ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಹಾಲು ಸಂಘದ ₹11.40 ಲಕ್ಷ ಹಣ ದುರುಪಯೋಗ ಆರೋಪ – ಮಾಜಿ ಕಾರ್ಯದರ್ಶಿ ಸೇರಿ ಐವರ ವಿರುದ್ಧ ಎಫ್‌ಐಆರ್

Share News

ರಾಣೇಬೆನ್ನೂರು: ತಾಲೂಕಿನ ದಂಡಗಿಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಸಾರ್ವಜನಿಕ ನಿಧಿಯ ಹಣವನ್ನು ವೈಯಕ್ತಿಕ ಲಾಭಕ್ಕಾಗಿ ಅಕ್ರಮವಾಗಿ ದುರುಪಯೋಗಪಡಿಸಿಕೊಂಡ ಆರೋಪದಡಿ ಮಾಜಿ ಕಾರ್ಯದರ್ಶಿ ಹಾಗೂ ಮಾಜಿ ಅಧ್ಯಕ್ಷ ಸೇರಿದಂತೆ ಐವರ ವಿರುದ್ಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

​ಹಲಗೇರಿ ಪೊಲೀಸರು ಬಿ.ಎನ್.ಎಸ್.-2023ರ ಕಲಂ 314, 316 ಹಾಗೂ 318ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೆತ್ತಿಕೊಂಡಿದ್ದಾರೆ.

​ಬ್ಯಾಂಕ್ ಖಾತೆ ವಹಿವಾಟಿನಲ್ಲಿ ಅಕ್ರಮ?

ದಂಡಗಿಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಕರ್ನಾಟಕ ಗ್ರಾಮೀಣ ಬ್ಯಾಂಕ್ (ಹಲಗೇರಿ ಶಾಖೆ) ಖಾತೆಯ ಸ್ಟೇಟ್‌ಮೆಂಟ್ ಪರಿಶೀಲಿಸಿದ ವೇಳೆ ಹಲವು ಹಂತಗಳಲ್ಲಿ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ.

​ಮಾಜಿ ಕಾರ್ಯದರ್ಶಿ ಪತ್ನಿ: ₹7,30,086

​ಮಾಜಿ ಅಧ್ಯಕ್ಷ: ₹2,40,034

​ಮತ್ತೊಬ್ಬ ಆರೋಪಿ: ₹1,70,010

​ಹೀಗೆ ಒಟ್ಟು ₹11,40,130 ಸಂಘದ ನಿಧಿಯನ್ನು ಆರೋಪಿಗಳು ಒಳಸಂಚು ನಡೆಸಿ ಪರಸ್ಪರ ಖಾತೆಗಳಿಗೆ ವರ್ಗಾಯಿಸಿಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ.

​ಕಟ್ಟುನಿಟ್ಟಿನ ತನಿಖೆಗೆ ಆಗ್ರಹ:

ಸಹಕಾರ ಸಂಘದ ಹಣವೇ ದುರುಪಯೋಗವಾಗಿರುವ ಆರೋಪ ಕೇಳಿಬಂದಿರುವುದು ದಂಡಗಿಹಳ್ಳಿ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. “ಹಾಲು ಉತ್ಪಾದಕರ ಹಣ ದುರುಪಯೋಗವಾಗಿರುವುದು ಗಂಭೀರ ವಿಚಾರ. ತನಿಖೆಯಿಂದ ಸಂಪೂರ್ಣ ಸತ್ಯಾಸತ್ಯತೆ ಹೊರಬಂದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

​ಬ್ಯಾಂಕ್ ವಹಿವಾಟು, ದಾಖಲೆಗಳು ಹಾಗೂ ಆರೋಪಿಗಳ ಪಾತ್ರದ ಕುರಿತು ಹಲಗೇರಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!