ರಾತ್ರೋ ರಾತ್ರಿ ಸಮಾಧಿ ಕಟ್ಟಡ ನಿರ್ಮಾಣ ಕಾರ್ಯ, ಪೊಲೀಸ್ ನ್ಯೂಸ್ ಮಾಹಿತಿಗೆ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು

ಕಾರಟಗಿ : ತಾಲೂಕಿನ 32 ನೆಯ ವಿತರಣಾ ಕಾಲುವೆಯ ನೀರಾವರಿ ಇಲಾಖೆ ಆಸ್ತಿ ಒತ್ತುವರಿ ಮಾಡಿ ಬಸವಣ್ಣ ಕ್ಯಾಂಪ್ ಗ್ರಾಮದ ಯಂಕೋಬ ಎನ್ನುವವರು ಅವರ ತಂದೆಯ ಸಮಾಧಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ದಲಿತ ಸಾಮಾಜಿಕ ಹೋರಾಟಗಾರರು ದೂರು ನೀಡಿದ್ದರು. ಈ ಕುರಿತು ನೀರಾವರಿ ಇಲಾಖೆಯ ಕಾರಟಗಿ ವಿಭಾಗದ ಎಇಇ ಹಾಗೂ ವಡ್ಡರಹಟ್ಟಿ ವಿಭಾಗದ ಇಇ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದರು. ಕೂಡಲೇ ಕಾರಟಗಿ 32ನೆಯ ವಿತರಣಾ ಕಾಲುವೆಯ ಅಧಿಕಾರಿಯಾದ ಎಇ ಮಂಜುನಾಥ್ ಅವರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳವಂತೆ ಸೂಚನೆ ನೀಡಿದ್ದರು.
ಸೂಚನೆಯ ಪಾಲನೆ ಮಾಡಿದ ಮಂಜುನಾಥ್ ಅವರು ನಿರ್ಮಾಣ ಮಾಡುತ್ತಿರುವ ವೆಂಕೋಬ ಎನ್ನುವವರಿಗೆ ನೋಟಿಸ್ ಸಹ ನೀಡಿದ್ದರು. ನಿರಂತರ ಗ್ಯಾಂಗ್ ಮ್ಯಾನ್ ಗಳು ಕಾವಲುಗಾರರಂತೆ ಸಮಾಧಿ ಕಟ್ಟಡ ನಿರ್ಮಾಣ ಮಾಡದಂತೆ ಕಾಯುತ್ತಲೇ ಇದ್ದರು.ಆದರೆ ನೋಟಿಸಿಗೆ ಕ್ಯಾರೆ ಎನ್ನದ ವೆಂಕೋಬ ಇವರು ರಾಜಕೀಯ ಪ್ರಭಾವ ಬಳಸಿ ರಾತ್ರೋರಾತ್ರಿ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತಲೇ ಇದ್ದಾರೆ.
ತೆರವುಗೊಳಿಸಲು ಅಧಿಕಾರಿಗಳು ಸೂಚಿಸಿದರೂ ತೆರವುಗೊಳಿಸಿದೆ ಕಾನೂನು ಕೈಗೆ ತೆಗೆದುಕೊಂಡು ತಂದೆ ಸಮಾಧಿ ಕಟ್ಟಡ ನಿರ್ಮಾಣ ಮುಂದುವರಿಸಿದ್ದು ಅಧಿಕಾರಿಗಳಿಗೆ ತಲೆ ನೋವು ಆಗಿ ಪರಿಣಮಿಸಿದೆ,
ರಾತ್ರೋರಾತ್ರಿ ಸಮಾಧಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿರುವ ಬಗ್ಗೆ ದಲಿತ ಮುಖಂಡ ಮೌನೇಶ್ ಹಾಗೂ ಪೊಲೀಸ್ ವಾರ್ತೆ ವರದಿಗಾರರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರ ಹಿನ್ನೆಲೆಯಲ್ಲಿ ಸ್ಥಳಕ್ಕೆ ಎಇ ಮಂಜುನಾಥ್ ಹಾಗೂ ಅಧಿಕಾರಿಗಳು ದೌಡಾಯಿಸಿ ಕೆಲಸ ನಿಲ್ಲಿಸಿ ಎಚ್ಚರಿಕೆ ನೀಡಿದ್ದಾರೆ.ನೀರಾವರಿ ಇಲಾಖೆಯ ಆಸ್ತಿ ರಕ್ಷಣೆಗೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕು.



