ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಚಾಮ ಕಾಲೋನಿಯ ಹುಣಸೆ ಮರದಲ್ಲಿ ನೂರಾರು ಕೊಕ್ಕರೆಗಳ ಕಲರವ; ಸಾರ್ವಜನಿಕರ ಗಮನ ಸೆಳೆಯುತ್ತಿರುವ ಪ್ರಕೃತಿ ಸೊಬಗು!

Share News

ಯಾದಗಿರಿ: ನಗರದ ಚಾಮ ಕಾಲೋನಿಯಲ್ಲಿರುವ ಬೃಹತ್ ಹುಣಸೆ ಮರವೊಂದು ಈಗ ನೂರಾರು ಕೊಕ್ಕರೆಗಳ (ಕೊಂಗೆಗಳು) ಸುರಕ್ಷಿತ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಕಾಂಕ್ರೀಟ್ ಕಾಡಿನ ಮಧ್ಯೆ ಪ್ರಕೃತಿಯ ಈ ಅಪರೂಪದ ದೃಶ್ಯ ಸ್ಥಳೀಯ ನಾಗರಿಕರ ಮತ್ತು ಹಕ್ಕಿ ಪ್ರೇಮಿಗಳ ವಿಶೇಷ ಗಮನ ಸೆಳೆಯುತ್ತಿದೆ.

ಪ್ರತಿದಿನ ಮುಂಜಾನೆ ಸೂರ್ಯ ಮೂಡುತ್ತಿದ್ದಂತೆ ಆಹಾರ ಅರಸಿ ಇಲ್ಲಿನ ನೂರಾರು ಕೊಕ್ಕರೆಗಳು ಸಮೀಪದ ಕೆರೆ, ಹಳ್ಳ-ಕೊಳ್ಳ, ಜಲಾಶಯ ಹಾಗೂ ಹೊಲಗದ್ದೆಗಳತ್ತ ಹಾರಿ ಹೋಗುತ್ತವೆ. ದಿನವಿಡೀ ಆಹಾರ ಹುಡುಕಾಟ ನಡೆಸುವ ಇವು, ಸಂಜೆ ಕತ್ತಲಾಗುತ್ತಿದ್ದಂತೆ ಮರಳಿ ಇದೇ ಹುಣಸೆ ಮರಕ್ಕೆ ಗುಂಪು ಗುಂಪಾಗಿ ಬಂದು ಸೇರುತ್ತವೆ. ಈ ವೇಳೆ ಹಕ್ಕಿಗಳ ಹಾರಾಟ ಹಾಗೂ ಅವುಗಳ ಮಧುರ ಕಲರವ ನೋಡುಗರಿಗೆ ಪ್ರಕೃತಿಯ ದಿವ್ಯ ಸೊಬಗನ್ನು ಉಣಬಡಿಸುತ್ತಿದೆ.

ಒಂದೇ ಮರದಲ್ಲಿ ನೂರಾರು ಕೊಕ್ಕರೆಗಳು ಗೂಡು ಕಟ್ಟಿಕೊಂಡು ವಾಸಿಸುತ್ತಿರುವುದು ಪರಿಸರದ ಸಮತೋಲನ ಹಾಗೂ ಜೀವವೈವಿಧ್ಯದ ದೃಷ್ಟಿಯಿಂದ ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

“ನಗರದ ಮಧ್ಯಭಾಗದಲ್ಲೇ ಪಕ್ಷಿಗಳಿಗೆ ಸುರಕ್ಷಿತ ವಾತಾವರಣ ಇರುವುದು ಮತ್ತು ಸಮೀಪದಲ್ಲಿ ಸೂಕ್ತ ಜಲಮೂಲಗಳು ಲಭ್ಯವಿರುವುದರಿಂದಲೇ ಕೊಕ್ಕರೆಗಳು ಈ ಮರವನ್ನು ತಮ್ಮ ನೆಲೆವಾಸಕ್ಕೆ ಆಯ್ಕೆ ಮಾಡಿಕೊಂಡಿವೆ. ಇವುಗಳ ರಕ್ಷಣೆ ನಮ್ಮೆಲ್ಲರ ಹೊಣೆ.”

ಪಟ್ಟಣದ ಹೃದಯಭಾಗದಲ್ಲೇ ಇಂತಹ ಅಪರೂಪದ ಪಕ್ಷಿ ಸಂಕುಲ ನೆಲೆಸಿರುವುದು ಯಾದಗಿರಿಯ ವಿಶೇಷತೆಯಾಗಿದೆ. ಪ್ರಕೃತಿಯ ಈ ಸುಂದರ ಕೊಡುಗೆಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಳ್ಳಲು, ಈ ಬೃಹತ್ ಹುಣಸೆ ಮರವನ್ನು ಹಾಗೂ ಇಲ್ಲಿ ಆಶ್ರಯ ಪಡೆದಿರುವ ಅಪರೂಪದ ಕೊಕ್ಕರೆಗಳನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದು ಸಾರ್ವಜನಿಕರು ಒಕ್ಕೊರಲಿನಿಂದ ಹೇಳಿದ್ದಾರೆ.

 


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!