ಶಿರಸಿ: ಬಿಡ್ಕಿ ಸರ್ಕಲ್ನಿಂದ ಯುವಕ ನಾಪತ್ತೆ; ಪತ್ತೆಗಾಗಿ ಸಾರ್ವಜನಿಕರ ಸಹಕಾರಕ್ಕೆ ಪೊಲೀಸರ ಮನವಿ

ಶಿರಸಿ: ನಗರದ ಬಿಡ್ಕಿ ಸರ್ಕಲ್ ಬಳಿಯಿಂದ ಯುವಕನೋರ್ವ ದಿಢೀರ್ ನಾಪತ್ತೆಯಾಗಿರುವ ಘಟನೆ ವರದಿಯಾಗಿದ್ದು, ಈ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ವ್ಯಕ್ತಿಯ ವಿವರ:
ತಾಲ್ಲೂಕಿನ ಹುಲೇಕಲ್ ಗ್ರಾಮದ ನಿವಾಸಿ ರೋಹಿತಾಶ್ವ ಶಿವಾನಂದ ನೇತ್ರಕರ (31) ನಾಪತ್ತೆಯಾದ ದುರ್ದೈವಿ. ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿರುವ ಈತ, ಕಳೆದ ನವೆಂಬರ್ 8ರಂದು ಸಂಜೆ 5:30ರ ಸುಮಾರಿಗೆ ಶಿರಸಿ ನಗರದ ಬಿಡ್ಕಿ ಸರ್ಕಲ್ನಿಂದ ಹೊರಟವರು ಮನೆಗೆ ಮರಳದೆ ನಾಪತ್ತೆಯಾಗಿದ್ದಾರೆ. ಈ ಕುರಿತು ಶಿರಸಿ ನಗರ ಠಾಣೆಯಲ್ಲಿ ಪ್ರಕರಣ (ಗುನ್ನಾ ನಂ: 119/2025) ದಾಖಲಾಗಿದ್ದು, ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ವ್ಯಕ್ತಿಯ ಚಹರೆ ಮತ್ತು ಗುರುತುಗಳು:
ಹೆಸರು: ರೋಹಿತಾಶ್ವ ಶಿವಾನಂದ ನೇತ್ರಕರ
ವಯಸ್ಸು: 31 ವರ್ಷ
ದೇಹದಾರ್ಢ್ಯತೆ: ಸಾಧಾರಣ ಮೈಕಟ್ಟು, ಕಪ್ಪು ಕೂದಲು ಹಾಗೂ ಗಡ್ಡ ಬಿಟ್ಟಿರುತ್ತಾರೆ.
ಧರಿಸಿದ್ದ ಉಡುಪು: ಕಪ್ಪು ಮತ್ತು ಬಿಳಿ ಬಣ್ಣದ ತುಂಬು ತೋಳಿನ ಚೆಕ್ಸ್ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್.
ಮಾತನಾಡುವ ಭಾಷೆ: ಕನ್ನಡ, ಹಿಂದಿ ಮತ್ತು ತೆಲುಗು.
ಪೊಲೀಸರ ಮನವಿ:
ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಸಾರ್ವಜನಿಕರು ತಕ್ಷಣವೇ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಶಿರಸಿ ಪೊಲೀಸರು ಕೋರಿದ್ದಾರೆ.
ಶಿರಸಿ ನಗರ ಪೊಲೀಸ್ ಠಾಣೆ: 08384-226333
ಪಿ.ಎಸ್.ಐ (ಕಾನೂನು ಮತ್ತು ಸುವ್ಯವಸ್ಥೆ): 9480805264



