ಪುರಸಭೆ ಅಧಿಕಾರಿಗಳು ಆಡಿದ್ದೇ ಆಟ ನಿಯಮ ಉಲ್ಲಂಘಿಸಿ ಪತ್ರಿಕಾ ಸಂಘಕ್ಕೆ ಗ್ರಾಮೀಣ ಗೋದಾಮು ಹಸ್ತಾಂತರ

ಕಾರಟಗಿ : ಷರತ್ತು ಉಲ್ಲಂಘಿಸಿದ ಪುರಸಭೆಯ ಅಧಿಕಾರಿಗಳು ಗ್ರಾಮೀಣ ಗೋದಾಮು ಹಿಂಪಡೆದು ರೈತರ ಹಿತಾಸಕ್ತಿ ಕಾಪಾಡುವಂತೆ ಸಾಮಾಜಿಕ ಹೋರಾಟಗಾರ ಸುಂದರರಾಜ್ ಎಪಿಎಂಸಿ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಕಾರಟಗಿ ಸಂತೆ ಮಾರುಕಟ್ಟೆಯಲ್ಲಿ ನಿರ್ಮಾಣಗೊಂಡಿರುವ ಗ್ರಾಮೀಣ ಗೋದಾಮನ್ನು ಪುರಸಭೆ ಅಧಿಕಾರಿಗಳು ಪತ್ರಿಕಾ ಸಂಘಕ್ಕೆ ನೀಡಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆಗ್ರಹ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು
ದಿನಾಂಕ 16.03.2025 ರಂದು ಮಾನ್ಯ ಆಡಳಿತ ಅಧಿಕಾರಿಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಗಂಗಾವತಿ ಮತ್ತು ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಿತಿಯ ಸಭೆಯ ನಿರ್ಣಯದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಗಂಗಾವತಿ ಸಮಿತಿ ವತಿಯಿಂದ ನಿರ್ಮಿಸಲಾಗಿರುವ ಕಾರಟಗಿ ಗ್ರಾಮೀಣ ಗೋದಾವನ್ನು ಕಾರಟಗಿಯ ಗ್ರಾಮ ಪಂಚಾಯಿತಿ ಗೆ ಹಸ್ತಾಂತರಿಸಲಾಗಿತ್ತು.
ಷರತ್ತುಗಳನ್ನು ಹಾಕಿ ರೈತರ ಹಿತಾಸಕ್ತಿಗಾಗಿ ಕಾರಟಗಿ ಪಂಚಾಯಿತಿಗೆ ಇಂದಿನ ಪುರಸಭೆಗೆ ಗ್ರಾಮೀಣ ಗೋದಮನ್ನು ಹಸ್ತಾಂತರಿಸಿತ್ತು
ಸಂತೆ ಪೇಟೆಗೆ ಹುಟ್ಟುವಳಿ ಮಾರಾಟಕ್ಕಾಗಿ ಬಂದ ಯಾವುದೇ ರೈತನಿಗೆ ತಾನು ತಂದ ಹುಟ್ಟುವಳಿಗಳನ್ನು ಶೇಖರಣೆ ಮಾಡಲು ಗೋದಾಮನ್ನು ಉಚಿತವಾಗಿ ಕೊಡತಕ್ಕದ್ದು.
ಹುಟ್ಟುವಳಿಗಳ ಹರಾಜು – ವ – ಮಾರಾಟಕ್ಕಾಗಿ ಅಥವಾ ಒಣಗಿಸುವ ಸಲುವಾಗಿ ಹರಾಜು ಕಟ್ಟೆಯನ್ನು ಉಪ-ಯೋಗಿಸಿಕೊಳ್ಳಲು ರೈತರಿಗೆ ಉಚಿತವಾಗಿ ಕೊಡತಕ್ಕದ್ದು.
