ಜಿಲ್ಲಾ ಸುದ್ದಿಕ್ರೈಂ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ವಿದ್ಯಾರಣ್ಯಪುರ: ಲಾಂಗು-ಮಚ್ಚು ಹಿಡಿದು ಅಟ್ಟಹಾಸ ಮೆರೆದಿದ್ದ 6 ಜನ ಪುಡಿ ರೌಡಿಗಳ ಬಂಧನ

Share News

ಬೆಂಗಳೂರು: ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್.ಎಂ.ಟಿ. ಲೇಔಟ್ 6ನೇ ಬ್ಲಾಕ್‌ನಲ್ಲಿ ಲಾಂಗು ಮತ್ತು ಮಚ್ಚುಗಳನ್ನು ಹಿಡಿದು ಭೀತಿ ಸೃಷ್ಟಿಸಿದ್ದ ಆರು ಜನ ಪುಡಿ ರೌಡಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

​ಬಂಧಿತ ಆರೋಪಿಗಳ ವಿವರ:

​ಅಂಬಣ್ಣ ಅಲಿಯಾಸ್ ಅಂಬಿ (24)

​ಅಜಯ್ ಅಲಿಯಾಸ್ ಅಮಾವಾಸೆ (23)

​ರಾಹುಲ್ ಅಲಿಯಾಸ್ ಅಮಾವಾಸೆ (19)

​ಶಿವಕುಮಾರ್ (19)

​ಗಣೇಶ್ (19)

​ಸಾಯಿಕಿರಣ್ (18)

​ಏರಿಯಾದಲ್ಲಿ ತಮ್ಮ “ಹವಾ” ಮೈಂಟೇನ್ ಮಾಡುವ ದುರುದ್ದೇಶದಿಂದ ಈ ಪುಂಡರು ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ದಾಂಧಲೆ ನಡೆಸಿದ್ದರು ಎನ್ನಲಾಗಿದೆ.

​ಪ್ರಕರಣದ ಬೆನ್ನತ್ತಿದ ಪೊಲೀಸರು ಆರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರಿಂದ ಕೃತ್ಯಕ್ಕೆ ಬಳಸಿದ್ದ ಎರಡು ಆಟೋರಿಕ್ಷಾಗಳು ಹಾಗೂ ಲಾಂಗು-ಮಚ್ಚುಗಳನ್ನು ಜಪ್ತಿ ಮಾಡಿದ್ದಾರೆ. ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!