ಮಕ್ಕಳ ಸ್ನೇಹಿ ಪೊಲೀಸಿಂಗ್ಗೆ ಆದ್ಯತೆ; ಪೊಲೀಸ್ ಅಧಿಕಾರಿಗಳಿಗೆ ಸಾಮರ್ಥ್ಯ ವೃದ್ಧಿ ಕಾರ್ಯಾಗಾರ

ಮೈಸೂರು: ನಗರದ ಮಕ್ಕಳ ವಿಶೇಷ ಪೊಲೀಸ್ ಘಟಕದ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು, ತನಿಖಾಧಿಕಾರಿಗಳು ಹಾಗೂ ತನಿಖಾ ಸಹಾಯಕರಿಗೆ ‘ಮಕ್ಕಳ ರಕ್ಷಣಾ ಕಾಯ್ದೆಗಳು ಮತ್ತು ಮಕ್ಕಳ ಸ್ನೇಹಿ ಪೊಲೀಸಿಂಗ್’ ಕುರಿತು ಡಾನ್ ಬಾಸ್ಕೋ ಮಕ್ಕಳ ನಿವಾಸದಲ್ಲಿ ಒಂದು ದಿನದ ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಾಗಾರದ ಮುಖ್ಯ ವಿಷಯಗಳು:
ಕಾನೂನು ಅರಿವು: ಬಾಲನ್ಯಾಯ ಕಾಯ್ದೆ, ಪೋಕ್ಸೊ (POCSO) ಕಾಯ್ದೆ ಹಾಗೂ ಇತರ ಮಕ್ಕಳ ರಕ್ಷಣಾ ಕಾನೂನುಗಳ ಪರಿಣಾಮಕಾರಿ ಜಾರಿಯ ಕುರಿತು ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.
ಮಕ್ಕಳ ಸ್ನೇಹಿ ವಾತಾವರಣ: ಸಂಕಷ್ಟದಲ್ಲಿರುವ, ಕಷ್ಟಕ್ಕೆ ಸಿಲುಕಿದ ಅಥವಾ ಸಂತ್ರಸ್ತ ಮಕ್ಕಳೊಂದಿಗೆ ವ್ಯವಹರಿಸುವಾಗ ಅನುಸರಿಸಬೇಕಾದ ಸೂಕ್ಷ್ಮ ಹಾಗೂ ಮಕ್ಕಳ ಸ್ನೇಹಿ ಪೊಲೀಸಿಂಗ್ ವಿಧಾನಗಳ ಬಗ್ಗೆ ಅರಿವು ಮೂಡಿಸಲಾಯಿತು.
ಸಾಮರ್ಥ್ಯ ವೃದ್ದಿ: ತನಿಖಾ ಪ್ರಕ್ರಿಯೆಗಳನ್ನು ವೇಗವಾಗಿ ಮತ್ತು ಮಗುವಿನ ಹಿತದೃಷ್ಟಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ವಿಶೇಷ ಮಾರ್ಗದರ್ಶನ ನೀಡಲಾಯಿತು.




