ಜಿಲ್ಲಾ ಸುದ್ದಿಕ್ರೈಂ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಮದುವೆ ಭರವಸೆ ನೀಡಿ ಎಸ್ಕೇಪ್ ಆಗಿದ್ದ ಪ್ರಿಯಕರ: ರಸ್ತೆಯಲ್ಲೇ ಮಾಂಗಲ್ಯ ಧಾರಣೆ – ಹಾಸನದಲ್ಲಿ ವಿಶಿಷ್ಟ ವಿವಾಹ

Share News

ಹಾಸನ: ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಲಿವ್-ಇನ್ ರಿಲೇಷನ್‌ಷಿಪ್‌ನಲ್ಲಿದ್ದ ಪ್ರಿಯಕರ ಹೆಣ್ಣು ಮಗು ಜನಿಸುತ್ತಿದ್ದಂತೆ ಪರಾರಿಯಾಗಿದ್ದ ಘಟನೆ ಆಲೂರು ತಾಲೂಕಿನಲ್ಲಿ ನಡೆದಿದ್ದು, ಇದೀಗ ಪೊಲೀಸರು ಹಾಗೂ ದಲಿತ ಸಂಘಟನೆಗಳ ಮಧ್ಯಸ್ಥಿಕೆಯಲ್ಲಿ ರಸ್ತೆಯಲ್ಲೇ ವಿವಾಹ ನೆರವೇರಿದೆ.

​ಆಲೂರು ತಾಲೂಕಿನ ಬೀರಕನಹಳ್ಳಿ ಗ್ರಾಮದ ರಾಜು ಹಾಗೂ ನಿಲುವಾಗಿಲು ಗ್ರಾಮದ ಅನ್ನಪೂರ್ಣ ನಡುವೆ ಈ ವಿಶೇಷ ಮದುವೆ ನಡೆದಿದೆ.

​ಘಟನೆಯ ವಿವರ:

ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿದ್ದ ರಾಜು ಕಳೆದ ಒಂದು ವರ್ಷದಿಂದ ಅನ್ನಪೂರ್ಣ ಜೊತೆ ಲಿವ್-ಇನ್ ರಿಲೇಷನ್‌ಷಿಪ್‌ನಲ್ಲಿದ್ದ ಎನ್ನಲಾಗಿದೆ. ಆದರೆ, ಇತ್ತೀಚೆಗೆ ಹೆಣ್ಣು ಮಗು ಜನಿಸುತ್ತಿದ್ದಂತೆಯೇ ಯುವಕ ಎಸ್ಕೇಪ್ ಆಗಿದ್ದ. ಈ ಕುರಿತು ಯುವತಿ ಆಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಯುವಕನನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದರು.

​ಅಂಬೇಡ್ಕರ್ ಪ್ರತಿಮೆ ಎದುರು ಮದುವೆ:

ವಿಷಯ ತಿಳಿದು ಮಧ್ಯಪ್ರವೇಶಿಸಿದ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಮುಖಂಡರು ಹಾಗೂ ಪೊಲೀಸರು, ಇಬ್ಬರಿಗೂ ಬುದ್ಧಿಹೇಳಿ ಆಲೂರು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದ್ದಾರೆ.

​ಸದ್ಯ ಹೊಸ ಜೀವನಕ್ಕೆ ಕಾಲಿಟ್ಟಿರುವ ಈ ಜೋಡಿಗೆ ಶುಭ ಹಾರೈಕೆಗಳು ವ್ಯಕ್ತವಾಗುತ್ತಿದ್ದು, ಯುವಕ ಹಳೆ ಘಟನೆಗಳನ್ನು ಮರೆತು ಸುಖ ಸಂಸಾರ ನಡೆಸಲಿ ಎಂಬುದು ಸ್ಥಳೀಯರ ಆಶಯವಾಗಿದೆ. ಅದೇ ರೀತಿ, ಇಂತಹ ಘಟನೆಗಳು ಮರುಕಳಿಸದಂತೆ ಹೆತ್ತವರು ತಮ್ಮ ಮಕ್ಕಳ ನಡವಳಿಕೆ ಹಾಗೂ ಸಂಬಂಧಗಳ ಬಗ್ಗೆ ಆರಂಭದಲ್ಲೇ ಎಚ್ಚರವಹಿಸುವುದು ಅತ್ಯಗತ್ಯ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!