ಕಟ್ಟಡವನ್ನು ಯಾರಿಗೂ (ಸಬ್ಲೆಟ್) ಬಾಡಿಗೆ ಆಧಾರದ ಮೇಲೆ ಕೊಡತಕ್ಕದ್ದಲ್ಲ.ಕಟ್ಟಡದ ಯಾವುದೇ ಕರ ಅಥವಾ ತೆರಿಗೆಯನ್ನು ಗ್ರಾಮ ಪಂಚಾಯತಿಯವರೇ ಸಂದಾಯ ಮಾಡಬೇಕು.ಯಾವುದೇ ಸಂಘ ಸಂಸ್ಥೆಗಳಿಗೆ ಅಥವಾ ವ್ಯಕ್ತಿಗೆ ಕಟ್ಟಡವನ್ನು ಮಾರಾಟ ಮಾಡುವುದಾಗಲೀ, ಬಾಡಿಗೆ ಕೊಡು-ವುದಾಗಲೀ ಅಥವಾ ಯಾವುದೇ ರೀತಿಯ ವಿಲೇವಾರಿ ಮಾಡತಕ್ಕದ್ದಲ್ಲ. ಹಾಗೇನಾದರೂ ಮಾಡಿರುವುದು ಸಮಿತಿ-ಯ ಗಮನಕ್ಕೆ ಬಂದರೆ ಕಟ್ಟಡವನ್ನು ಸಮಿತಿಯ ವರಕ್ಕೆ ತೆಗೆದುಕೊಳ್ಳಲಾಗುವುದು.
ವಾರ್ಷಿಕ ಸುಣ್ಣ – ಬಣ್ಣ ಮತ್ತು ದುರಸ್ತಿಯನ್ನು ಗ್ರಾಮ ಪಂಚಾಯತಿಯವರೇ ವಹಿಸಿಕೊಳ್ಳಬೇಕು.
ರೈತರ ಹುಟ್ಟುವಳಿ ಕೆಡದಂತೆ ಕಾಲಕಾಲಕ್ಕೆ ಕ್ರಿಮಿನಾಶಕ ಹೊಡೆದು ರಕ್ಷಿಸುವುದು.
ಗೋದಾಮಿನಲ್ಲಿ ದಾಸ್ತಾನು ಮಾಡಲಾದ ಹುಟ್ಟುವಳಿ ಮೇಲೆ ಗ್ರಾಮ ಸಹಕಾರ ಸಂಘದಿಂದ ಶೇ.75 ರಷ್ಟು ಸಾಲ ಕೊಡಲು ವ್ಯವಸ್ಥೆ ಮಾಡಬಹುದು.
ವಾರದ ಸಂತೆ ದಿನಗಳಲ್ಲಿ ವ್ಯಾಪಾರ ನಡೆಯುವ ದಿನಗಳಲ್ಲಿ ಸಮಿತಿಯ ಸಿಬ್ಬಂದಿ ಮಾರುಕಟ್ಟೆ ಶುಲ್ಕ ಆಕರಣೆಗೆ ಬಂದಾಗ ಸಹಕರಿಸತಕ್ಕದ್ದು
ಸಮಿತಿಯ ಅಧಿಕಾರಿಗಳಾದ ಕಾರ್ಯದರ್ಶಿ, ಅಧ್ಯಕ್ಷರು, ಉಪಾಧ್ಯಕ್ಷರು ಅಥವಾ ಸದಸ್ಯರು ಸಂಪರ್ಕಿಸಿದಾವಧಿಕರಿಸಿದೆ “” ಮಾಹಿತಿಯನ್ನು ಪೂರೈಸತಕ್ಕದ್ದು ಹಾಗೂ ಅವರೊಂದಿಗೆ ಸಹಕರಿಸತಕ್ಕದ್ದು.
ಗೋದಾಮಿನಲ್ಲಿ ಸಂಗ್ರಹಿಸಿದ ಹುಟ್ಟುವಳಿ ಬಗ್ಗೆ ಲೆಕ್ಕ ಪತ್ರಗಳನ್ನು ಇಡತಕ್ಕದ್ದು ಹಾಗೂ ಸಮಿತಿಯು ಕೇಳಿದಾಗ ಪೂರೈಸತಕ್ಕದ್ದು.
