ಊಲವಾಡಿ ಪಂಚಾಯತಿಯಲ್ಲಿ ಜೆಡಿಎಸ್ ಜಾಗೃತಿ:ಸ್ವಾರ್ಥಿ ರಾಜಕಾರಣಿಗಳ ವಿರುದ್ಧ ಜೆಡಿಎಸ್ ಮುಖಂಡ ಸುಬ್ರಮಣ್ಯಂ ಗರಂ!

ಊಲವಾಡಿ ಪಂಚಾಯತಿ ವಶಕ್ಕೆ ಜೆಡಿಎಸ್ ಬಿಗ್ ಪ್ಲಾನ್! ನೂತನ ಪದಾಧಿಕಾರಿಗಳ ನೇಮಕ,ಕಾರ್ಯಕರ್ತರಿಗೆ ಸುಬ್ರಮಣ್ಯಂ ಕರೆ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಊಲವಾಡಿ ಗ್ರಾಮದಲ್ಲಿ ಜೆಡಿಎಸ್ ಮುಖಂಡ ಸುಬ್ರಮಣ್ಯಂ ಅವರ ನೇತೃತ್ವದಲ್ಲಿ ಪಂಚಾಯತಿ ವ್ಯಾಪ್ತಿಯ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳ ಪ್ರಮುಖ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಮುಖಂಡ ಸುಬ್ರಮಣ್ಯಂ ಮುಂದಿನ ಚುನಾವಣೆಗೆ ಸಿದ್ಧತೆಯಾಗಿ ಪಂಚಾಯತಿಯಲ್ಲಿ ಜನರಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವ,ಕಷ್ಟ-ಸುಖಗಳಿಗೆ ಸ್ಪಂದಿಸುವ ಸೂಕ್ತ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕಾಗಿದೆ.ಕಳೆದ 10 ವರ್ಷಗಳಿಂದ ಊಲವಾಡಿ ಪಂಚಾಯತಿಯನ್ನು ಪಕ್ಷ ಕಳೆದುಕೊಂಡಿರುವುದಕ್ಕೆ ಪಕ್ಷದ ಬ್ಯಾನರ್‌ನಲ್ಲಿ ಗೆದ್ದು,ನಂತರ ಸ್ವಾರ್ಥಕ್ಕಾಗಿ ಬೇರೆ ಪಕ್ಷಗಳಿಗೆ ಜಾರುವ ಅಭ್ಯರ್ಥಿಗಳೇ ಕಾರಣ ಎಂದು ಕಿಡಿಕಾರಿದರು.
ಇಂತಹ ಘಟನೆಗಳು ಮರುಕಳಿಸದಂತೆ ಶ್ರದ್ಧೆಯಿಂದ ಕೆಲಸ ಮಾಡುವವರನ್ನು ಆಯ್ಕೆ ಮಾಡಬೇಕಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಕಾಲುವೆಗಳು,ದಾರಿಗಳು ಹಾಗೂ ಮೂಲಸೌಕರ್ಯಗಳ ಕೊರತೆಯಿದ್ದು,ಪ್ರಸ್ತುತ ಇರುವ ಸದಸ್ಯರ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕುಂಠಿತಗೊಂಡಿದೆ. ನರೇಗಾ ಮತ್ತು ಪಂಚಾಯತಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು.ಈ ಬಾರಿ ಊಲವಾಡಿ ಪಂಚಾಯತಿಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯಲೇಬೇಕು.
ಪಂಚಾಯತಿ ಸದಸ್ಯರಾದರೆ ಮಾತ್ರ ಬಡಜನರಿಗೆ ಮನೆ, ದನದ ಕೊಟ್ಟಿಗೆ ಮುಂತಾದ ಸೌಲಭ್ಯಗಳನ್ನು ತಲುಪಿಸಲು ಸಾಧ್ಯ.ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ಶ್ರಮಿಸಿ ಊಲವಾಡಿ ಪಂಚಾಯತಿಯನ್ನು ಪ್ರಮುಖ ಮಟ್ಟಕ್ಕೆ ತರಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಪಂಚಾಯತಿ ವ್ಯಾಪ್ತಿಯ ಅಧ್ಯಕ್ಷರಾಗಿ ಸುಬ್ರಮಣ್ಯಂ,ಕಾರ್ಯಾಧ್ಯಕ್ಷರಾಗಿ ರಾಜಣ್ಣ, ಉಪಾಧ್ಯಕ್ಷರಾಗಿ ಪಿ ವೆಂಕಟರೆಡ್ಡಿ,ಕಾರ್ತಿಕ್ ರೆಡ್ಡಿ, ಮಂಜುನಾಥ್ ಮಣಿ, ಪ್ರಧಾನ ಕಾರ್ಯದರ್ಶಿಗಳಾಗಿ ರಾಜು,ಅಶ್ವಥ್, ಪೆದ್ದನ್ನ, ಖಜಾಂಚಿ ಟಿ ಎಸ್ ವೆಂಕಟರೆಡ್ಡಿ, ಕಾರ್ಯದರ್ಶಿಗಳಾಗಿ ಸುದರ್ಶನ್ ರೆಡ್ಡಿ, ನಾರಾಯಣಸ್ವಾಮಿ,ಮಂಜು,ಎಂ ವಿ ರಾಮಪ್ಪ, ಸದಸ್ಯರಾಗಿ ಮಂಜುನಾಥ್,ವೆಂಕಟರೆಡ್ಡಿ, ಶ್ರೀನಿವಾಸ್,ಕದಿರಪ್ಪ,ಚೇತನ್, ಶ್ರೀನಿವಾಸ್ ರೆಡ್ಡಿ,ಆಂಜನೇಯರೆಡ್ಡಿ,ಕೃಷ್ಣಪ್ಪ,ಶಿವಶಂಕರ್, ಅಶ್ವತಪ್ಪ,ಶಶಾಂಕ್ ಗೌಡ,ಗೋಪಿನಾಥ್, ರವರನ್ನು ಆಯ್ಕೆ ಮಾಡಲಾಯಿತು.
ವರದಿ:ಕೆ.ಮುತ್ತಕದಹಳ್ಳಿ ವೆಂಕಟಾಚಲಪತಿ ಪೊಲೀಸ್ ವಾರ್ತೆ ಚಿಕ್ಕಬಳ್ಳಾಪುರ ಜಿಲ್ಲಾ ವರದಿಗಾರರು



