ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ರಾಜ್ಯದಿಂದ ಪ್ರಶಸ್ತಿ ಪಡೆದ ಏಕೈಕ ಸರ್ಕಾರಿ ಪ್ರೌಢಶಾಲೆ: ಶಾಲೆಯ ಸಮಗ್ರ ಅಭಿವೃದ್ಧಿಗೆ ₹52 ಲಕ್ಷಕ್ಕೂ ಅಧಿಕ ಅನುದಾನ ಬಳಕೆ

Share News

ಮೈಸೂರು: ಪಿರಿಯಾಪಟ್ಟಣ ತಾಲ್ಲೂಕಿನ ಅತ್ತಿಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಢ ಶಾಲೆಯು “2025-26ನೇ ಸಾಲಿನ ಸ್ವಚ್ಛ ವಿದ್ಯಾಲಯ ಪುರಸ್ಕಾರ ರಾಷ್ಟ್ರಮಟ್ಟದ ಪ್ರಶಸ್ತಿ” ಗೆ ಭಾಜನವಾಗುವ ಮೂಲಕ ಜಿಲ್ಲೆಗೆ ಹಾಗೂ ಇಡೀ ರಾಜ್ಯಕ್ಕೆ ಹೆಮ್ಮೆ ತಂದಿದೆ. ಈ ಮಾದರಿ ಶಾಲೆಯ ಸಮಗ್ರ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕಲ್ಪಿಸುವಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಹಾಗೂ 15ನೇ ಹಣಕಾಸು ಆಯೋಗದ ಕೊಡುಗೆ ಅಪಾರವಾಗಿದೆ.

​ಶಾಲೆಯ ಮೂಲಸೌಕರ್ಯಕ್ಕೆ ಕೋಟಿ ಅನುದಾನದ ಸ್ಪರ್ಶ:

​ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ನರೇಗಾ ಯೋಜನೆಯಡಿ ಸುಮಾರು ₹49 ಲಕ್ಷ ಹಾಗೂ 15ನೇ ಹಣಕಾಸು ಅನುದಾನದಡಿ ₹3 ಲಕ್ಷಕ್ಕೂ ಹೆಚ್ಚು ಅನುದಾನವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ:

​೧. ನರೇಗಾ ಯೋಜನೆಯಡಿ ಕೈಗೊಂಡ ಪ್ರಮುಖ ಕಾಮಗಾರಿಗಳು:

​ಆಟದ ಮೈದಾನ ನಿರ್ಮಾಣ (2015-16): ₹2.95 ಲಕ್ಷ

​ಸುಸಜ್ಜಿತ ಕಾಂಪೌಂಡ್ ಗೋಡೆ (2019-20): ₹12 ಲಕ್ಷ

​ಮಳೆ ನೀರು ಕೊಯ್ಲು ವ್ಯವಸ್ಥೆ (2020-21): ₹9.50 ಲಕ್ಷ

​ಬ್ಯಾಸ್ಕೆಟ್ ಬಾಲ್ ಮತ್ತು ಬ್ಯಾಡ್ಮಿಂಟನ್ ಕೋರ್ಟ್ (2022-23): ₹9.50 ಲಕ್ಷ

​ಆಧುನಿಕ ಭೋಜನಾಲಯ (2022-23): ₹14 ಲಕ್ಷ

​೨. 15ನೇ ಹಣಕಾಸು ಅನುದಾನದಡಿ ಅಭಿವೃದ್ಧಿ:

​ಬೋರ್‌ವೆಲ್ ಹಾಗೂ ಪೈಪ್‌ಲೈನ್: ₹40 ಸಾವಿರ

​ಕಮೋಡ್ ಶೌಚಾಲಯ ನಿರ್ಮಾಣ: ₹67 ಸಾವಿರ

​ಊಟದ ಪ್ಲಾಟ್‌ಫಾರ್ಮ್ ಹಾಗೂ ಇನ್ಸಿರೇಟರ್ ವ್ಯವಸ್ಥೆ: ₹1.17 ಲಕ್ಷ

​ಶಾಲಾ ಕಟ್ಟಡಕ್ಕೆ ಬಣ್ಣ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಪೈಪ್‌ಲೈನ್: ₹1.28 ಲಕ್ಷ

