ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಹುಲಿಯ ಕೋರೆ ಹಲ್ಲಿಗೆ ಯಶಸ್ವಿ ‘ರೂಟ್ ಕೆನಾಲ್’ ಶಸ್ತ್ರಚಿಕಿತ್ಸೆ!

Share News

ಆನೇಕಲ್ (ಬೆಂಗಳೂರು): ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಾಲ್ಕು ವರ್ಷದ ಹೆಣ್ಣು ಹುಲಿಗೆ ಪಶುವೈದ್ಯರ ತಂಡವು ಅಪರೂಪದ ‘ರೂಟ್ ಕೆನಾಲ್’ (Root Canal) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಹುಲಿಯ ಕೋರೆ ಹಲ್ಲನ್ನು ರಕ್ಷಿಸಿದೆ.

​ಬಂಗಾಳ ಹುಲಿ ಪ್ರಭೇದಕ್ಕೆ ಸೇರಿದ ‘ಸಿಂಚನಾ’ ಎಂಬ ಈ ಹುಲಿ, ಪಂಜರವನ್ನು ಕಚ್ಚಿದ ಪರಿಣಾಮ ಅದರ ಪ್ರಮುಖ ಕೋರೆ ಹಲ್ಲು ತೀವ್ರವಾಗಿ ಹಾನಿಗೊಳಗಾಗಿತ್ತು. ಹಲ್ಲನ್ನು ತೆಗೆದುಹಾಕುವ ಬದಲು ಅದನ್ನು ಉಳಿಸುವ ಉದ್ದೇಶದಿಂದ ಜೈವಿಕ ಉದ್ಯಾನವನದ ವೈದ್ಯರು ಹಾಗೂ ‘ವೈಲ್ಡ್‌ಲೈಫ್ ಎಸ್‌ಒಎಸ್’ (Wildlife SOS) ಪಶುವೈದ್ಯಕೀಯ ತಂಡ ಜಂಟಿಯಾಗಿ ಈ ಕಾರ್ಯಾಚರಣೆ ಕೈಗೊಂಡಿತು.

ಹುಲಿಗೆ ಅರಿವಳಿಕೆ ನೀಡಿ ಸುಮಾರು ಮೂರು ಗಂಟೆಗಳ ಕಾಲ ಸತತವಾಗಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ರೂಟ್ ಕೆನಾಲ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಪ್ರಸ್ತುತ ಹುಲಿ ಸಂಪೂರ್ಣವಾಗಿ ಗುಣಮುಖವಾಗುತ್ತಿದ್ದು, ಯಾವುದೇ ತೊಂದರೆಯಿಲ್ಲದೆ ಆಹಾರ ಸೇವಿಸುತ್ತಿದೆ ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.

ಮಾಂಸಾಹಾರಿ ಪ್ರಾಣಿಗಳಿಗೆ ಕೋರೆ ಹಲ್ಲುಗಳು ಆಹಾರ ಕಡಿಯಲು ಅತ್ಯಂತ ಪ್ರಮುಖವಾಗಿವೆ. ಹಲ್ಲಿನ ಸಮಸ್ಯೆಗೆ ತಕ್ಷಣ ಚಿಕಿತ್ಸೆ ನೀಡದಿದ್ದರೆ ದೀರ್ಘಕಾಲದ ನೋವು, ಸೋಂಕು ಉಂಟಾಗಿ ಪ್ರಾಣಿಗಳು ಆಹಾರ ಸೇವಿಸಲಾಗದೆ ಪ್ರಾಣಾಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಈ ಅಪರೂಪದ ಚಿಕಿತ್ಸೆಯ ಮೂಲಕ ಹುಲಿಯ ಹಲ್ಲನ್ನು ಉಳಿಸಿದ ವೈದ್ಯರ ತಂಡದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!