ಜಿಲ್ಲಾ ಸುದ್ದಿರಾಜ್ಯ ಸುದ್ದಿ
ಮೀನು ಹಿಡಿಯಲು ಹೋಗಿ ದೋಣಿ ಮುಳುಗಿ ಯುವಕರು ಸಾವು

ಫಲ್ಗುಣಿ ನದಿಗೆ ಮೀನು ಹಿಡಿಯಲು ತೆರಳಿದ್ದ ಕುಂಜತ್ ಬೈಲ್ ನ ಗಣೇಶ (28) ಹಾಗೂ ರಾಯಲ್ (27) ಎಂಬವರು ದೋಣಿ ಮುಗುಚಿ ನೀರು ಪಾಲು
ಕಾವೂರು ಠಾಣಾ ವ್ಯಾಪ್ತಿಯ ಫಲ್ಘುಣಿ ನದಿಗೆ ದಿನಾಂಕ: 01.04.2026 ರಂದು ಬೆಳಿಗ್ಗೆ 01-30 ಗಂಟೆಗೆ ಮೀನು ಹಿಡಿಯಲು ತೆರಳಿದ್ದ ಕುಂಜತ್ ಬೈಲ್ ನಿವಾಸಿಗಳಾದ 1) ಗಣೇಶ್ (28) 2) ರಾಯಲ್ (24) 3) ನಿತೇಶ್ (29) ರವರುಗಳು ದೋಣಿ ಮುಗುಚಿ ನೀರಿಗೆ ಬಿದ್ದಿದ್ದು, ಈ ಸಮಯ ಈಜಲು ಬಾರದ ಗಣೇಶ್ ಹಾಗೂ ರಾಯಲ್ ಎಂಬವರು ನೀರು ಪಾಲಾಗಿದ್ದು, ನಿತೇಶ್ ಎಂಬವರು ಈಜಿ ದಡ ಸೇರಿರುತ್ತಾರೆ.
ಫಲ್ಗುಣಿ ನದಿಯಲ್ಲಿ ನೀರು ಪಾಲಾದ ವ್ಯಕ್ತಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂಧಿಗಳು ಹಾಗೂ ಸ್ಥಳಿಯ ಮುಳುಗು ತಜ್ಞರು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಗಣೇಶ್ ಎಂಬಾತನ ಮೃತ ದೇಹ ಪತ್ತೆಯಾಗಿದ್ದು, ರಾಯಲ್ ಎಂಬಾತನ ಪತ್ತೆಗೆ ಶೋಧ ಕಾರ್ಯ ನಡೆದಿರುತ್ತದೆ.



