ಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಚಿಂತಾಮಣಿಯಲ್ಲಿ ಬಿಜೆಪಿ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆ:ಸೀಕಲ್ ರಾಮಚಂದ್ರಗೌಡ ಕರೆ

Share News

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಕೆಎಂಡಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ಚಿಂತಾಮಣಿ ತಾಲೂಕು ಘಟಕದ ವತಿಯಿಂದ ಆಗ್ನೇಯ ಪದವೀಧರರ ಕ್ಷೇತ್ರದ ಮುಂಬರುವ ಚುನಾವಣೆಯ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಅವರು ಆಗ್ನೇಯ ಪದವೀಧರರ ಕ್ಷೇತ್ರವು ಚಿತ್ರದುರ್ಗ,ದಾವಣಗೆರೆ, ತುಮಕೂರು,ಕೋಲಾರ,ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳನ್ನೊಳಗೊಂಡ ಬೃಹತ್ ಕ್ಷೇತ್ರವಾಗಿದೆ. ಕಳೆದ ಚುನಾವಣೆಯಲ್ಲಿ ಸುಮಾರು 1 ಲಕ್ಷದಷ್ಟಿದ್ದ ಪದವೀಧರ ಮತದಾರರ ಸಂಖ್ಯೆ ಈ ಬಾರಿ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ತಿಳಿಸಿದರು.

ಅವರು ಮುಂದುವರಿದು ಮಾತನಾಡಿ ದೇಶದಲ್ಲಿ ಇಂದು ಶೇಕಡಾ 75ಕ್ಕೂ ಹೆಚ್ಚು ಭಾಗದಲ್ಲಿ ಬಿಜೆಪಿಯ ಪ್ರಭಾವವಿದೆ. ಆದರೆ,

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತಾತ್ಮಕ ಯಂತ್ರವನ್ನು ಬಳಸಿಕೊಂಡು ಮತದಾರರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ.ಈ ಬಗ್ಗೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಮತ್ತು ಮುಖಂಡರು ಜಾಗೃತರಾಗಿದ್ದು,ಮತದಾರರಲ್ಲಿ ಅರಿವು ಮೂಡಿಸಬೇಕಿದೆ”ಎಂದರು.

ಕ್ಷೇತ್ರ ದೊಡ್ಡದಾಗಿರುವುದರಿಂದ ನಮ್ಮ ಪಕ್ಷದ ಅಭ್ಯರ್ಥಿ ಸುರೇಶ್ ಅವರು ಪ್ರತಿಯೊಬ್ಬ ಮತದಾರರನ್ನು ವೈಯಕ್ತಿಕವಾಗಿ ತಲುಪುವುದು ಕಷ್ಟಸಾಧ್ಯ.

ಹಾಗಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೇ ಅಭ್ಯರ್ಥಿಯಂತೆ ಶ್ರಮಿಸಬೇಕು.

ಪ್ರತಿಯೊಬ್ಬ ಪದವೀಧರ ಮತದಾರರನ್ನು ಒಂದಲ್ಲ,ಎರಡೆರಡು ಬಾರಿ ಸಂಪರ್ಕಿಸಿ,ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಹಾಗೂ ಬಿಜೆಪಿ ಸರ್ಕಾರದ ಸಾಧನೆಗಳನ್ನು ತಲುಪಿಸಿ ಮತಯಾಚನೆ ಮಾಡಬೇಕು.ಆ ಮೂಲಕ ನಮ್ಮ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸಿ ನರೇಂದ್ರ ಮೋದಿ ಅವರ ಕೈಬಲಪಡಿಸಬೇಕು ಎಂದು ಮನವಿ ಮಾಡಿದರು.

ಈ ಸಭೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡ ಜಿ ಎನ್ ವೇಣುಗೋಪಾಲ್,ಅರುಣ್ ಬಾಬು,ಮಹೇಶ್ ಬೈ, ನರಸಿಂಹರಾಜು,ಗೋವಿಂದರಾಜು,ವೆಂಕಟರಾವ್ ರೆಡ್ಡಿ, ನರಸಿಂಹಪ್ಪ,ನಾಗರಾಜ್,ಆನಂದ್ ರೆಡ್ಡಿ, ಪಾಲೇಪಲ್ಲಿ ಶಿವಾರೆಡ್ಡಿ,ಜಯರಾಮ್ ರೆಡ್ಡಿ,ರಾಜಾರಾಮ್,ಅಶ್ವತ್ ರೆಡ್ಡಿ, ದೇವರಾಜ್,ರಾಜಶೇಖರ್ ರೆಡ್ಡಿ,ಶಿವಾರೆಡ್ಡಿ,ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವರದಿ:ಕೆ.ಮುತ್ತಕದಹಳ್ಳಿ ವೆಂಕಟಾಚಲಪತಿ ಪೊಲೀಸ್ ವಾರ್ತೆ ಚಿಕ್ಕಬಳ್ಳಾಪುರ ಜಿಲ್ಲಾ ವರದಿಗಾರರು


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!