​ರಾಷ್ಟ್ರಮಟ್ಟದ ಆಯ್ಕೆ ಮಾನದಂಡಗಳು ಹಾಗೂ ರಾಜ್ಯದ ಸಾಧನೆ:

​ಕೇಂದ್ರ ಶಿಕ್ಷಣ ಮಂತ್ರಾಲಯವು ಕುಡಿಯುವ ನೀರು, ಶೌಚಾಲಯಗಳ ಸ್ವಚ್ಛತೆ ಮತ್ತು ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ವಿದ್ಯಾರ್ಥಿಗಳಲ್ಲಿ ನಡವಳಿಕೆ ವೃದ್ಧಿ ಹಾಗೂ ಪರಿಸರ ಸಂರಕ್ಷಣೆ ಸೇರಿದಂತೆ ಒಟ್ಟು 6 ವಿಭಾಗಗಳಲ್ಲಿ (100 ಅಂಕಗಳಿಗೆ) ಮೌಲ್ಯಮಾಪನ ನಡೆಸಿ ಅಂತಿಮ ಪಟ್ಟಿ ಪ್ರಕಟಿಸಿದೆ.

​ದೇಶಾದ್ಯಂತ ಆಯ್ಕೆಯಾದ 191 ಶಾಲೆಗಳ ಪೈಕಿ ಕರ್ನಾಟಕದ 3 ಶಾಲೆಗಳು ಪ್ರಶಸ್ತಿಗೆ ಭಾಜನವಾಗಿವೆ. ಸರ್ಕಾರಿ ಪ್ರೌಢಶಾಲೆಗಳ ವಿಭಾಗದಲ್ಲಿ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಅತ್ತಿಗೋಡು ಶಾಲೆ ಪಾತ್ರವಾಗಿದೆ. (ಉಡುಪಿಯ ಮುಲ್ಕಾಡು ಎಲ್ಲಾರೆ ಕೆ.ಪಿ.ಎಸ್ ಹಾಗೂ ಬೆಂಗಳೂರು ಗ್ರಾಮಾಂತರದ ಕನ್ನಮಂಗಲ ಎಚ್.ಪಿ.ಎಸ್ ಇತರ ಎರಡು ಪ್ರಶಸ್ತಿ ವಿಜೇತ ಶಾಲೆಗಳು).

​ಸಾಧಕರ ನುಡಿ:

​”ನಮ್ಮ ಶಾಲೆಯ ಅಭಿವೃದ್ಧಿಗೆ ನರೇಗಾ ಯೋಜನೆಯಡಿ ಅಪಾರ ನೆರವು ದೊರೆತಿದೆ. ಗ್ರಾಮ ಪಂಚಾಯಿತಿಯ ಸಹಕಾರ ಹೆಚ್ಚಿದಷ್ಟು ಸರ್ಕಾರಿ ಶಾಲೆಗಳು ಮಾದರಿಯಾಗಿ ಬೆಳೆಯಲು ಸಾಧ್ಯ ಎಂಬುದಕ್ಕೆ ನಮ್ಮ ಶಾಲೆಯೇ ಸಾಕ್ಷಿ.”

— ನಾಗಶೆಟ್ಟಿ, ಮುಖ್ಯಶಿಕ್ಷಕರು, ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

​”ನಮ್ಮ ತಾಲ್ಲೂಕಿನ ಶಾಲೆ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅತ್ಯಂತ ಸಂತೋಷ ತಂದಿದೆ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಸಹಕಾರ ಹಾಗೂ ಸರ್ಕಾರದ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಂಡಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ.”

— ಸುನಿಲ್ ಕುಮಾರ್ ಡಿ.ಬಿ., ಕಾರ್ಯನಿರ್ವಾಹಕ ಅಧಿಕಾರಿಗಳು (EO), ಪಿರಿಯಾಪಟ್ಟಣ

 


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!