Crime Newsಕ್ರೈಂ ಸುದ್ದಿಜಿಲ್ಲಾ ಸುದ್ದಿರಾಜ್ಯ ಸುದ್ದಿ

ಖಾಸಗಿ ಬಸ್ ಬೈಕ್ ಗೆ ಡಿಕ್ಕಿ,ಗ್ರಾಮಾಂತರ ಠಾಣೆಯ ಪೊಲೀಸ್ ಜೀಪ್ ಚಾಲಕ ಮೃತ,ಸ್ಥಳಕ್ಕೆ ಬೇಟಿ ಕೊಟ್ಟ ಡಿವೈಎಸ್ಪಿ

Share News

*ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚೆಮ್ಮನೂರು ಜುವೆಲರ್ಸ್ ಬಳಿ ಘಟನೆ*

ಚಿಕ್ಕಬಳ್ಳಾಪುರ :ಖಾಸಗಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ವಾಹನ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.

ಮೃತಪಟ್ಟ ಪೊಲೀಸ್ ವಾಹನ ಚಾಲಕ ಚಿಂತಾಮಣಿ ತಾಲ್ಲೂಕಿನ ಇರಗಂಪಲ್ಲಿ ಗ್ರಾಮದ ಬಳಿ ಇರುವ ಗುಂದಿಕೆರೆ ಗ್ರಾಮದ ಶ್ರೀನಿವಾಸ್(55 ವರ್ಷ)ಎಂದು ಗುರುತಿಸಲಾಗಿದೆ.

ಸುಮಾರು ದಿನಗಳಿಂದ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಜೀಪ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀನಿವಾಸ್ ಇಂದು ಬೆಳಗ್ಗೆ ತಮ್ಮ ಗ್ರಾಮದ ತೋಟದಲ್ಲಿ ಕೆಲಸ ಮುಗಿಸಿ ತನ್ನ ದ್ವಿಚಕ್ರ ವಾಹನದಲ್ಲಿ ಪೊಲೀಸ್ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ವೇಳೆ ಚಿಂತಾಮಣಿ ನಗರದ ಶಿಡ್ಲಘಟ್ಟ ರಸ್ತೆಯ ಚೆಮ್ಮನೂರ್ ಜುವೆಲ್ಲರ್ಸ್ ಮುಂಭಾಗ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪೋಲಿಸ್ ವಾಹನ ಚಾಲಕ ಶ್ರೀನಿವಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆಯ ವಿಷಯ ತಿಳಿದ ತಕ್ಷಣ ಡಿವೈಎಸ್ಪಿ ಮುರುಳಿಧರ್,ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಿಜಿ ಕುಮಾರ್,ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್,ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

ಪೊಲೀಸ್ ವಾಹನ ಚಾಲಕ ಶ್ರೀನಿವಾಸ್ ನಿಧನಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳಾದ ಕುಶಾಲ್ ಚೌಕ್ಸೆ,ಡಿವೈಎಸ್ಪಿ ಮುರಳಿಧರ್,ಚಿಂತಾಮಣಿ ನಗರಸಭೆಯ ಪೌರಾಯುಕ್ತರಾದ ಜಿ ಏನ್ ಚಲಪತಿ,ಸಂತಾಪ ಸೂಚಿಸಿದ್ದಾರೆ.

ಘಟನೆಯ ವಿಷಯ ತಿಳಿದ ತಕ್ಷಣ ಅಲ್ಲಿ ಜಮಾಯಿಸಿದ ಹಲವು ಸ್ಥಳೀಯರು ಮಾಧ್ಯಮದವರೊಂದಿಗೆ ಮಾತನಾಡಿ ನಗರ ಭಾಗದಲ್ಲಿ ವಾಹನಗಳು ಅಡ್ಡದ್ದಿಡ್ಡಿ ನಿಲ್ಲಿಸಿರುವ ಕಾರಣಕ್ಕೆ ಇಂತಹ ಘಟನೆಗಳು ಸಂಭವಿಸುತ್ತಿರುತ್ತದೆ.

ಹಾಗಾಗಿ ಸಂಬಂಧಪಟ್ಟ ಇಲಾಖೆಗಳು ನಗರ ಭಾಗದಲ್ಲಿ ಅಡ್ಡಾದಿಡ್ಡಿ ಹಾಗೂ ಮುಖ್ಯ ರಸ್ತೆಗಳ ಅಕ್ಕ ಪಕ್ಕದಲ್ಲಿ ನಿಲ್ಲಿಸುವ ವಾಹನಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಿಬೇಕೆಂದು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ವರದಿ:ಕೆ.ಮುತ್ತಕದಹಳ್ಳಿ ವೆಂಕಟಾಚಲಪತಿ ಪೊಲೀಸ್ ವಾರ್ತೆ ಚಿಕ್ಕಬಳ್ಳಾಪುರ


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!