ಜಿಲ್ಲಾ ಸುದ್ದಿರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ಮಯೂರ ನಾಯಕ ಕುಟುಂಬದ ಹೇಳಿಕೆ :ಹಲ್ಲೆ ಪ್ರಕರಣದ ಲಾಭ ಪಡೆಯುವ ಹುನ್ನಾರ ಹಲ್ಲೆಗೂ ನಮಗೂ ಯಾವ ಸಂಬಂಧವೂ ಇಲ್ಲ.

Share News

ಅಂಕೋಲಾ: ಗೋಪಾಲಕೃಷ್ಣ ನಾಯಕ ಅವರ ಮೇಲೆ ಇತ್ತೀಚಿಗೆ ನಡೆದ ಹಲ್ಲೆ ಪ್ರಕರಣದಲ್ಲಿ ನಮ್ಮ ಕುಟುಂಬದ ಹೆಸರನ್ನು ಅನವಶ್ಯಕವಾಗಿ ಎಳೆದು ತರುತ್ತಿದ್ದು ಇದು ದುರುದ್ದೇಶದಿಂದ ಕೂಡಿದೆ; ಅಲ್ಲದೆ ವೈಯಕ್ತಿಕವಾಗಿ ತೇಜೋವಧೆ ಮಾಡುವ ಹುನ್ನಾರ ನಡೆಸಲಾಗಿದೆ ಎಂದು ಉದ್ಯಮಿ ಮಯೂರ ಆರ್ ನಾಯಕ ಕುಟುಂಬ ತಿಳಿಸಿದೆ.

ಹಲ್ಲೆ ಪ್ರಕರಣದ ಈ ಅವಕಾಶವನ್ನು ಬಳಸಿಕೊಂಡು ಗೋಪಾಲಕೃಷ್ಣ ನಾಯಕ ಅನವಶ್ಯಕವಾಗಿ ದಿ. ಆರ್ ಎನ್ ನಾಯಕ ಹಾಗೂ ಮಯೂರ ನಾಯಕ ಹೆಸರನ್ನು ಪ್ರಸ್ತಾಪಿಸಿರುವುದು ಈ ಮೂಲಕ ತಮ್ಮ ದ್ವೇಷಕ್ಕೆ, ದುರುದ್ದೇಶಕ್ಕೆ ಒಂದು ದಿಕ್ಕು ಗೊತ್ತುಮಾಡುವ; ಸ್ವಪ್ರಚಾರ ಪಡೆದುಕೊಳ್ಳುವ; ಇಲ್ಲವೇ ತಾವು ನಿಶ್ಚಿತವಾಗಿ ಆರೋಪಿಸಬೇಕಾದ ವ್ಯಕ್ತಿಯ ಗೊತ್ತು ಗುರಿಯಿಲ್ಲದೆಯೋ, ತಿಳಿದೂ ಅವರನ್ನು ರೀಚ್ ಮಾಡಲಾಗದೆಂಬ ಕಾರಣಕ್ಕೋ ಪ್ರಕರಣದ ದಿಕ್ಕು ತಪ್ಪಿಸಿಯಾದರೂ ಲಾಭ ಪಡೆದುಕೊಳ್ಳಬೇಕು ಎಂಬ ಉದ್ದೇಶಕ್ಕೆ ಈ ಮಾರ್ಗ ಅನುಸರಿಸುತ್ತಿರುವಂತೆ ಕಾಣುತ್ತಿದೆ.

ಈ ಪ್ರಕರಣಕ್ಕೆ ಯಾವುದೇ ರೀತಿಯ ಸಂಬಂಧ ಇಲ್ಲದೆ ಇದ್ದರೂ ಕೂಡ ಹಿರಿಯ ಪೊಲೀಸ್ ಅಧಿಕಾರಿಗಳ ಮೂಲಕ ಒತ್ತಡ ಹಾಕಿಸಿ ಕೇಸನ್ನು ಮಯೂರ ನಾಯಕ ಮೇಲೆ ಎಳೆಯುವ ಹುನ್ನಾರ ನಡೆಸುವ ಅನುಮಾನವೂ ಕಾಡಿದೆ. ಸಹಕಾರಿ ಚುನಾವಣೆಯಲ್ಲಿ ಹಲವರೊಂದಿಗೆ ಗೋಪಾಲಕೃಷ್ಣ ನಾಯಕ ವಾಗ್ವಾದ ನಡೆಸಿದ ಕುರಿತು ಮಾಧ್ಯಮಗಳಲ್ಲಿಯೂ ವರದಿಯಾಗಿದೆ.

ಆದರೆ ಕೇವಲ ಮಯೂರ ನಾಯಕ ಹೆಸರನ್ನು ಮಾತ್ರ ಬಳಕೆ ಮಾಡಿರುವುದು ಅಲ್ಲದೇ ಕೆಲವು ಮಾಧ್ಯಮಗಳ ವರದಿಗಳಲ್ಲಿ ತಪ್ಪು ಕಲ್ಪನೆ ಮೂಡುವಂತೆ ಆ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ಬೇರೆಡೆಗೆ ಸೆಳೆಯುವ ಕುತಂತ್ರವೂ ಇದರ ಹಿಂದಿದೆ.ಹಾಗಾಗಿ ಆರ್ ಎನ್ ನಾಯಕ ಕುಟುಂಬದ ಆತ್ಮೀಯ ಬಾಂಧವರು ಈ ವದಂತಿ ಇಲ್ಲವೇ ಕಪೋಕಲ್ಪಿತ ಊಹಾಪೋಹಗಳಿಗೆ ಕಿವಿಗೊಡಬಾರದು.ಹಲ್ಲೆ ಪ್ರಕರಣದ ತನಿಖೆ ನ್ಯಾಯೋಚಿತವಾಗಿ ನಡೆಯುವುದೆಂಬ ಭರವಸೆ ನಮಗೂ ಇದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!