ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜಕೀಯರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಮಾರುಕಟ್ಟೆ ಕೇಂದ್ರೀಕರಣದಿಂದ ಗ್ರಾಹಕರು, ಉದ್ಯೋಗಗಳಿಗೆ ಕಂಟಕ: ಸಂಸದ ಜಿ. ಕುಮಾರ ನಾಯಕ ಆತಂಕ

Share News

ನವದೆಹಲಿ: ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಕೆಲವೇ ಬೃಹತ್ ಕಂಪನಿಗಳ ಪ್ರಾಬಲ್ಯ (ಮಾರುಕಟ್ಟೆ ಕೇಂದ್ರೀಕರಣ) ಹೆಚ್ಚಾಗುತ್ತಿರುವುದು ಗ್ರಾಹಕರಿಗೆ, ಉದ್ಯೋಗ ಸೃಷ್ಟಿಗೆ ಹಾಗೂ ದೇಶದ ಆರ್ಥಿಕತೆಗೆ ಭಾರಿ ಹೊರೆಯಾಗಬಹುದು ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಜಿ. ಕುಮಾರ ನಾಯಕ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

​ದೂರಸಂಪರ್ಕ (Telecom) ಹಾಗೂ ಸಿಮೆಂಟ್ ಕ್ಷೇತ್ರಗಳಲ್ಲಿ ಕೆಲವೇ ಬ್ರ್ಯಾಂಡ್‌ಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿದ್ದು, ಈ ಬಗ್ಗೆ ಭಾರತೀಯ ಸ್ಪರ್ಧಾ ಆಯೋಗ (CCI) ನಿಯಮಿತವಾಗಿ ಮಾರುಕಟ್ಟೆ ಅಧ್ಯಯನ ನಡೆಸಬೇಕೆಂದು ಸಂಸತ್ತಿನಲ್ಲಿ ಒತ್ತಾಯಿಸಿದ್ದಾರೆ.

​ಸಂಸತ್ತಿನಲ್ಲಿ ಸಂಸದರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಹರ್ಷ್ ಮಲ್ಹೋತ್ರಾ, ಕಳೆದ 10 ವರ್ಷಗಳಲ್ಲಿ ಸಿಸಿಐ ದೂರಸಂಪರ್ಕ ಕ್ಷೇತ್ರದ 29 ವಿಲೀನ ಹಾಗೂ ಸಿಮೆಂಟ್ ಕ್ಷೇತ್ರದ 15 ವಿಲೀನ ಪ್ರಕರಣಗಳನ್ನು ಪರಿಶೀಲಿಸಿದೆ ಎಂದು ತಿಳಿಸಿದ್ದಾರೆ.

​ದೂರಸಂಪರ್ಕ ಕ್ಷೇತ್ರ: 2020–21ರಲ್ಲಿ ಸಿಸಿಐ ಅಧ್ಯಯನ ನಡೆಸಿದ್ದು, ಪ್ರಸ್ತುತ ಏಕೀಕರಣವು ಸ್ಪರ್ಧೆಗೆ ಅನುಕೂಲಕರವಾಗಿದೆ ಎಂದು ಹೇಳಿದೆ.

​ಸಿಮೆಂಟ್ ಕ್ಷೇತ್ರ: ಈ ಕ್ಷೇತ್ರದಲ್ಲಿ ಕೆಲವೇ ಕಂಪನಿಗಳ ಪ್ರಾಬಲ್ಯ ಹೆಚ್ಚುತ್ತಿದೆಯೇ ಎಂಬ ಬಗ್ಗೆ ಇದುವರೆಗೆ ಯಾವುದೇ ಸಮಗ್ರ ಮಾರುಕಟ್ಟೆ ಅಧ್ಯಯನ ನಡೆದಿಲ್ಲ ಎಂದು ಸರ್ಕಾರ ಒಪ್ಪಿಕೊಂಡಿದೆ.

​ಒಂದು ಕಾಲದಲ್ಲಿ ಭಾರತದಲ್ಲಿ 13ಕ್ಕೂ ಹೆಚ್ಚು ಮೊಬೈಲ್ ಸೇವಾ ಸಂಸ್ಥೆಗಳಿದ್ದವು. ಆದರೆ ಸಾಲು ಸಾಲು ವಿಲೀನಗಳು ಹಾಗೂ ಪ್ರಮುಖ ಕಂಪನಿಗಳ ನಿರ್ಗಮನದಿಂದಾಗಿ ಈಗ ಕೇವಲ 4 ಪ್ರಮುಖ ಕಂಪನಿಗಳು ಮಾತ್ರ ಉಳಿದುಕೊಂಡಿವೆ.

