ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜಕೀಯರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ವೈಫಲ್ಯಗಳ ವಿರುದ್ಧ ಹರಿದುಬಂದ ಆಕ್ರೋಶ: ಕಮಲ ನಾಯಕರ ವಾಗ್ದಾಳಿ!

Share News

ಲಿಂಗಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಹಾಗೂ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ಹಮ್ಮಿಕೊಂಡಿರುವ ಐತಿಹಾಸಿಕ ಪಾದಯಾತ್ರೆಯಲ್ಲಿ ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

​ನಾಯಕರ ಪ್ರಮುಖ ಹೇಳಿಕೆಗಳ ವಿವರ:

​ಸುಧಾಕರ ರೆಡ್ಡಿ (ಸಹ ಉಸ್ತುವಾರಿ): “ಇದು ದಲಿತ, ರೈತ, ಎಸ್.ಟಿ. ಹಾಗೂ ಮಹಿಳಾ ವಿರೋಧಿಯಾದ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ.”

​ಬಸವರಾಜ ಬೊಮ್ಮಾಯಿ (ಮಾಜಿ ಸಿಎಂ): “ಕರ್ನಾಟಕದಲ್ಲಿ ಮುಂದೆ ವಿವಿಧ ವಿಷಯಗಳನ್ನಿಟ್ಟುಕೊಂಡು ನಿರಂತರ ಹೋರಾಟ ನಡೆಯಲಿದೆ. ಜನತೆಯ ಪರವಾಗಿ ನಾವು ಧ್ವನಿಯಾಗಿ ಕೆಲಸ ಮಾಡಲಿದ್ದು, ಪ್ರತಿಯೊಬ್ಬರೂ ನಮಗೆ ಹೆಗಲಿಗೆ ಹೆಗಲು ಕೊಡಬೇಕು.”

​ಜಗದೀಶ ಶೆಟ್ಟರ್ (ಮಾಜಿ ಸಿಎಂ): “ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಈ ಪಾದಯಾತ್ರೆ ನಡೆಯುತ್ತಿದೆ. ಕಾಂಗ್ರೆಸ್ ಸಂಪುಟದಲ್ಲಿ ಡಿಕೆಶಿ, ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಎಂಬ ವಿವಿಧ ಗುಂಪುಗಳಿವೆ. ಪಕ್ಷಕ್ಕೆ ದೇಣಿಗೆ ನೀಡಿದವರೇ ಇಲ್ಲಿ ಸಿಎಂ ಹಾಗೂ ಸಚಿವರಾಗಿದ್ದಾರೆ.”

​ಆರ್. ಅಶೋಕ್ (ವಿಧಾನಪರಿಷತ್ ವಿಪಕ್ಷ ನಾಯಕ): “ಸಿದ್ದರಾಮಯ್ಯ ಸರ್ಕಾರದಲ್ಲಿ ದರೋಡೆ ನಡೆಯುತ್ತಿತ್ತು, ಈಗ ಡಿಕೆಶಿ ಸರ್ಕಾರದಲ್ಲಿ ತೆರಿಗೆ ಹೆಚ್ಚಿಸಿ ಸಾರ್ವಜನಿಕರ ಜೇಬು ಕತ್ತರಿಸಲಾಗುತ್ತಿದೆ. 175 ತಾಲೂಕುಗಳಲ್ಲಿ ಬರಗಾಲವಿದ್ದರೂ ಕೇವಲ 101 ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದೆ.”

​ಛಲವಾದಿ ನಾರಾಯಣಸ್ವಾಮಿ (ವಿಧಾನಪರಿಷತ್ ವಿಪಕ್ಷ ನಾಯಕ): “ಇದು 10 ದಿನಗಳ ಕಾಲ ನಡೆಯುವ ಜನಪರ ಪಾದಯಾತ್ರೆ. ಕಾಂಗ್ರೆಸ್ ಸರ್ಕಾರ ಶೌಚಾಲಯಗಳನ್ನೂ ಕಟ್ಟಿಸದೆ, ಕೇಂದ್ರದಿಂದ ಬಂದ ಹಣವನ್ನೂ ಲೂಟಿ ಮಾಡಿದೆ.”

​ಗೋವಿಂದ ಕಾರಜೋಳ (ಸಂಸದ): “ದಲಿತರಿಗೆ ಮೀಸಲಾದ ₹53 ಸಾವಿರ ಕೋಟಿಗೂ ಹೆಚ್ಚು ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ವಾಲ್ಮೀಕಿ ನಿಗಮದ ಲೂಟಿಯಾದ ಹಣ ತಕ್ಷಣವೇ ಖಜಾನೆಗೆ ವಾಪಸ್ ಬರಬೇಕು.”

​ಬಿ. ಶ್ರೀರಾಮುಲು (ಮಾಜಿ ಸಚಿವ): “ಅರಮನೆಯಲ್ಲಿ ಕುಳಿತು ಆಡಳಿತ ನಡೆಸುತ್ತಿರುವ ಈ ಸರ್ಕಾರ ಸಾರ್ವಜನಿಕರನ್ನು ಬೀದಿಗೆ ತಂದಿದೆ. ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.”

​ಸಿ.ಟಿ. ರವಿ (ಮಾಜಿ ಸಚಿವ): “ಒಂದೆಡೆ ಬರದಿಂದ ಕಂಗೆಟ್ಟ ಜನರಿದ್ದರೆ, ಇನ್ನೊಂದೆಡೆ ಬರಗೆಟ್ಟ ಕಾಂಗ್ರೆಸ್ ಇದೆ. ಕೇವಲ ನಾಗೇಂದ್ರ ರಾಜೀನಾಮೆಯಿಂದ ಸಾಲದು, ಲೂಟಿಯಾದ ಸಂಪೂರ್ಣ ಹಣ ವಾಪಸ್ ಬರಬೇಕು.”

​ಜನಾರ್ದನ ರೆಡ್ಡಿ (ಮಾಜಿ ಸಚಿವ): “ಲಿಂಗಸೂರಿನಿಂದ ಪಾದಯಾತ್ರೆ ಆರಂಭವಾಗಿರುವುದು ಶುಭ ಸೂಚನೆ. ನವಲಿ ಜಲಾಶಯ ನಿರ್ಮಾಣಕ್ಕೆ ₹20 ಸಾವಿರ ಕೋಟಿ ಮೀಸಲಿಡಬೇಕು. 2028ರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ.”

​ವಿರೂಪಾಕ್ಷಪ್ಪ (ಮಾಜಿ ಸಂಸದ): “ಕುರಿ ಕಾಯಲು ತೋಳವನ್ನು ನೇಮಿಸಿದಂತೆ ಈ ಸರ್ಕಾರದ ಸ್ಥಿತಿಯಿದೆ.”

​ಶಶೀಲ್ ನಮೋಶಿ (ವಿಧಾನಪರಿಷತ್ ಅಭ್ಯರ್ಥಿ): “ಮಳೆಯಿಲ್ಲದೆ ಈ ಭಾಗದಲ್ಲಿ ಭೀಕರ ಬರ ಎದುರಾಗಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ.”

​ಮಾನಪ್ಪ ವಜ್ಜಲ್ (ಶಾಸಕ): “ಲಿಂಗಸೂರಿನಿಂದ ಬಳ್ಳಾರಿವರೆಗೆ ನಡೆಯುವ ಈ ಪಾದಯಾತ್ರೆಯು ಸರ್ಕಾರದ ಹಗರಣ ಹಾಗೂ ವೈಫಲ್ಯಗಳನ್ನು ಸಾರ್ವಜನಿಕರ ಮುಂದಿಡಲಿದೆ.”


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!