ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜಕೀಯರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ರಾಜ್ಯದಲ್ಲಿರುವುದು ಎಡವಟ್ಟು ಮತ್ತು ಅಡಮುಟ್ಟು ಸರ್ಕಾರ: ಬಸವರಾಜ ಬೊಮ್ಮಾಯಿ

Share News

ಬಳ್ಳಾರಿ: “ರಾಜ್ಯದಲ್ಲಿ ಪ್ರಸ್ತುತ ಎಡವಟ್ಟು ಮತ್ತು ಅಡಮುಟ್ಟು ಸರ್ಕಾರ ಆಡಳಿತ ನಡೆಸುತ್ತಿದ್ದು, ಹೆಜ್ಜೆ ಹೆಜ್ಜೆಗೂ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಕರ್ನಾಟಕದ ಜನತೆಯ ಯೋಗ್ಯತೆಗೆ ತಕ್ಕಂತೆ ಈ ಸರ್ಕಾರವಿಲ್ಲ,” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.

​ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ 10 ದಿನಗಳ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

​ಕಾಂಗ್ರೆಸ್‌ನಿಂದ ದಲಿತರು ಹಾಗೂ ರೈತರಿಗೆ ಅನ್ಯಾಯ:

​ಮೀಸಲಾತಿ ಕಡಿತ: ಬಿಜೆಪಿ ಅವಧಿಯಲ್ಲಿ ಹೆಚ್ಚಿಸಲಾಗಿದ್ದ ಎಸ್‌ಸಿ (ಶೇ. 15 ರಿಂದ 17) ಹಾಗೂ ಎಸ್‌ಟಿ (ಶೇ. 3 ರಿಂದ 7) ಮೀಸಲಾತಿಯನ್ನು ಕಾಂಗ್ರೆಸ್ ಸರ್ಕಾರ ಮತ್ತೆ ಹಳೆಯ ಮಟ್ಟಕ್ಕೆ ಇಳಿಸಿದೆ. ಇದರಿಂದಾಗಿ ದಲಿತ ಸಮುದಾಯದ ನೂರಾರು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟುಗಳು ಕೈತಪ್ಪಿ ಅನ್ಯಾಯವಾಗಿದೆ.

​ಯೋಜನೆಗಳ ನಿರ್ಲಕ್ಷ್ಯ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಾಯ್ದಿರಿಸಿದ್ದ ಹಣ, ಬಳ್ಳಾರಿ ಜೀನ್ಸ್ ಪಾರ್ಕ್ ಹಾಗೂ ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟಿದ್ದ ಅನುದಾನ ಬಳಕೆಯಾಗದೆ ಮಂಗಮಾಯವಾಗಿದೆ. ತುಂಗಭದ್ರಾ ಸಮಾನಾಂತರ ಜಲಾಶಯ ಯೋಜನೆಯನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ.

​ರೈತ ವಿರೋಧಿ ಧೋರಣೆ: ರೈತರ ಮಕ್ಕಳಿಗೆ ನೀಡುತ್ತಿದ್ದ ‘ವಿದ್ಯಾನಿಧಿ’ ಹಾಗೂ ‘ಕಿಸಾನ್ ಸಮ್ಮಾನ್’ ಯೋಜನೆಯ ₹4,000 ಪ್ರೋತ್ಸಾಹಧನವನ್ನು ಸರ್ಕಾರ ಸ್ಥಗಿತಗೊಳಿಸಿದೆ.

​ಪ್ರಜಾ ಸೇವೆಯ ಹೆಸರಿನಲ್ಲಿ ಲಂಚ:

ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು, ಎಸ್‌ಸಿ-ಎಸ್‌ಟಿ ಸಮುದಾಯದ ಅಭಿವೃದ್ಧಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ ತಿನ್ನಲು ಹಣ ಸಾಲದೆ ‘ಪ್ರಜಾ ಸೇವೆ’ ಹೆಸರಿನಲ್ಲಿ ಜನರಿಂದ ನೇರವಾಗಿ ಲಂಚ ಪಡೆಯಲಾಗುತ್ತಿದೆ ಎಂದು ಅವರು ಆರೋಪಿಸಿದರು.

​ಅಧಿಕಾರಿಗಳಿಗೆ ಎಚ್ಚರಿಕೆ:

ವಿಧಾನಮಂಡಲದಲ್ಲಿ ಪ್ರತಿಪಕ್ಷ ನಾಯಕರಾದ ಆರ್. ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರ ಯಶಸ್ವಿ ಹೋರಾಟಕ್ಕೆ ಹೆದರಿ ಸರ್ಕಾರ ಅಧಿವೇಶನವನ್ನು ಮೊಟಕುಗೊಳಿಸಿ ಓಡಿಹೋಗಿದೆ. ವರ್ಗಾವಣೆ ಆಸೆಗೆ ಬಿದ್ದು ಕಾನೂನು ಬಾಹಿರವಾಗಿ ನಡೆದುಕೊಳ್ಳುವ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಕಷ್ಟ ಕಾಯ್ದಿದೆ ಎಂದು ಎಚ್ಚರಿಸಿದ ಬೊಮ್ಮಾಯಿ, ಈ ಭ್ರಷ್ಟ ಸರ್ಕಾರವನ್ನು ಕಿತ್ತುಹಾಕಲು ಬಳ್ಳಾರಿ ಪಾದಯಾತ್ರೆ ನಮಗೆ ದೊಡ್ಡ ಸ್ಫೂರ್ತಿ ನೀಡಿದೆ ಎಂದರು.

 


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!