ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಹುಲ್ಲತ್ತಿ ಕ್ರಾಸ್ ಸಮೀಪ ವಿದ್ಯುತ್ ಟ್ರಾನ್ಸ್‌ಫಾರ್ಮರ್ ತಂತಿ ಸ್ಪರ್ಶ: 5 ಕುರಿಗಳಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಸೂಕ್ತ ಪರಿಹಾರಕ್ಕೆ ಆಗ್ರಹ

Share News

ರಾಣೇಬೆನ್ನೂರು: ತಾಲೂಕಿನ ಹುಲ್ಲತ್ತಿ ಕ್ರಾಸ್ ಸಮೀಪ ವಿದ್ಯುತ್ ಟ್ರಾನ್ಸ್‌ಫಾರ್ಮರ್ (ಟಿಸಿ) ಬಳಿ ವಿದ್ಯುತ್ ಪ್ರವಹಿಸಿದ ಪರಿಣಾಮ ಮೇಯುತ್ತಿದ್ದ 5 ಕುರಿಗಳು ವಿದ್ಯುತ್ ಸ್ಪರ್ಶದಿಂದ ಅಸ್ವಸ್ಥಗೊಂಡ ದುರ್ಘಟನೆ ಸಂಭವಿಸಿದೆ.

​ಗುಡ್ಡದ ಅನ್ವೇರಿ ನಿವಾಸಿ ಬೀರಪ್ಪ ಬಸಪ್ಪ ಕುದ್ರಿಹಾಳ ಅವರಿಗೆ ಸೇರಿದ ಕುರಿಗಳು ಮೇಯುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಪಶುವೈದ್ಯಾಧಿಕಾರಿಗಳು ಹಾಗೂ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

​ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ:

ದುರ್ಘಟನೆಯಿಂದಾಗಿ ಕುರಿ ಸಾಕಾಣಿಕೆದಾರ ಬೀರಪ್ಪ ಅವರಿಗೆ ಗಣನೀಯ ಪ್ರಮಾಣದ ನಷ್ಟ ಉಂಟಾಗಿದೆ. ವಿದ್ಯುತ್ ಸರಬರಾಜು ಮಂಡಳಿ (ಹೆಸ್ಕಾಂ) ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ನಷ್ಟಕ್ಕೊಳಗಾದ ರೈತನಿಗೆ ಸೂಕ್ತ ಪರಿಹಾರ ಧನ ನೀಡಬೇಕು ಎಂದು ಗ್ರಾಮಸ್ಥರು ತೀವ್ರವಾಗಿ ಆಗ್ರಹಿಸಿದ್ದಾರೆ.

​ಮಳೆಗಾಲದ ಮುನ್ನೆಚ್ಚರಿಕೆಗೆ ಮನವಿ:

ಮಳೆಗಾಲದ ಹಿನ್ನೆಲೆಯಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು, ವಿದ್ಯುತ್ ಕಂಬಗಳು ಹಾಗೂ ನೆಲಕ್ಕೆ ಬಿದ್ದಿರುವ ತಂತಿಗಳ ಬಳಿ ಜಾನುವಾರುಗಳನ್ನು ಮೇಯಿಸದಂತೆ ಕುರಿಗಾಹಿಗಳು ಹಾಗೂ ರೈತರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಎಲ್ಲಾದರೂ ವಿದ್ಯುತ್ ಸೋರಿಕೆ ಕಂಡುಬಂದರೆ ತಕ್ಷಣವೇ ಸಂಬಂಧಪಟ್ಟ ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

​ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಪರಶು ನಾಗಪ್ಪ ಹೀಲದಹಳ್ಳಿ, ದಿಳ್ಳೆಪ್ಪ ಕರಿಯಪ್ಪ ಅಂಗಡಿ, ಸುರೇಶ್ ತಳ್ಳೇರ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!