ಚಂದ್ರಶೇಖರ ನುಗ್ಗಲಿ ಯಿಂದ ಕೆ ಸಿ ಎಸ್ ಆರ್ ನಿಯಮ ಉಲ್ಲಂಘನೆ, ಶಿಸ್ತು ಕ್ರಮಕ್ಕೆ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯಿಂದ ದೂರು

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ನುಗ್ಗಲಿಯವರು ಚುನಾವಣಾ ಕಾನೂನುಗಳು ಮತ್ತು ಸೇವಾ ನಿಯಮಗಳ ಉಲ್ಲಂಘನೆ ಮಾಡಿದ ಕುರಿತು ದೂರು ಅರ್ಜಿ.
ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಅಲೆಮಟ್ಟಿ ಡ್ಯಾಮ್ ಬಳಿ ಇರುವ ಸರಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ನುಗ್ಗಲಿ ಅವರು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಗ್ಗೆ ಟಿವಿ ಮಾಧ್ಯಮ,ಪತ್ರಿಕೆ ಹಾಗೂ ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವಾಸಾರ್ಹವಾಗಿ ಕಂಡು ಬಂದಿರುತ್ತದೆ.
ಸರ್ಕಾರಿ ನೌಕರರಾಗಿರುವ ವ್ಯಕ್ತಿಯು ಇಂತಹ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ಕಾನೂನುಬಾಹಿರವಾಗಿದ್ದು ಕೆಳಗಿನ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
1. ಕರ್ನಾಟಕ ಸಿವಿಲ್ ಸರ್ವೀಸ್ (ಕಂಡಕ್ಟ್) ನಿಯಮಗಳು, 1966, Rule 5: ಸರ್ಕಾರಿ ನೌಕರರು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸುತ್ತದೆ
2. ಭಾರತ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ (MCC)
ಸರ್ಕಾರಿ ಸಿಬ್ಬಂದಿಯ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ
3. Sections 129, 134 and 134A of the Representation of the People Act, 1951 deal with the conduct of government servants during elections and prescribe penalties for violations.
4. Indian Penal Code, 1860-Section 171C: Undue influence at elections
Section 171F: Punishment for electoral offences
ಈ ಮೇಲ್ಕಂಡ ಕೃತ್ಯವು ಕಾನೂನುಬಾಹಿರವಾಗಿದ್ದು, ಸಾರ್ವಜನಿಕ ಸೇವೆಯ ತಟಸ್ಥತೆ ಮತ್ತು ಪ್ರಾಮಾಣಿಕತೆಗೆ ಧಕ್ಕೆ ತರುತ್ತದೆ.
ಆದ್ದರಿಂದ ಶ್ರೀ ಚಂದ್ರಶೇಖರ್ ನುಗ್ಗಲಿಯವರ ಮೇಲೆ ತಕ್ಷಣ ನಿಷ್ಪಕ್ಷಪಾತ ತನಿಖೆ ಆರಂಭಿಸಲು- ಸಂಬಂಧಿತ ವ್ಯಕ್ತಿಯ ವಿರುದ್ಧ ಕಠಿಣ ಶಿಸ್ತಿನ ಕ್ರಮ ಕೈಗೊಳ್ಳಲು (ಅಮಾನತು ಸೇರಿ)ಅಗತ್ಯವಿದ್ದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು, ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಹಾಗೂ ಇಲಾಖಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ .ಈ ದೂರನ್ನು ತುರ್ತು ವಿಚಾರವಾಗಿ ಪರಿಗಣಿಸಿ, ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಲು ವಿನಂತಿಸುತ್ತಾ ಇದ್ದೇವೆ.
ಮೊಯ್ದಿನ್ ಕುಟ್ಟಿ
ರಾಜ್ಯ ಸಂಚಾಲಕರು
ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ.



