ಜಿಲ್ಲಾ ಸುದ್ದಿರಾಜ್ಯ ಸುದ್ದಿ

ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರ ಮತ್ತೊಂದು ಎಡವಟ್ಟು

Share News

ಚಿಕ್ಕಬಳ್ಳಾಪುರ :ಜಿಲ್ಲೆಯ ಚಿಂತಾಮಣಿ ತಾಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರ ಮತ್ತೊಂದು ಎಡವಟ್ಟು ಮುನಿನಾರಾಯಣಪ್ಪ ಮಾಡಿದ ಮತ್ತೊಂದು ಸಾಧನೆ ಏನೆಂದರೆ ಈ ಹಿಂದೆ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಒಂದು ಮತ್ತು ಎರಡನೇ ಹಂತದಲ್ಲಿ ಭೂಸ್ವಾಧೀನ ಪ್ರಕ್ರಿಯೆಗಿಂತ ಮುಂಚಿತವಾಗಿ ಮಲ್ಕಾಪುರ ತಳಗವಾರ ಮಾರಪ್ಪಲ್ಲಿ ಮಸ್ತೇನಹಳ್ಳಿ ರೈತರು ತಮ್ಮ ಜಮೀನುಗಳಲ್ಲಿ ಮಾವಿನ ಮರಗಳನ್ನು ಬೆಳೆದು ಪೋಷಣೆ ಮಾಡಿರುತ್ತಾರೆ.

ತದನಂತರ KIADB ಮಂಡಳಿಗೆ ಜಮೀನುಗಳು ಭೂ ಸ್ವಾಧೀನವಾಗಿರುತ್ತದೆ ಸದರಿ ಗ್ರಾಮಗಳಲ್ಲಿರುವ ರೈತರು ಬಹುಪಾಲು ಎಸ್ ಸಿ ಮತ್ತು ಎಸ್ ಟಿ ಜನಾಂಗಕ್ಕೆ ಸೇರಿದವರಾಗಿರುತ್ತಾರೆ ಈ ಗ್ರಾಮಗಳಲ್ಲಿನ ರೈತರು ಭೂಪರಿಹಾರ ಮತ್ತು ಸದರಿ ಜಮೀನುಗಳಲ್ಲಿನ ಮರ ಮಾಲ್ಕಿಗಳ ಪರಿಹಾರ ಪಡೆಯುವ ಸಂದರ್ಭದಲ್ಲಿ ಸದರಿ ಮುನಿನಾರಾಯಣಪ್ಪನವರು ಎಂ ಸಿ ಸುಧಾಕರ್ ಮತ್ತು ಈಗಿನ ಕಂದಾಯ ಮಂತ್ರಿಗಳಾದ ಕೃಷ್ಣ ಬೈರೇಗೌಡರ ಜೊತೆ ಚರ್ಚಿಸಿ ಸದನದಲ್ಲಿ ಪ್ರಸ್ತಾಪಿಸಿ ಸದರಿ ಮಾವಿನ ಮರಗಳಿಗೆ ಅವೈಜ್ಞಾನಿಕವಾಗಿ ಪರಿಹಾರ ವನ್ನು ರೈತರಿಗೆ KIADB ಅಧಿಕಾರಿಗಳು ನೀಡುತ್ತಿದ್ದಾರೆ ಎಂದು ಮಾನ್ಯ ಕಂದಾಯ ಸಚಿವರು ಈ ಹಿಂದೆ ಸದನದಲ್ಲಿ ಪ್ರಸ್ತಾಪಿಸಿದರು.

ಈ ಪ್ರಸ್ತಾವನೆಗೆ ಮೂಲ ಕಾರಣನಾದ ಜಂಗಮಶೀಗೆಹಳ್ಳಿ ಮುನಿನಾರಾಯಣಪ್ಪ ಅವರ ಉದ್ದೇಶ ಏನೆಂದರೆ ಮಾವಿನ ಮರಗಳಿಗೆ ಸರ್ಕಾರದಿಂದ ಹೆಚ್ಚು ಪರಿಹಾರ ಬಂದರೆ ಸದರಿ ರೈತರು ತಮ್ಮ ರಾಜಕೀಯ ಕೆಲಸ ಕಾರ್ಯಗಳಿಗೆ ಬರುವುದಿಲ್ಲ ಎಂದು ಮನವರಿಕೆ ಮಾಡಿಕೊಂಡು ಸದರಿ ರೈತರಿಗೆ KIADB ಯಿಂದ ಬರಬೇಕಾದ ಪರಿಹಾರಕ್ಕೆ ಕೊಳ್ಳಿ ಇಟ್ಟಿರುತ್ತಾರೆ.

ಆದರೆ ಈ ಮುನಿನಾರಾಯಣಪ್ಪ ನವರು ಈಗ ಭೂ ಸ್ವಾದಿನವಾಗಿರುವ ಜಮೀನುಗಳಲ್ಲಿ ಮಾವಿನ ಸಸಿಗಳನ್ನು ನಾಟಿ ಮಾಡುವ ಮೂಲಕ ಹೆಚ್ಚು ಪರಿಹಾರ ಪಡೆಯುವ ಸಲುವಾಗಿ ಹಾಲಿ ಇರುವ ಮಾವಿನ ತೋಪಿನಲ್ಲಿ ಇನ್ನೂ ಹೆಚ್ಚು ಮಾವಿನ ಸಸಿಗಳನ್ನು ನಾಟಿ ಮಾಡಿರುತ್ತಾರೆ ಇದರಿಂದ ಸರ್ಕಾರದ ಬೊಕ್ಕಸಕ್ಕೆ ತೀವ್ರ ನಷ್ಟವನ್ನು ಉಂಟುಮಾಡುವುದು ಮತ್ತು KIADB ಮಂಡಳಿಯಲ್ಲಿ ಭ್ರಷ್ಟಾಚಾರ ನಡೆಸಲು ಮುಂಚೂಣಿಯಲ್ಲಿ ಇರುವಂತೆ ಕಾಣುತ್ತಿದೆ ಎಂದು ಸುತ್ತ ಮುತ್ತಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.

ವರದಿ:ಕೆ.ಮುತ್ತಕದಹಳ್ಳಿ ವೆಂಕಟಾಚಲಪತಿ ಪೊಲೀಸ್ ವಾರ್ತೆ ಚಿಕ್ಕಬಳ್ಳಾಪುರ


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!