ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಯಂತ್ರದಲ್ಲಿ ಸಿಲುಕಿದ ಅಡುಗೆ ಸಿಬ್ಬಂದಿ ಕೈ: ಸಮಯಪ್ರಜ್ಞೆಯಿಂದ ಜೀವ ರಕ್ಷಿಸಿದ ಬಾಲಕನಿಗೆ ಅಭಿನಂದನೆ!

Share News

ವಿದ್ಯುತ್‌ ಚಾಲಿತ ತೆಂಗಿನಕಾಯಿ ತುರಿಯುವ ಯಂತ್ರದಲ್ಲಿ ಕೈಬೆರಳು ಸಿಲುಕಿಕೊಂಡು ಅಪಾಯದಲ್ಲಿದ್ದ ಅಕ್ಷರ ದಾಸೋಹ ಸಿಬ್ಬಂದಿಯನ್ನು 5ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಅದ್ಭುತ ಸಮಯಪ್ರಜ್ಞೆಯಿಂದ ರಕ್ಷಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

​ಘಟನೆಯ ವಿವರ:

ಶಾಲೆಯ ಅಕ್ಷರ ದಾಸೋಹ ಸಿಬ್ಬಂದಿ ವಿದ್ಯುತ್‌ ಯಂತ್ರದಲ್ಲಿ ತೆಂಗಿನಕಾಯಿ ತುರಿಯುತ್ತಿದ್ದಾಗ ಆಕಸ್ಮಿಕವಾಗಿ ಅವರ ಕೈಬೆರಳು ಯಂತ್ರದೊಳಗೆ ಸಿಲುಕಿಕೊಂಡಿದೆ. ಸಿಬ್ಬಂದಿ ತೀವ್ರ ನೋವಿನಿಂದ ಕಿರುಚಾಡುತ್ತಿದ್ದಾಗ, ಅಲ್ಲೇ ಇದ್ದ 5ನೇ ತರಗತಿಯ ಮನ್ವಿತ್ ಎಂಬ ವಿದ್ಯಾರ್ಥಿ ಪರಿಸ್ಥಿತಿಯ ಗಂಭೀರತೆಯನ್ನು ಕ್ಷಣಾರ್ಧದಲ್ಲಿ ಗ್ರಹಿಸಿದ್ದಾನೆ. ಯಾವುದೇ ಭಯವಿಲ್ಲದೆ ತಕ್ಷಣವೇ ವಿದ್ಯುತ್‌ ಸ್ವಿಚ್‌ ಆಫ್‌ ಮಾಡುವ ಮೂಲಕ ಯಂತ್ರದ ಚಲನೆಯನ್ನು ಸ್ಥಗಿತಗೊಳಿಸಿ, ಆಗಬಹುದಾಗಿದ್ದ ಬೃಹತ್ ಅನಾಹುತ ಹಾಗೂ ಗಂಭೀರ ಅಪಾಯವನ್ನು ತಪ್ಪಿಸಿದ್ದಾನೆ.

​ಬಾಲಕನ ಸಾಹಸಕ್ಕೆ ಮುಖ್ಯಮಂತ್ರಿಗಳ ಮೆಚ್ಚುಗೆ:

ಮನ್ವಿತ್‌ನ ಈ ಸಮಯಪ್ರಜ್ಞೆ ಹಾಗೂ ಧೈರ್ಯಕ್ಕೆ ಶಾಲಾ ಸಿಬ್ಬಂದಿ ಮತ್ತು ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಬಾಲಕನ ಜಾಗರೂಕತೆಯನ್ನು ಶ್ಲಾಘಿಸಿರುವ ಮುಖ್ಯಮಂತ್ರಿಗಳು, ಅಪಾಯದಲ್ಲಿದ್ದ ಅಡುಗೆ ಸಿಬ್ಬಂದಿಯನ್ನು ರಕ್ಷಿಸಿದ ಮನ್ವಿತ್‌ನ ನಡೆ ಹೃದಯಸ್ಪರ್ಶಿ ಹಾಗೂ ಮಾದರಿಯಾಗಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಶುಭ ಹಾರೈಸಿದ್ದಾರೆ. ಬಾಲಕನ ಭವಿಷ್ಯ ಉಜ್ವಲವಾಗಲಿ ಮತ್ತು ಆತ ಸಮಾಜಕ್ಕೆ ನಿದರ್ಶನವಾಗಲಿ ಎಂದು ಸಿಎಂ ಆಶಂಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!