ರೀಲ್ಸ್ ಜೋಡಿ ‘ಮಂಜ-ಲೀಲಾ’ ನಡುವೆ ಮತ್ತೆ ಹೈಡ್ರಾಮಾ: ಕಂಠಪೂರ್ತಿ ಕುಡಿದು ಪ್ರಿಯಕರನ ಮನೆಗೆ ದಾಳಿ ನಡೆಸಿದ ಮಂಜ!

ಬೆಂಗಳೂರು: ಸೋಷಿಯಲ್ ಮೀಡಿಯಾ ಮೂಲಕ ಗುರುತಿಸಿಕೊಂಡಿದ್ದ ‘ಮಂಜು-ಲೀಲಾ’ ದಂಪತಿಯ ಜೀವನದಲ್ಲಿ ಮತ್ತೆ ವಿವಾದ ತಲೆದೂರಿದ್ದು, ಹೆಂಡತಿ ಮತ್ತೆ ಪ್ರಿಯಕರನ ಜೊತೆ ಹೋಗಿದ್ದಾಳೆಂಬ ಕೋಪಕ್ಕೆ ಗಂಡ ಮಂಜ ಕಂಠಪೂರ್ತಿ ಕುಡಿದು ರಂಪಾಟ ನಡೆಸಿರುವ ಘಟನೆ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸೈಕಲ್ ಎಸೆದು ದರ್ಪ, ಪೊಲೀಸರಿಗೆ ದೂರು:
ಲೀಲಾ ಮತ್ತೆ ಪ್ರಿಯಕರ ಸಂತು ಜೊತೆ ತೆರಳಿದ್ದಾಳೆಂಬ ರೊಚ್ಚಿನಿಂದ ಮಂಜ, ಹುಳಿಮಾವು ಬಳಿಯ ಬಸವನಪುರದಲ್ಲಿರುವ ಸಂತು ಮನೆಗೆ ತೆರಳಿ ದಾದಾಗಿರಿ ನಡೆಸಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಮನೆಯಲ್ಲಿದ್ದ ಸಂತು ತಾಯಿಯ ಮೇಲೆಯೇ ಸೈಕಲ್ ಎತ್ತಿಹಾಕಿ ಅಟ್ಯಾಕ್ ಮಾಡಿದ್ದಾನೆ. ಈ ಸಂಬಂಧ ಮಂಜನ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಳೆಯ ‘ಟ್ರಯಾಂಗಲ್ ಲವ್’ ಹಿನ್ನೆಲೆ:
ಹಿಂದಿನ ಗಲಾಟೆ: ಈ ಹಿಂದೆ ಗಂಡ-ಮಕ್ಕಳನ್ನು ಬಿಟ್ಟು ಲೀಲಾ, ಪ್ರಿಯಕರ ಸಂತು ಜೊತೆ ಓಡಿಹೋಗಿದ್ದಾಗ ಮಂಜ “ಲೀಲಾ ನನ್ ಫ್ಲೇವರ್, ವಾಪಸ್ ಬಂದ್ಬಿಡು” ಎಂದು ಕಣ್ಣೀರಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ.
ಒಂದಾಗಿದ್ದ ಜೋಡಿ: ಬಳಿಕ ಲೀಲಾ ವಾಪಸ್ ಬಂದಿದ್ದು, ದಂಪತಿ ಒಂದಾಗಿ ರೀಲ್ಸ್ ಹಾಗೂ ಪ್ರಚಾರ ಕಾರ್ಯಗಳನ್ನು ಮಾಡಿಕೊಂಡು ಹೊಸ ಜೀವನ ಶುರು ಮಾಡಿದ್ದರು.
ಮತ್ತೆ ಶುರುವಾದ ಡ್ರಾಮಾ: ಒಂದಾಗಿ ಆರು ತಿಂಗಳು ಕಳೆಯುವುದರೊಳಗೆ ಮತ್ತೆ ಇಬ್ಬರ ನಡುವೆ ಜಗಳವಾಗಿದ್ದು, ಕಳೆದ ಒಂದೂವರೆ ತಿಂಗಳ ಹಿಂದೆ ಲೀಲಾ ಮತ್ತೆ ಮನೆ ಬಿಟ್ಟು ಹೋಗಿದ್ದಾಳೆ.
ಇದರಿಂದ ಆಕ್ರೋಶಗೊಂಡ ಮಂಜ ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ಸಂತು ಮನೆಗೆ ಹೋಗಿ ಸಾರ್ವಜನಿಕವಾಗಿ ಗಲಾಟೆ ಎಬ್ಬಿಸಿದ್ದು, ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾನೆ.



