ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜಕೀಯರಾಜ್ಯ ಸುದ್ದಿ

ಸಚಿವಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಈ ವಾರವೇ ಸಂಪುಟ ವಿಸ್ತರಣೆ ಎಂದ ಸಿಎಂ ಡಿಕೆಶಿ!

Share News

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಈ ವಾರದಲ್ಲೇ ನಡೆಯುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟ ಸುಳಿವು ನೀಡಿದ್ದಾರೆ. ವಿಧಾನಸಭೆ ಅಧಿವೇಶನ ಹಾಗೂ ಸಂಪುಟ ವಿಸ್ತರಣೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಈ ಪ್ರಮುಖ ಮಾಹಿತಿ ಹಂಚಿಕೊಂಡಿದ್ದಾರೆ.

​ವಿಧಾನಸಭೆ ಅಧಿವೇಶನದ ಕುರಿತು ಮಾತನಾಡಿದ ಸಿಎಂ, “ಆಗಸ್ಟ್ ಮೊದಲನೇ ವಾರ, ಅಂದಾಜು ಆಗಸ್ಟ್ 6ರಂದು ಅಧಿವೇಶನ ಆರಂಭವಾಗಬಹುದು,” ಎಂದು ತಿಳಿಸಿದರು.

​ಈ ವಾರದಲ್ಲೇ ವಿಸ್ತರಣೆ: ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆಯೇ ಎಂಬ ಪ್ರಶ್ನೆಗೆ, “ಖಂಡಿತವಾಗಿ ಈ ವಾರದಲ್ಲಿಯೇ ಆಗಲಿದೆ” ಎಂದು ಉತ್ತರಿಸುವ ಮೂಲಕ ವಿಸ್ತರಣೆಯ ಕುರಿತು ಸ್ಪಷ್ಟ ಸಂದೇಶ ನೀಡಿದರು.

​ದೆಹಲಿ ಪ್ರವಾಸದ ಸುಳಿವು: ಇನ್ನು ಮತ್ತೆ ದೆಹಲಿಗೆ ತೆರಳುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಅವಶ್ಯಕತೆ ಬಿದ್ದರೆ ದಿನವೂ ದೆಹಲಿಗೆ ಹೋಗಿ ಬರುತ್ತೇನೆ” ಎಂದು ಹೇಳಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಸಂಪುಟ ವಿಸ್ತರಣೆಯ ಚಟುವಟಿಕೆಗಳು ತೀವ್ರಗೊಂಡಿದ್ದು, ನೂತನ ಸಚಿವರಾಗಿ ಯಾರೆಲ್ಲಾ ಸೇರ್ಪಡೆಯಾಗಲಿದ್ದಾರೆ ಎಂಬ ಕುತೂಹಲ ಸಚಿವಾಕಾಂಕ್ಷಿಗಳಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಮುಗಿಲು ಮುಟ್ಟಿದೆ.

 


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!