ಅಂಚೆ ಕಚೇರಿಗಳ ಸೇವೆ ಇನ್ಮುಂದೆ ಬೆಳಿಗ್ಗೆ 9 ಗಂಟೆಯಿಂದಲೇ ಆರಂಭ; ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ

ಗದಗ: ಗದಗ ಅಂಚೆ ವಿಭಾಗೀಯ ವ್ಯಾಪ್ತಿಯಲ್ಲಿರುವ ಎಲ್ಲಾ ಅಂಚೆ ಕಚೇರಿಗಳಲ್ಲಿ ಪ್ರತಿದಿನ ಬೆಳಿಗ್ಗೆ 9:00 ಗಂಟೆಯಿಂದ ಏಕರೂಪದ ವ್ಯವಹಾರ ಸಮಯವನ್ನು ಜಾರಿಗೆ ತರಲಾಗಿದೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕರಾದ ಎಸ್.ಎಸ್. ಶಿರಹಟ್ಟಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಈ ಹೊಸ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಬೆಳಿಗ್ಗೆ 9:00 ಗಂಟೆಯಿಂದಲೇ ಅಂಚೆ ಕಚೇರಿಯ ವಿವಿಧ ಸೇವೆಗಳು ಲಭ್ಯವಾಗಲಿವೆ.
ಲಭ್ಯವಾಗುವ ಪ್ರಮುಖ ಸೇವೆಗಳು:
ಹಣಕಾಸು ಸೇವೆಗಳು: ಅಂಚೆ ಉಳಿತಾಯ ಬ್ಯಾಂಕ್ (POSB) ವ್ಯವಹಾರಗಳು.
ಅಂಚೆ ಸೇವೆಗಳು: ಸ್ಪೀಡ್ ಪೋಸ್ಟ್, ಪಾರ್ಸೆಲ್ ಹಾಗೂ ವಿವಿಧ ಅಂಚೆ ಲೇಖನಗಳ ಬುಕ್ಕಿಂಗ್.
ವಿಮೆ ಹಾಗೂ ಪಾವತಿ: ಇ-ಪಾವತಿ ಸೇವೆಗಳು ಮತ್ತು ಅಂಚೆ ಜೀವ ವಿಮೆ (PLI / RPLI) ಪ್ರೀಮಿಯಂ ಪಾವತಿ.
ಅಂಚೆ ಕಚೇರಿಗಳ ವ್ಯವಹಾರದ ಸಮಯವನ್ನು ಏಕರೂಪಗೊಳಿಸುವುದರಿಂದ ಸಾರ್ವಜನಿಕರಿಗೆ ತಮ್ಮ ಅಗತ್ಯದ ಕೆಲಸಗಳನ್ನು ಸುಸಂಘಟಿತವಾಗಿ ನಿರ್ವಹಿಸಲು ಹಾಗೂ ಇಲಾಖೆಯ ಸೇವೆಗಳ ಗುಣಮಟ್ಟ ಮತ್ತು ದಕ್ಷತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ಗ್ರಾಹಕರು ಹಾಗೂ ಸಾರ್ವಜನಿಕರು ಈ ಬದಲಾಯಿತ ಸಮಯದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ಅಂಚೆ ವಿಭಾಗೀಯ ಅಧೀಕ್ಷಕರು ಕೋರಿದ್ದಾರೆ.



