ಜಿಲ್ಲಾ ಸುದ್ದಿಕ್ರೈಂ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು
ವಿದ್ಯಾರಣ್ಯಪುರ: ಲಾಂಗು-ಮಚ್ಚು ಹಿಡಿದು ಅಟ್ಟಹಾಸ ಮೆರೆದಿದ್ದ 6 ಜನ ಪುಡಿ ರೌಡಿಗಳ ಬಂಧನ

ಬೆಂಗಳೂರು: ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್.ಎಂ.ಟಿ. ಲೇಔಟ್ 6ನೇ ಬ್ಲಾಕ್ನಲ್ಲಿ ಲಾಂಗು ಮತ್ತು ಮಚ್ಚುಗಳನ್ನು ಹಿಡಿದು ಭೀತಿ ಸೃಷ್ಟಿಸಿದ್ದ ಆರು ಜನ ಪುಡಿ ರೌಡಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳ ವಿವರ:
ಅಂಬಣ್ಣ ಅಲಿಯಾಸ್ ಅಂಬಿ (24)
ಅಜಯ್ ಅಲಿಯಾಸ್ ಅಮಾವಾಸೆ (23)
ರಾಹುಲ್ ಅಲಿಯಾಸ್ ಅಮಾವಾಸೆ (19)
ಶಿವಕುಮಾರ್ (19)
ಗಣೇಶ್ (19)
ಸಾಯಿಕಿರಣ್ (18)
ಏರಿಯಾದಲ್ಲಿ ತಮ್ಮ “ಹವಾ” ಮೈಂಟೇನ್ ಮಾಡುವ ದುರುದ್ದೇಶದಿಂದ ಈ ಪುಂಡರು ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ದಾಂಧಲೆ ನಡೆಸಿದ್ದರು ಎನ್ನಲಾಗಿದೆ.
ಪ್ರಕರಣದ ಬೆನ್ನತ್ತಿದ ಪೊಲೀಸರು ಆರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರಿಂದ ಕೃತ್ಯಕ್ಕೆ ಬಳಸಿದ್ದ ಎರಡು ಆಟೋರಿಕ್ಷಾಗಳು ಹಾಗೂ ಲಾಂಗು-ಮಚ್ಚುಗಳನ್ನು ಜಪ್ತಿ ಮಾಡಿದ್ದಾರೆ. ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




