ಜಿಲ್ಲಾ ಸುದ್ದಿಕ್ರೈಂ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

15 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಟ್ರ್ಯಾಪ್ – ಮಕ್ಕಳ ರಕ್ಷಣಾಧಿಕಾರಿ, ಕಾರು ಚಾಲಕ ವಶಕ್ಕೆ!

Share News

ಗದಗ: ಹೊರಗುತ್ತಿಗೆ ಸಿಬ್ಬಂದಿಯ ವೇತನ ಬಿಡುಗಡೆ ಮಾಡಲು ಹಣದ ಬೇಡಿಕೆಯಿಟ್ಟು, 15 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಗದಗ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಅವರ ಕಾರು ಚಾಲಕ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

​ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ (DCPO) ರಫೀಕಾ ಎ. ಹುಲ್ಲೂರು ಹಾಗೂ ಅವರ ಕಾರು ಚಾಲಕ ಮೌಲಾನಾ ಲೋಕಾಯುಕ್ತ ವಶದಲ್ಲಿರುವ ಆರೋಪಿಗಳು.

​30 ಸಾವಿರಕ್ಕೆ ಬೇಡಿಕೆ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಅಭಿಷೇಕ್ ಎಂಬ ಸಿಬ್ಬಂದಿಯ ವೇತನ ಬಿಡುಗಡೆಗೊಳಿಸಲು ರಫೀಕಾ ಎ. ಹುಲ್ಲೂರು 30,000 ರೂಪಾಯಿ ಲಂಚದ ಬೇಡಿಕೆಯಿಟ್ಟಿದ್ದರು.

​ಕಾರು ಚಾಲಕನ ಮೂಲಕ ಲಂಚ ಸ್ವೀಕಾರ: ಮೊದಲ ಕಂತಿನ ರೂಪದಲ್ಲಿ 15,000 ರೂಪಾಯಿ ಹಣವನ್ನು ಅಧಿಕಾರಿಯ ಪರವಾಗಿ ಕಾರು ಚಾಲಕ ಮೌಲಾನಾ ಸ್ವೀಕರಿಸುತ್ತಿದ್ದಾಗ, ಕಾಯ್ದು ಕುಳಿತಿದ್ದ ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್‌ ಆಗಿ ದಾಳಿ ನಡೆಸಿ ಟ್ರ್ಯಾಪ್ ಮಾಡಿದ್ದಾರೆ.

​ಇಬ್ಬರೂ ವಶಕ್ಕೆ: ಲಂಚದ ಹಣದೊಂದಿಗೆ ಕಾರು ಚಾಲಕ ಮೌಲಾನಾ ಹಾಗೂ ಆತನಿಗೆ ಸೂಚನೆ ನೀಡಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫೀಕಾ ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ಸುಧೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ.

​ಲೋಕಾಯುಕ್ತ ಡಿಎಸ್‌ಪಿ ಲೋಕೇಶ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಪರಮೇಶ್, ಪಿಎಸ್‌ಐ ತೇಳಿ ಹಾಗೂ ಆರು ಜನ ಸಿಬ್ಬಂದಿಗಳನ್ನೊಳಗೊಂಡ ತಂಡ ಈ ಯಶಸ್ವಿ ಕಾರ್ಯಚರಣೆ ನಡೆಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!