ಟ್ರೆಂಡಿಂಗ್ ಸುದ್ದಿಗಳುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ನಟ ರಕ್ಷಿತ್ ಶೆಟ್ಟಿಗೆ 25 ಲಕ್ಷ ರೂ. ದಂಡ: ಕಾಪಿರೈಟ್ ಉಲ್ಲಂಘನೆ ಪ್ರಕರಣದಲ್ಲಿ ಹೈಕೋರ್ಟ್ ಬಿಗ್ ಶಾಕ್!

Share News

ನವದೆಹಲಿ: ಸ್ಯಾಂಡಲ್‌ವುಡ್‌ನ ಖ್ಯಾತ ನಟ ರಕ್ಷಿತ್ ಶೆಟ್ಟಿ ಒಡೆತನದ ‘ಪರಂವಾ ಸ್ಟುಡಿಯೋಸ್’ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಅನುಮತಿ ಇಲ್ಲದೆ ಹಾಡುಗಳನ್ನು ಬಳಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, 25 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ‘ನ್ಯಾಯ ಎಲ್ಲಿದೆ’ ಮತ್ತು ‘ಒಮ್ಮೆ ನಿನ್ನನ್ನು’ ಎಂಬ ಎರಡು ಹಳೆಯ ಜನಪ್ರಿಯ ಹಾಡುಗಳನ್ನು ಬಳಸಿಕೊಳ್ಳಲಾಗಿತ್ತು. ಈ ಹಾಡುಗಳ ಹಕ್ಕುಸ್ವಾಮ್ಯ ಹೊಂದಿರುವ ಎಂ.ಆರ್.ಟಿ. ಮ್ಯೂಸಿಕ್ (MRT Music) ಸಂಸ್ಥೆಯು, ತಮ್ಮ ಅನುಮತಿ ಇಲ್ಲದೆ ವಾಣಿಜ್ಯ ಉದ್ದೇಶಕ್ಕಾಗಿ ಹಾಡುಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿತ್ತು. 2020ರ ಒಪ್ಪಂದದ ಪ್ರಕಾರ ಈ ಹಾಡುಗಳ ಸಂಪೂರ್ಣ ಮಾಲೀಕತ್ವ ತಮ್ಮದಾಗಿದೆ ಎಂದು ಸಂಸ್ಥೆ ವಾದಿಸಿತ್ತು.

ವಿಚಾರಣೆಯ ವೇಳೆ ಪರಂವಾ ಸ್ಟುಡಿಯೋಸ್ ಪರ ವಕೀಲರು ಸಮರ್ಥನೆ ನೀಡುತ್ತಾ, “ನ್ಯಾಯ ಎಲ್ಲಿದೆ” ಹಾಡನ್ನು ಕೇವಲ 7 ಸೆಕೆಂಡ್ ಹಾಗೂ “ಒಮ್ಮೆ ನಿನ್ನನ್ನು” ಹಾಡನ್ನು ಕೇವಲ 31 ಸೆಕೆಂಡ್ ಮಾತ್ರ ಬಳಸಲಾಗಿದೆ. ಇದು ಅತಿ ಕಡಿಮೆ ಅವಧಿಯ ಬಳಕೆಯಾಗಿರುವುದರಿಂದ ಹಕ್ಕುಸ್ವಾಮ್ಯ ಉಲ್ಲಂಘನೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಸಿದ್ದರು.

ರಕ್ಷಿತ್ ಶೆಟ್ಟಿ ತಂಡದ ವಾದವನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್, ಹಾಡುಗಳ ಬಳಕೆ ಕೇವಲ ಕಾಕತಾಳೀಯವಲ್ಲ. ಸಿನಿಮಾದ ಕಥೆಯ ನಿರೂಪಣೆಗೆ ಪೂರಕವಾಗಿ ಮತ್ತು ವಾಣಿಜ್ಯ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿಯೇ ಈ ಹಾಡುಗಳನ್ನು ಬಳಸಿಕೊಳ್ಳಲಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಸಮಯದ ಅವಧಿ ಏನೇ ಇರಲಿ, ಅನುಮತಿ ಇಲ್ಲದ ಬಳಕೆ ಹಕ್ಕುಸ್ವಾಮ್ಯದ ಉಲ್ಲಂಘನೆಯೇ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಹಕ್ಕುಸ್ವಾಮ್ಯ ಉಲ್ಲಂಘನೆಗಾಗಿ: 20 ಲಕ್ಷ ರೂ.

​ನ್ಯಾಯಾಲಯದ ಆದೇಶ ಪಾಲನೆ ವಿಳಂಬಕ್ಕಾಗಿ: 5 ಲಕ್ಷ ರೂ.

​ಒಟ್ಟು ದಂಡ: 25 ಲಕ್ಷ ರೂ.

​ಆದರೆ, ಈ ಪ್ರಕರಣದಲ್ಲಿ ಜೈಲು ಶಿಕ್ಷೆ ವಿಧಿಸುವುದರಿಂದ ನ್ಯಾಯಾಲಯವು ವಿನಾಯಿತಿ ನೀಡಿದ್ದು, ಕೇವಲ ಆರ್ಥಿಕ ದಂಡದೊಂದಿಗೆ ಪ್ರಕರಣವನ್ನು ಇತ್ಯರ್ಥಪಡಿಸಿದೆ. ಈ ತೀರ್ಪು ಚಿತ್ರರಂಗದಲ್ಲಿ ಕಾಪಿರೈಟ್ ನಿಯಮಗಳ ಪಾಲನೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!