​ಉದ್ಯೋಗ ನಷ್ಟ: ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಬಂದ ನಂತರ ಉಂಟಾದ ತೀವ್ರ ಸ್ಪರ್ಧೆ ಮತ್ತು ಬದಲಾವಣೆಗಳಿಂದ 2020ರ ವೇಳೆಗೆ ಬಿಸಿಸಿಎನ್‌ಎಲ್ ಹಾಗೂ ಇತರ ವಲಯಗಳಲ್ಲಿ 75,000ಕ್ಕೂ ಹೆಚ್ಚು ಉದ್ಯೋಗಗಳು ನಷ್ಟವಾಗಿವೆ ಎಂದು ಬಿಎಸ್‌ಎನ್‌ಎಲ್ ನೌಕರರ ಸಂಘವನ್ನು ಉಲ್ಲೇಖಿಸಿ ಸಂಸದರು ತಿಳಿಸಿದರು.

​ಬ್ಯಾಂಕ್‌ಗಳ ಮೇಲೆ ಒತ್ತಡ: 2018ರ ಮಾರ್ಚ್ ವೇಳೆಗೆ ಟೆಲಿಕಾಂ ಕಂಪನಿಗಳ ಒಟ್ಟು ಸಾಲ ₹5 ಲಕ್ಷ ಕೋಟಿಗೂ ಮೀರಿ ಬೆಳೆದಿದ್ದು, ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮೇಲೆಯೂ ತೀವ್ರ ಒತ್ತಡ ಹೇರಿತು.

​ಗ್ರಾಹಕರಿಗೆ ಹೊರೆ: ಸ್ಪರ್ಧೆ ಕಡಿಮೆಯಾದಂತೆ ಸೇವಾ ದರಗಳು ಹೆಚ್ಚಾಗುವ ಆತಂಕ ಹಾಗೂ ಸೇವೆಯ ಗುಣಮಟ್ಟ ಕುಸಿಯುವ ಭೀತಿ.

​ಸರ್ಕಾರದ ಆದಾಯಕ್ಕೆ ಕನ್ನ: ಮುಂದಿನ ಸ್ಪೆಕ್ಟ್ರಮ್ ಹರಾಜುಗಳಲ್ಲಿ ಬಿಡ್ ಮಾಡುವ ಕಂಪನಿಗಳ ಸಂಖ್ಯೆ ಕಡಿಮೆಯಾದರೆ ಸರ್ಕಾರದ ಖಜಾನೆಗೆ ಬರುವ ಆದಾಯ ಕುಸಿತ.

​ಎಂಎಸ್‌ಎಂಇ (MSME) ಗಳಿಗೆ ಹೊಡೆತ: ಉತ್ಪಾದನೆ, ವಿತರಣೆ ಹಾಗೂ ಚಿಲ್ಲರೆ ಮಾರಾಟದ ಸಂಪೂರ್ಣ ಮೌಲ್ಯ ಸರಪಳಿಯನ್ನು ಬೃಹತ್ ಕಂಪನಿಗಳು ನಿಯಂತ್ರಿಸಿದರೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸ್ಪರ್ಧಿಸುವುದು ಅಸಾಧ್ಯ.

​”ಕೇವಲ ದೂರು ಅಥವಾ ಪ್ರಕರಣಗಳು ಬಂದಾಗ ಮಾತ್ರ ಕ್ರಮ ಕೈಗೊಳ್ಳುವುದು ಸರಿಯಲ್ಲ. ಸಿಮೆಂಟ್ ಹಾಗೂ ಟೆಲಿಕಾಂ ನಂತಹ ಪ್ರಮುಖ ಕ್ಷೇತ್ರಗಳಲ್ಲಿ ‘ಕೇಂದ್ರ ಸರ್ಕಾರ’ ಮತ್ತು ‘ಸಿಸಿಐ’ ನಿಯಮಿತ ಮಾರುಕಟ್ಟೆ ಅಧ್ಯಯನ ನಡೆಸುವ ಶಾಶ್ವತ ವ್ಯವಸ್ಥೆ ರೂಪಿಸಬೇಕು. ಇದರಿಂದ ಮುಂಚಿತವಾಗಿಯೇ ಅಪಾಯವನ್ನು ಗುರುತಿಸಿ ಗ್ರಾಹಕರು, ಸಣ್ಣ ಉದ್ದಿಮೆಗಳು ಹಾಗೂ ಉದ್ಯೋಗಗಳನ್ನು ರಕ್ಷಿಸಬಹುದು.”

— ಜಿ. ಕುಮಾರ ನಾಯಕ, ಸಂಸದರು, ರಾಯಚೂರು

 


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!