ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ರಸ್ತೆಗೆ ಅಡ್ಡಬಂದ ನಾಯಿ ತಪ್ಪಿಸಲು ಹೋಗಿ ಉರುಳಿಬಿದ್ದ ಕಾರು: ಇಬ್ಬರು ದುರ್ಮರಣ

Share News

ಯಾದಗಿರಿ: ರಸ್ತೆಗೆ ಏಕಾಏಕಿ ಅಡ್ಡಬಂದ ನಾಯಿಯನ್ನು ತಪ್ಪಿಸಲು ಹೋಗಿ ಕಾರೊಂದು ಪಲ್ಟಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟು, ಐವರು ತೀವ್ರವಾಗಿ ಗಾಯಗೊಂಡಿರುವ ಭೀಕರ ಘಟನೆ ಯಾದಗಿರಿ-ರಾಯಚೂರು ಮುಖ್ಯರಸ್ತೆಯ ಯರಗೊಳ ಬೈಪಾಸ್ ಬಳಿ ಸೆಪ್ಟೆಂಬರ್ 1ರಂದು ಬೆಳಿಗ್ಗೆ ನಡೆದಿದೆ.

​ಬೆಂಗಳೂರಿನಿಂದ ಕಲಬುರಗಿಯ ಪ್ರಸಿದ್ಧ ಬಂದೇನವಾಜ್ ದರ್ಗಾಕ್ಕೆ ತೆರಳುತ್ತಿದ್ದ ಏಳು ಮಂದಿ ಪ್ರಯಾಣಿಕರಿದ್ದ ಕಾರು (KA-01 NG-4977) ಅಪಘಾತಕ್ಕೀಡಾಗಿದೆ. ಮೃತರನ್ನು ಸಾಹಿಲ್ ಶರೀಫ್ (25) ಹಾಗೂ ಸೈಯದ್ ಯಾಸೀನ್ (23) ಎಂದು ಗುರುತಿಸಲಾಗಿದೆ.

​ಅಪಘಾತದಲ್ಲಿ ಕಾರಿನಲ್ಲಿದ್ದ ಸೈಯದ್ ಆಸೀಫ್, ವಸೀಮ್, ಅಲಿಜಾನ್ ಪಾಷಾ, ಸಮೀರ್ ಹಾಗೂ ಕಾರು ಚಾಲನೆ ಮಾಡುತ್ತಿದ್ದ ಅನ್ಸಾರಿ (23) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಯಾದಗಿರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅದೇ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

​ಘಟನೆಯ ವಿವರ:

ಸೆಪ್ಟೆಂಬರ್ 1ರ ಬೆಳಿಗ್ಗೆ ಸುಮಾರು 8:10ರ ವೇಳೆಗೆ ಯರಗೊಳ ಗ್ರಾಮದ ಬೈಪಾಸ್ ರಸ್ತೆಯಲ್ಲಿ ಕಾರು ಚಲಿಸುತ್ತಿದ್ದಾಗ ಏಕಾಏಕಿ ನಾಯಿಯೊಂದು ಅಡ್ಡ ಬಂದಿದೆ. ಈ ವೇಳೆ ಚಾಲಕ ಅನ್ಸಾರಿ ನಾಯಿಯನ್ನು ತಪ್ಪಿಸಲು ಯತ್ನಿಸಿ ಹಠಾತ್ ಬ್ರೇಕ್ ಹಾಕಿದಾಗ, ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಗೆ ಪಲ್ಟಿಯಾಗಿದೆ. ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಈ ದುರಂತಕ್ಕೆ ಕಾರಣವೆಂದು ಹೇಳಲಾಗಿದೆ.

​ಘಟನೆಗೆ ಸಂಬಂಧಿಸಿದಂತೆ ಗಾಯಾಳು ಸೈಯದ್ ಆಸೀಫ್ ನೀಡಿದ ದೂರಿನ ಮೇರೆಗೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಗುನ್ನೆ ನಂ. 190/2026, ಕಲಂ 281, 125(2), 106(2) BNS) ದಾಖಲಾಗಿದೆ. ಗ್ರಾಮೀಣ ಠಾಣೆಯ ಪಿಎಸ್‌ಐ ವಿರೇಶ್ ಕೆ.ಎಂ. ಅವರ ನೇತೃತ್ವದಲ್ಲಿ ಮುಂದಿನ ತನಿಖೆ ಮುಂದುವರಿದಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!