ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುರಾಜ್ಯ ಸುದ್ದಿ

ಬೀದರ್‌ನ ಹೆಡ್‌ ಕಾನ್‌ಸ್ಟೆಬಲ್ ಸಂತೋಷ್‌ ಮಹಾರಾಜ ಅವರಿಗೆ ‘ಮುಖ್ಯಮಂತ್ರಿ ಪದಕ’ ಗೌರವ

Share News

ಬೀದರ್ ಜಿಲ್ಲಾ ಪೊಲೀಸ್‌ ಇಲಾಖೆಯ ಗುಪ್ತಚರ‌ ವಿಭಾಗದ ಹೆಡ್‌ ಕಾನ್‌ಸ್ಟೆಬಲ್ ಸಂತೋಷ ಮಹಾರಾಜ ಅವರು 2025ನೇ ಸಾಲಿನ ಪೊಲೀಸ್‌ ಇಲಾಖೆಯ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾದರು.

ಬೆಂಗಳೂರಿನ ಕೊರಮಂಗಲದ ಕೆಎಸ್‌ಆರ್‌ಪಿ ಪರೆಡ್ ಮೈದಾನದಲ್ಲಿ ಏ.2ರಂದು ನಡೆದ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಮಂತ್ರಿ ಜಿ.ಪರಮೇಶ್ವರ ಅವರು ಪದಕ ನೀಡಿ ಗೌರವಿಸಿದರು.

2002ರಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆಗೆ ಸೇರಿದ್ದ ಸಂತೋಷ ಎಂ. ಅವರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಜಟಿಲ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸದ್ಯ ಜಿಲ್ಲಾ ಗುಪ್ತ ವಿಭಾಗದಲ್ಲಿ ಹೆಡ್‌ ಕಾನ್‌ಸ್ಟೆಬಲ್ ಆಗಿ ಉತ್ತಮ ಕಾರ್ಯಕ್ಷಮತೆಯೊಂದಿಗೆ ಸೇವೆ ಸಲ್ಲಿಸುತ್ತಿದ್ದಾರೆ.

ಹೆಡ್‌ ಕಾನ್‌ಸ್ಟೆಬಲ್ ಸಂತೋಷ ಎಂ. ಅವರ ಈ ಸಾಧನೆಗೆ ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!