ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಸರ್ಕಾರಿ ಸಿಇಟಿ ತರಬೇತಿ ಯೋಜನೆಗೆ ಸೊಪ್ಪಿನ ಕಾಳಮ್ಮನವರ ಬಾಲಕಿಯರ ಪಿಯು ಕಾಲೇಜು ಆಯ್ಕೆ

Share News

ಹೂವಿನಹಡಗಲಿ: ಸರ್ಕಾರಿ ಪದವಿಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಹಾಗೂ ಗುಣಮಟ್ಟದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಸಿಇಟಿ ತರಬೇತಿ ಯೋಜನೆ’ಗೆ ಪಟ್ಟಣದ ಸೊಪ್ಪಿನ ಕಾಳಮ್ಮನವರ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು (ಎಸ್.ಕೆ.ಜಿ.ಜಿ) ಆಯ್ಕೆಯಾಗಿದೆ.

​ರಾಜ್ಯಾದ್ಯಂತ ಆಯ್ಕೆಯಾದ 200 ಸರ್ಕಾರಿ ಕಾಲೇಜುಗಳಲ್ಲಿ ಈ ಕಾಲೇಜೂ ಒಂದಾಗಿದ್ದು, 2026–27ನೇ ಸಾಲಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನಿಯಮಿತ ಪಾಠಗಳ ಜೊತೆಗೆ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ (CET/NEET) ಏಕೀಕೃತ ತರಬೇತಿ ನೀಡಲಾಗುವುದು ಎಂದು ಪ್ರಾಚಾರ್ಯ ಕೊಟ್ರಗೌಡ ಅಯ್ಯನಗೌಡ್ರ ತಿಳಿಸಿದ್ದಾರೆ.

​ಯೋಜನೆಯ ಪ್ರಮುಖ ಮುಖ್ಯಾಂಶಗಳು:

​ಅನುದಾನ ಹಾಗೂ ಅನುಷ್ಠಾನ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಈ ಯೋಜನೆಗೆ ಸಮಗ್ರ ಶಿಕ್ಷಣ ಕರ್ನಾಟಕ (SSK) ಅಡಿಯಲ್ಲಿ ₹3.94 ಕೋಟಿ ಅನುದಾನ ಮಂಜೂರಾಗಿದೆ.

​ಭೌತಿಕ ತರಗತಿಗಳು: ಉಪನ್ಯಾಸಕರೊಂದಿಗೆ ನೇರ ಸಂವಾದ, ಸಂದೇಹ ನಿವಾರಣೆ ಹಾಗೂ ಪ್ರಶ್ನೆ ಎದುರಿಸುವ ಕೌಶಲ ಬೆಳೆಸಲು ಭೌತಿಕ ತರಗತಿಗಳು ನಡೆಯಲಿವೆ.

​ನಿರಂತರ ಮೌಲ್ಯಮಾಪನ: ಪ್ರತಿ ವಾರಾಂತ್ಯ ಕಿರುಪರೀಕ್ಷೆ ಹಾಗೂ ಪ್ರತಿ ತಿಂಗಳ ಅಂತ್ಯದಲ್ಲಿ ಮಾದರಿ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಪರಿಶೀಲಿಸಲಾಗುತ್ತದೆ.

​20 ದಿನಗಳ ಕ್ರ್ಯಾಶ್ ಕೋರ್ಸ್: ವಾರ್ಷಿಕ ಪರೀಕ್ಷೆಯ ನಂತರ ಪ್ರತಿದಿನ 6 ಗಂಟೆಗಳ ಕಾಲ ವಿಶೇಷ ತರಬೇತಿ ನೀಡಲಾಗುತ್ತದೆ.

​ಉಪನ್ಯಾಸಕರಿಗೆ ತರಬೇತಿ: DSERT ಮತ್ತು DIET ಮೂಲಕ ತರಬೇತಿ ಪಡೆದಿದ್ದು, ಎಸ್.ಕೆ.ಜಿ.ಜಿ ಕಾಲೇಜಿನ ನಾಲ್ವರು ವಿಷಯ ಉಪನ್ಯಾಸಕರು ಜಿಲ್ಲಾ ಮಟ್ಟದ ತರಬೇತಿ ಪೂರ್ಣಗೊಳಿಸಿದ್ದಾರೆ.

​”ದುಬಾರಿ ಖಾಸಗಿ ಕೋಚಿಂಗ್‌ಗೆ ಹೋಗಲಾಗದ ಸರ್ಕಾರಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಬಾಗಿಲು ತೆರೆಯುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ” ಎಂದು ಪ್ರಾಚಾರ್ಯರು ಅಭಿಪ್ರಾಯಪಟ್ಟಿದ್ದಾರೆ.

​ಈ ಸಂದರ್ಭದಲ್ಲಿ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಶಿವಕುಮಾರ್, ನಟರಾಜ್ ಪಾಟೀಲ್, ಶ್ರೀಕಾಂತ್ ಬಂಡಿಹಾಳ್ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!