ಜಿಲ್ಲಾ ಸುದ್ದಿಉಪಯುಕ್ತ ಮಾಹಿತಿಗಳುಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿ

ವಿದ್ಯಾರ್ಥಿಯ ಪ್ರಾಮಾಣಿಕತೆ-ಪೊಲೀಸರ ಸಮಯಪ್ರಜ್ಞೆ: ಕಳೆದುಹೋಗಿದ್ದ ಕೀಲಿಬೆಲೆಯುಳ್ಳ ಮೊಬೈಲ್ ವಾರಸುದಾರರಿಗೆ ಹಸ್ತಾಂತರ

Share News

ಕಲಬುರಗಿ: ವಿದ್ಯಾರ್ಥಿಯೊಬ್ಬನ ಅಪೂರ್ವ ಪ್ರಾಮಾಣಿಕತೆ ಹಾಗೂ ಎಂ.ಬಿ. ನಗರ ಠಾಣಾ ಪೊಲೀಸರ ಸಮಯಪ್ರಜ್ಞೆಯಿಂದಾಗಿ ರಸ್ತೆಯಲ್ಲಿ ಕಳೆದುಹೋಗಿದ್ದ ಅತ್ಯಂತ ಕೀಲಿಬೆಲೆಯುಳ್ಳ ಮೊಬೈಲ್ ಫೋನ್ ಯಶಸ್ವಿಯಾಗಿ ವಾರಸುದಾರರ ಕೈಸೇರಿದೆ.

ನಗರದ ಎಂ.ಬಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಬೆಲೆಬಾಳುವ ಮೊಬೈಲ್ ಫೋನ್ ಒಂದು ಬಿದ್ದಿರುವುದು ಸಿಕ್ಕಿತ್ತು. ಆ ಮೊಬೈಲ್ ಅನ್ನು ತಾನೇ ಇಟ್ಟುಕೊಳ್ಳದೆ, ಅದರ ನಿಜವಾದ ವಾರಸುದಾರರನ್ನು ಹುಡುಕಲು ಆ ವಿದ್ಯಾರ್ಥಿ ಪ್ರಯತ್ನಿಸುತ್ತಿದ್ದನು. ಈ ಸಂದರ್ಭದಲ್ಲಿ ಅಲ್ಲಿಯೇ ಕರ್ತವ್ಯದಲ್ಲಿದ್ದ ಎಂ.ಬಿ. ನಗರ ಠಾಣೆಯ ಪೊಲೀಸ್ ಸಿಬ್ಬಂದಿಯವರು ವಿದ್ಯಾರ್ಥಿಯ ನೆರವಿಗೆ ಧಾವಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ತಮ್ಮ ಜಾಣ್ಮೆ ಹಾಗೂ ತಾಂತ್ರಿಕ ಪ್ರಜ್ಞೆಯನ್ನು ಬಳಸಿ, ವಿದ್ಯಾರ್ಥಿಯ ಸಹಕಾರದೊಂದಿಗೆ ಮೊಬೈಲ್‌ನ ನಿಜವಾದ ವಾರಸುದಾರರನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ತಕ್ಷಣವೇ ವಾರಸುದಾರರನ್ನು ಎಂ.ಬಿ. ನಗರ ಪೊಲೀಸ್ ಠಾಣೆಗೆ ಕರೆಸಿ, ಕಾನೂನು ಪ್ರಕ್ರಿಯೆಗಳ ಬಳಿಕ ಅವರ ಸಮ್ಮುಖದಲ್ಲೇ ಮೊಬೈಲ್ ಫೋನ್ ಅನ್ನು ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು. ತಮ್ ಕಳೆದುಹೋಗಿದ್ದ ಮೊಬೈಲ್ ಮರಳಿ ಸಿಕ್ಕಿದ್ದಕ್ಕೆ ವಾರಸುದಾರರು ನಿಟ್ಟುಸಿರು ಬಿಟ್ಟಿದ್ದು, ವಿದ್ಯಾರ್ಥಿ ಹಾಗೂ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಆಧುನಿಕ ಜಗತ್ತಿನಲ್ಲಿ ರಸ್ತೆಯಲ್ಲಿ ಸಿಕ್ಕ ಮೊಬೈಲ್ ಅನ್ನು ದುರುಪಯೋಗಪಡಿಸಿಕೊಳ್ಳದೆ ವಾರಸುದಾರರಿಗೆ ತಲುಪಿಸಲು ಶ್ರಮಿಸಿದ ವಿದ್ಯಾರ್ಥಿಯ ಪ್ರಾಮಾಣಿಕತೆ ಹಾಗೂ ಸಾರ್ವಜನಿಕರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿದ ಎಂ.ಬಿ. ನಗರ ಪೊಲೀಸ್ ಸಿಬ್ಬಂದಿಯ ಕರ್ತವ್ಯ ನಿಷ್ಠೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ಹಾಗೂ ಶ್ಲಾಘನೆ ವ್ಯಕ್ತವಾಗುತ್ತಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!