ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ‘ಕ್ವಾಂಟಮ್ ಸಂಶೋಧನೆ ಕೇಂದ್ರ’ ಉದ್ಘಾಟನೆ: ಇನ್ಫೋಸಿಸ್ ಕೃಸ್ ಗೋಪಾಲಕೃಷ್ಣ ಚಾಲನೆ

Share News

ಆನೇಕಲ್ (ಎಲೆಕ್ಟ್ರಾನಿಕ್ ಸಿಟಿ): ಆನೇಕಲ್ ತಾಲೂಕಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಕ್ವಾಂಟಮ್ ಸ್ಕೂಲ್ ಆಫ್ ಅಡ್ವಾನ್ಸ್ಡ್ ರಿಸರ್ಚ್’ ಕೇಂದ್ರವನ್ನು ಭಾನುವಾರ ವಿಜೃಂಭಣೆಯಿಂದ ಉದ್ಘಾಟಿಸಲಾಯಿತು.

​ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದರು.

​ಕ್ರಿಸ್ ಗೋಪಾಲಕೃಷ್ಣ ಅವರ ಪ್ರಮುಖ ವಿಚಾರಗಳು:

​ಹೊಸ ತಲೆಮಾರಿನ ತಂತ್ರಜ್ಞಾನ: ಕೃತಕ ಬುದ್ಧಿಮತ್ತೆ (AI) ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಹೊಸ ಯುಗದ ಅಗತ್ಯ ತಂತ್ರಜ್ಞಾನಗಳಾಗಿದ್ದು, ಸಂಕೀರ್ಣ ತಾಂತ್ರಿಕ ಸಮಸ್ಯೆಗಳಿಗೆ ತ್ವರಿತ ಹಾಗೂ ಅತ್ಯಂತ ನಿಖರ ಪರಿಹಾರ ಕಂಡುಕೊಳ್ಳಲು ಇವು ಸಹಕಾರಿಯಾಗಿವೆ.

​ವಿವಿಧ ಕ್ಷೇತ್ರಗಳಿಗೆ ಹೊಸ ಶಕ್ತಿ: ಜೀವಶಾಸ್ತ್ರ, ಜೈವಿಕ ತಂತ್ರಜ್ಞಾನ, ರಸಾಯನಶಾಸ್ತ್ರ, ಆರೋಗ್ಯ ಸೇವೆ, ಕೃಷಿ, ಹವಾಮಾನ ವೈಪರೀತ್ಯ ಹಾಗೂ ಉತ್ಪಾದನಾ ಕ್ಷೇತ್ರಗಳಿಗೆ ಕ್ವಾಂಟಮ್ ಕಂಪ್ಯೂಟಿಂಗ್ ಹೊಸ ಶಕ್ತಿ ತುಂಬಲಿದೆ.

​ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ: ದೇಶದ ಆರ್ಥಿಕ ಅಭಿವೃದ್ಧಿ ಹಾಗೂ ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ಸಂಶೋಧನೆ ಪೂರಕವಾಗಿರಬೇಕು. ಯುವ ಸಮುದಾಯ ಈ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ವೃತ್ತಿಜೀವನದಲ್ಲಿ ಯಶಸ್ಸು ಗಳಿಸಬೇಕು.

​ಖಾಸಗಿ ಶಿಕ್ಷಣ ಸಂಸ್ಥೆಯಲ್ಲೇ ಮೊದಲ ಬಾರಿಗೆ 8 ಕ್ಯೂಬಿಟ್ ಸೌಲಭ್ಯ:

​ಅಭಯ್ ಚೆಬ್ಬಿ (ಕುಲಪತಿಗಳು, ಅಲಯನ್ಸ್ ವಿವಿ):

“ಅಲಯನ್ಸ್ ಕ್ವಾಂಟಮ್ ಕೇಂದ್ರದಲ್ಲಿ 8 ಕ್ಯೂಬಿಟ್ (8-Qubit) ಕ್ವಾಂಟಮ್ ಕಂಪ್ಯೂಟಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಭಾರತದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಇಂತಹ ವ್ಯವಸ್ಥೆ ಮಾಡಿರುವುದು ಇದೇ ಮೊದಲು. ಇಲ್ಲಿ ಸಂಶೋಧನೆ ನಡೆಸಲು ಬಯಸುವ ಎಲ್ಲಾ ಯುವಕರಿಗೂ ಅವಕಾಶ ನೀಡಲಾಗುವುದು ಹಾಗೂ ಕ್ವಾಂಟಮ್ ವಿಷಯದಲ್ಲಿ ವಿಶೇಷ ಬಿ.ಟೆಕ್ (B.Tech) ಪದವಿಯನ್ನೂ ರೂಪಿಸಲಾಗಿದೆ.”

​ಧಾರವಾಡ ಮತ್ತು ರಾಯಚೂರಿನಲ್ಲಿ ಕ್ವಾಂಟಮ್ ಕೇಂದ್ರ ತೆರೆಯಲು ಸಿದ್ಧತೆ:

​ಕಾರ್ಯಕ್ರಮದಲ್ಲಿದ್ದ ಶಾಸಕ ಹಾಗೂ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮಾತನಾಡಿ, ಇ-ಆಡಳಿತ ಹಾಗೂ ಸರ್ಕಾರದ ಯೋಜನೆಗಳನ್ನು ತಲುಪಿಸಲು ತಂತ್ರಜ್ಞಾನ ಪ್ರಮುಖವಾಗಿದೆ. ಸರ್ಕಾರವು ಧಾರವಾಡ ಮತ್ತು ರಾಯಚೂರಿನಲ್ಲಿ ಕ್ವಾಂಟಮ್ ಕೇಂದ್ರ ತೆರೆಯಲು ಸಿದ್ಧತೆ ನಡೆಸಿದೆ. ಮುಂಬರುವ ದಿನಗಳಲ್ಲಿ ₹2,000 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳು ಹಾಗೂ ತಂತ್ರಜ್ಞಾನ ಕಂಪನಿಗಳನ್ನೊಳಗೊಂಡ ‘AI ಮತ್ತು ಕ್ವಾಂಟಮ್ ಪಾರ್ಕ್’ ನಿರ್ಮಿಸಲಾಗುವುದು ಎಂದು ತಿಳಿಸಿದರು.

​ಉಪಸ್ಥಿತರಿದ್ದ ಗಣ್ಯರು:

​ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರಿಸ್ಲಿ ಶಾನ್, ರಿಜಿಸ್ಟ್ರಾರ್ ಮಠಂ ವಿಶ್ವನಾಥಯ್ಯ, ರಿಜಿಸ್ಟ್ರಾರ್ ಜನರಲ್ ಸುರೇಖಾ ಶೆಟ್ಟಿ, ನಾಗೇಂದ್ರ ನಾಗರಾಜ್, ಐಐಎಸ್ಸಿ ಪ್ರೊ. ಅರಿಂದಮ್ ಘೋಷ್, ಸುರೇಶ್ ಸುಂದರಂ, ಐಐಐಟಿಬಿ ಆರ್‌ಆಂಡ್‌ಡಿ ವಿಭಾಗದ ದಿನೇಶ್ ಬಾಬು ಹಾಗೂ ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದ ಕಾಂತರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!