ಈ ಎಲ್ಲಾ ಷರತ್ತು ಮತ್ತು ನಿಬಂಧನೆಗಳ ಪೈಕಿ ಯಾವುದೇ ಷರತ್ತುನ್ನು ಉಲ್ಲಂಘಿಸಿದ್ದಲ್ಲಿ ಕಟ್ಟಡಗಳನ್ನು ಸಮಿತಿಯ ವಶಕ್ಕೆ ತೆಗೆದುಕೊಳ್ಳುವ ಅಧಿಕಾರವನ್ನು ಸಮಿತಿ ಹೊಂದಿರುತ್ತದೆ ಎನ್ನುವ ಕರಾರು ಪತ್ರದನ್ವಯ ಕಾರಟಗಿಯ ಗ್ರಾಮೀಣ ಗೋದಾವನ್ನು ಕಾರಟಗಿ ಪಂಚಾಯತಿಗೆ ಹಸ್ತಾಂತರಿಸಲಾಗಿತ್ತು.
ಆದರೆ ಈ ಎಲ್ಲಾ ನಿಬಂಧನೆ ಮತ್ತು ಷರತ್ತುಗಳನ್ನು ಉಲ್ಲಂಘಿಸಿ ಕಾರಟಿಗಿಯ ಪುರಸಭೆ ಅಧಿಕಾರಿಗಳು ಗ್ರಾಮೀಣ ಗೋದಾವನ್ನು ಪತ್ರಕರ್ತರ ಪತ್ರಿಕಾ ಭವನಕ್ಕೆ ನೀಡಿರುವುದು ನಿಯಮಬಾಹಿರವಾಗಿರುತ್ತದೆ. ಕಟ್ಟಡವನ್ನು ಯಾವುದೇ ಸಂಘ ಸಂಸ್ಥೆಗಳಿಗೆ ಅಥವಾ ವ್ಯಕ್ತಿಗೆ ಮಾರಾಟ ಮಾಡುವುದಾಗಲಿ ಬಾಡಿಗೆ ಕೊಡುವುದಾಗಲಿ ಅಥವಾ ಯಾವುದೇ ರೀತಿಯ ವಿಲೇವಾರಿ ಮಾಡತಕ್ಕದ್ದಲ್ಲ ಎಂದು ಷರತ್ತುಗಳನ್ನು ಹಾಕಿದರು ಸಹ ಕಾರಟಗಿ ಪುರಸಭೆ ಅಧಿಕಾರಿಗಳು ರೈತರ ಶಕ್ತಿಯನ್ನು ಬದಿಗೊತ್ತಿ ಪತ್ರಿಕಾ ಸಂಘಕ್ಕೆ ಗ್ರಾಮೀಣ ಗೋದಾಮನ್ನು ಹಸ್ತಾಂತರಿಸಿರುವುದರಿಂದ ರೈತರ ಶಕ್ತಿಗೆ ಧಕ್ಕೆ ಉಂಟಾಗಿದ್ದು ಈ ಕೂಡಲೇ ತಾವುಗಳು ಸಂತೆ ಮಾರುಕಟ್ಟೆಯಲ್ಲಿ ನಿರ್ಮಾಣಗೊಂಡಿರುವ ಗ್ರಾಮೀಣ ಗೋದಾಮನ್ನು ಪುರಸಭೆಯಿಂದ ಹಿಂಪಡೆದು ರೈತರ ಹಿತಾಸಕ್ತಿ ಗಾಗಿ ಸಂತೆಪೇಟೆಗೆ ಹುಟ್ಟುವಳಿ ಮಾರಾಟಕ್ಕಾಗಿ ಬರುವ ರೈತರ ಹುಟ್ಟುವಳಿಗಳನ್ನು ಶೇಖರಣೆ ಮಾಡಲು ಗೋದಾವನ್ನು ಉಪಯೋಗಿಸುವ ನಿಟ್ಟಿನಲ್ಲಿ ಅತಿ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಎಪಿಎಂಸಿ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.



