ಜಿಲ್ಲಾ ಸುದ್ದಿಕ್ರೈಂ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಸರ್ಕಾರಿ ಕಚೇರಿಯಲ್ಲೇ ಭರ್ಜರಿ ಬಾಡೂಟ: ಸರ್ಕಾರಿ ಸುತ್ತೋಲೆ ಉಲ್ಲಂಘಿಸಿ ಮಾಂಸದೂಟದ ಪಾರ್ಟಿ ಸಂಘಟನೆ!

Share News

ರಾಮನಗರ: ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ (PCB) ಕಚೇರಿಯಲ್ಲಿ ಸರ್ಕಾರಿ ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಭರ್ಜರಿ ಮಾಂಸದೂಟದ (ನಾನ್-ವೆಜ್) ಪಾರ್ಟಿ ಆಯೋಜಿಸಿರುವುದು ಸಾರ್ವಜನಿಕರ ಹಾಗೂ ಪರಿಸರವಾದಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

​ರಾಮನಗರದ ಪರಿಸರಾಧಿಕಾರಿ ಮಂಜುನಾಥ್ ಅವರ ವರ್ಗಾವಣೆ ಹಿನ್ನೆಲೆಯಲ್ಲಿ ಅವರಿಗೆ ಬೀಳ್ಕೊಡುಗೆ ಪಾರ್ಟಿ ಆಯೋಜಿಸಲಾಗಿತ್ತು. ಕಚೇರಿ ಆವರಣದಲ್ಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈ ಅದ್ಧೂರಿ ಪಾರ್ಟಿ ಮಾಡಿಸಲಾಗಿದ್ದು, ಇದಕ್ಕೆ ಪ್ರಭಾವಿ ಕೈಗಾರಿಕೋದ್ಯಮಿಗಳ ಕೃಪಾಪೋಷಣೆ ಹಾಗೂ ಆರ್ಥಿಕ ನೆರವು ಸಿಕ್ಕಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

​ನಿಯಮಾವಳಿ ಉಲ್ಲಂಘನೆ – ಪರಿಸರವಾದಿಗಳ ಆಕ್ರೋಶ:

​ಸರ್ಕಾರಿ ಸುತ್ತೋಲೆ ಉಲ್ಲಂಘನೆ: ಸರ್ಕಾರಿ ಕಚೇರಿಗಳ ಆವರಣದಲ್ಲಿ ಯಾವುದೇ ರೀತಿಯ ಮಾಂಸಾಹಾರ ಪಾರ್ಟಿ ಅಥವಾ ಅದ್ಧೂರಿ ಕಾರ್ಯಕ್ರಮಗಳನ್ನು ನಡೆಸಬಾರದು ಎಂಬ ಸ್ಪಷ್ಟ ಸರ್ಕಾರಿ ಸುತ್ತೋಲೆ ಹಾಗೂ ನಿಯಮಾವಳಿಗಳಿವೆ. ಆದರೆ, ಅದನ್ನು ಕಡೆಗಣಿಸಿ ಕಚೇರಿಯಲ್ಲೇ ಬಾಡೂಟ ಆಯೋಜಿಸಲಾಗಿದೆ.

​ಕೈಗಾರಿಕೋದ್ಯಮಿಗಳ ಕೃಪೆ: ಮಾಲಿನ್ಯ ನಿಯಂತ್ರಣ ಮಂಡಳಿಯ ಕಣ್ಗಾವಲಿನಲ್ಲಿರಬೇಕಾದ ಕೈಗಾರಿಕೋದ್ಯಮಿಗಳ ಹಣದಲ್ಲೇ ಈ ಪಾರ್ಟಿ ನಡೆದಿದೆ ಎನ್ನಲಾಗಿದ್ದು, ಇದು ಅಧಿಕಾರಿ ಹಾಗೂ ಉದ್ಯಮಿಗಳ ನಡುವಿನ ಅನೈತಿಕ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

​ಕಠಿಣ ಕ್ರಮಕ್ಕೆ ಆಗ್ರಹ: ಕರ್ತವ್ಯ ಲೋಪ ಎಸಗಿ, ಸರ್ಕಾರಿ ಕಚೇರಿಯ ಘನತೆಗೆ ಧಕ್ಕೆ ತಂದಿರುವ ಪರಿಸರಾಧಿಕಾರಿ ಮಂಜುನಾಥ್ ಹಾಗೂ ಇದಕ್ಕೆ ಸಹಕರಿಸಿದ ಸಿಬ್ಬಂದಿಗಳ ವಿರುದ್ಧ ಉನ್ನತಾಧಿಕಾರಿಗಳು ತಕ್ಷಣವೇ ಶಿಸ್ತುಕ್ರಮ ಜರುಗಿಸಬೇಕು ಎಂದು ಪರಿಸರವಾದಿಗಳು ಮತ್ತು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!