ಜಿಲ್ಲಾ ಸುದ್ದಿಕ್ರೈಂ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಮ್ಯಾಟ್ರಿಮೊನಿಯಲ್ಲಿ ‘ಜಡ್ಜ್’ ನಾಟಕವಾಡಿ ಕೋಟಿ ಕೋಟಿ ಸುಲಿಗೆಗೆ ಸ್ಕೆಚ್; ವಂಚಕ ಪ್ರದೀಪ್ ಹಾಗೂ ತಾಯಿ ಅರೆಸ್ಟ್!

Share News

ಬೆಂಗಳೂರು: ಮಚ್ಚು-ಲಾಂಗು ಹಿಡಿಯದೇ ಮ್ಯಾಟ್ರಿಮೊನಿ ಸೈಟ್ ಮೂಲಕ ಕೋಟಿ ಕೋಟಿ ಸುಲಿಗೆಗೆ ಸಂಚು ರೂಪಿಸಿದ್ದ ವಂಚಕನೊಬ್ಬ ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ‘ನಾನು ವಕೀಲ, ಶೀಘ್ರದಲ್ಲೇ ಜಡ್ಜ್ ಆಗ್ತೀನಿ’ ಎಂದು ನಂಬಿಸಿ ಮದುವೆಯಾಗಲು ಹೊರಟಿದ್ದ ಪ್ರದೀಪ್ ಸೋಲೋಮನ್ ಹಾಗೂ ಆತನ ತಾಯಿ ಕಲಾವತಿಯನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

​ಘಟನೆಯ ಹಿನ್ನೆಲೆ:

ಆರೋಪಿ ಪ್ರದೀಪ್ ಸೋಲೋಮನ್ ‘ಶಾದಿ ಡಾಟ್ ಕಾಮ್’ ಮ್ಯಾಟ್ರಿಮೊನಿ ವೆಬ್‌ಸೈಟ್‌ನಲ್ಲಿ ತಾನು ನ್ಯಾಯವಾದಿ (ವಕೀಲ) ಎಂದೂ, ಈಗಾಗಲೇ ಜಡ್ಜ್ ಪರೀಕ್ಷೆ ಬರೆದಿದ್ದು ಶೀಘ್ರದಲ್ಲೇ ಜಡ್ಜ್ ಹುದ್ದೆಗೆ ಆಯ್ಕೆಯಾಗಲಿದ್ದೇನೆ ಎಂದೂ ಸುಳ್ಳು ಪ್ರೊಫೈಲ್ ಸೃಷ್ಟಿಸಿಕೊಂಡಿದ್ದ. ಈ ಆಕರ್ಷಕ ಪ್ರೊಫೈಲ್ ನೋಡಿದ ಉದ್ಯಮಿಯೊಬ್ಬರು ತಮ್ಮ ಮಗಳನ್ನು ಈತನಿಗೆ ನೀಡಲು ಒಪ್ಪಿ, ಮೇ 31ಕ್ಕೆ ಮದುವೆ ದಿನಾಂಕ ನಿಗದಿಪಡಿಸಿದ್ದರು.

​ವರನ ಪ್ರೊಫೈಲ್‌ಗೆ ಫಿದಾ ಆಗಿದ್ದ ಭಾವಿ ಮಾವ, ಮದುವೆಗೆ 1 ಕೆಜಿ ಚಿನ್ನಾಭರಣ, ಫಾರ್ಚೂನರ್ ಕಾರು ಹಾಗೂ ಹೊಸ ಮನೆಯ ಕೀ ನೀಡಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದರು.

​ಅಸಲಿ ಮುಖವಾಡ ಬಯಲು:

ಮದುವೆ ಲಗ್ನ ಪತ್ರಿಕೆ (ಇನ್ವಿಟೇಷನ್) ಹಂಚುವ ಸಂದರ್ಭದಲ್ಲಿ ಇಮ್ರಾನ್ ಎಂಬುವವರು ಆರೋಪಿ ಪ್ರದೀಪನಿಗೆ ಯಾವುದೇ ಆಸ್ತಿ-ಪಾಸ್ತಿ ಇಲ್ಲ ಹಾಗೂ ಆತ ಜನರಿಗೆ ಮಕ್ಮಲ್ ಟೋಪಿ ಹಾಕುವ ವಂಚಕ ಎಂಬ ಸತ್ಯವನ್ನು ಭಾವಿ ಮಾವನಿಗೆ ತಿಳಿಸಿದ್ದಾರೆ. ಇದರಿಂದ ತಕ್ಷಣ ಎಚ್ಚೆತ್ತ ಉದ್ಯಮಿ, ಆಡುಗೋಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

​ದೂರು ದಾಖಲಿಸಿಕೊಂಡ ಆಡುಗೋಡಿ ಪೊಲೀಸರು ತನಿಖೆ ನಡೆಸಿ, ವಂಚಕ ಪ್ರದೀಪ್ ಹಾಗೂ ಆತನಿಗೆ ಸಾಥ್ ನೀಡಿದ್ದ ತಾಯಿ ಕಲಾವತಿಯನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ.

​ಸಾರ್ವಜನಿಕರಿಗೆ ಮುನ್ನೆಚ್ಚರಿಕೆ:

ಮ್ಯಾಟ್ರಿಮೊನಿ ಸೈಟ್‌ಗಳಲ್ಲಿ ಹುಡುಗ ಅಥವಾ ಹುಡುಗಿಯ ಪ್ರೊಫೈಲ್ ನೋಡಿ ಮದುವೆ ನಿಶ್ಚಯಿಸುವ ಮುನ್ನ, ಅವರ ಹಿನ್ನೆಲೆಯನ್ನು ಸಂಪೂರ್ಣವಾಗಿ ತನಿಖೆ ಮಾಡಿ ಖಾತರಿಪಡಿಸಿಕೊಳ್ಳುವುದು ಅತ್ಯಗತ್ಯ. ಇಲ್ಲದಿದ್ದರೆ ಇಂತಹ ವಂಚಕರ ಜಾಲಕ್ಕೆ ಸಿಲುಕಿ ಮೋಸ ಹೋಗುವ ಸಾಧ್ಯತೆಯಿರುತ್ತದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!