ಸ್ವಂತ ಖರ್ಚಿನಲ್ಲಿ ಜನಗಳಿಗೆ ನೀರು ನೀಡುತ್ತಿರುವ ಕಟ್ಟಾ ಮಂಜುನಾಥ್

ಜನಪರ ಕಾಳಜಿಗೆ ಸಾಕ್ಷಿಯಾಗುತ್ತಿದೆ ಮಾಜಿ ಮೆಂಬರ್ ಕಾರ್ಯ,ಸ್ವಂತ ಖರ್ಚಿನಲ್ಲಿ ಜನಗಳಿಗೆ ನೀರು ನೀಡುತ್ತಿರುವ ಕಟ್ಟಾ ಮಂಜುನಾಥ್
ವರದಿ:- ಸುಂದರರಾಜ್ ಕಾರಟಗಿ
ಕಾರಟಗಿ ; ಬಸವಣ್ಣ ಕ್ಯಾಂಪ್ : ಗ್ರಾಮ ಪಂಚಾಯತಿ ಸದಸ್ಯರ ಆಡಳಿತ ಅವಧಿ ಮುಗಿದು ಸುಮಾರು 04 ತಿಂಗಳು ಆಗಿದೆ, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲಾ ಪಂಚಾಯತ್ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ, ಬೇಸಿಗೆ ಪ್ರಾರಂಭವಾಗಿದ್ದು ಜನಗಳಿಗೆ ನೀರಿನ ಅಭಾವ ಸೃಷ್ಟಿಯಾಗದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆಗಳನ್ನು ಕೂಡ ನೀಡಿದೆ, ಆದರೂ ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಗಳು ನೀರಿನ ಸಮಸ್ಯೆ ಎದುರಿಸುತ್ತಿರುವುದು ನಿಂತಿಲ್ಲ.
ಜನಗಳ ಸಮಸ್ಯೆಗಳಿಗೆ ಸ್ಪಂದಿಸದೇ ಅವಧಿ ಮುಗಿದಿದೆ ಎಂದು ಹಾರಿಕೆ ಉತ್ತರ ನೀಡುವ ಜನಪ್ರತಿನಿಧಿಗಳನ್ನು ಜಿಲ್ಲೆಯ ಹಳ್ಳಿ ಪ್ರದೇಶಗಳಲ್ಲಿ ಕಾಣಬಹುದು. ಆದರೆ ಇಲ್ಲೊಬ್ಬ ಗ್ರಾಮ ಪಂಚಾಯಿತಿ ಸದಸ್ಯ ಜನಗಳ ಸಮಸ್ಯೆಗಳಿಗೆ ನಿರಂತರ ಸ್ಪಂದಿಸುತ್ತಾ ಜನಪರ ಕಾಳಜಿ ತೋರಿಸುತ್ತಿದ್ದಾರೆ.ಕಾರಟಗಿ ತಾಲೂಕಿನ ಬೇವಿನಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವಣ್ಣ ಕ್ಯಾಂಪ್ ನ ಕಟ್ಟಾ ಮಂಜುನಾಥ್ ಎನ್ನುವ ಗ್ರಾಮ ಪಂಚಾಯಿತಿಯ ಮಾಜಿ ಮೆಂಬರ್ ಜನಪರ ಕಾಳಜಿಗೆ ಸಾಕ್ಷಿಯಾಗಿದ್ದಾರೆ.
ಗ್ರಾಮದ ವಾರ್ಡ್ ನಂಬರ್ 01 ರಲ್ಲಿನ ಜನಗಳಿಗೆ ದಿನ ಬಳಕೆಗೆ ನೀರಿನ ಸಮಸ್ಯೆ ಎದುರಿಸುತ್ತಿರುವುದು ಅರಿತು ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ಮೂಲಕ ವಾರ್ಡಿನ ಜನರಿಗೆ ನೀರನ್ನು ಸರಬರಾಜು ಮಾಡುತ್ತಿದ್ದಾರೆ. ಪ್ರತಿ ದಿನ ಟ್ಯಾಂಕರ್ ಮೂಲಕ ವಾರ್ಡಿನಲ್ಲಿ ನೀರು ಪೂರೈಸುತ್ತಿದ್ದಾರೆ, ಸುಮಾರು 25 ಸಾವಿರದಿಂದ 30ಸಾವಿರ ವರೆಗೆ ಸ್ವಂತ ಹಣ ಖರ್ಚುಮಾಡಿ ಜನರಿಗೆ ನೀರನ್ನು ಪೂರೈಸುತ್ತಿದ್ದಾರೆ. ಇವರ ಕಾರ್ಯ ವೈಖರಿಗೆ ಜನಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಬೈಟ್ : ಪಂಚಾಯಿತಿಯಿಂದ ಸಮರ್ಪಕವಾಗಿ ನೀರು ಪೂರೈಸಲು ಆಗ್ತಾಯಿಲ್ಲ,ಬೇಸಿಗೆ ಪ್ರಾರಂಭವಾಗಿದ್ದು ವಾರ್ಡಿನ ಜನರಿಗೆ ನೀರಿನ ಸಮಸ್ಯೆಯಾಗದಂತೆ ಟ್ಯಾಂಕರ್ ಮೂಲಕ ಪೂರೈಸಿದ್ದೇನೆ..!
ಕಟ್ಟಾ ಮಂಜುನಾಥ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಬಸವಣ್ಣ ಕ್ಯಾಂಪ್
ಬೈಟ್ : ಬೋರವೆಲ್ ಗಳಲ್ಲಿ ಅಂತರ್ಜಲ ಮಟ್ಟ ಕಡಿಮೆ ಆಗ್ತಾ ಇರುವ ಕಾರಣ ಬಸವಣ್ಣ ಕ್ಯಾಂಪ್ ನ ಕೆಲವು ಕಡೆ ನೀರು ಪೂರೈಕೆ ಆಗುವಲ್ಲಿ ವಿಳಂಬ ಆಗುತ್ತಿದೆ, ಸಮಗ್ರವಾಗಿ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ……
ಪ್ರಕಾಶ್ ಹಿರೇಮಠ
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಬೇವಿನಹಾಳ



