ಗುಂಡಗತ್ತಿ ಸಾಥ್ ನೀಡಿದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!