ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಕಟಾವು ಯಂತ್ರಕ್ಕೆ ಸಿಲುಕಿ ತಾಯಿ ದುರಂತ ಸಾವು: ದೃಷ್ಟಿಹೀನ ಪತಿ, ಮೂವರು ಮಕ್ಕಳ ಬಾಳು ಕತ್ತಲು

Share News

ಧಾರವಾಡ: ಕಣ್ಣಿಲ್ಲದ ಪತಿ ಹಾಗೂ ಮೂವರು ಮಕ್ಕಳ ಹಸಿವು ನೀಗಿಸಲು ಕಷ್ಟಪಟ್ಟು ದುಡಿಯುತ್ತಿದ್ದ ತಾಯಿಯೊಬ್ಬರು ಹೆಸರು ಕಟಾವು ಮಾಡುವ ಯಂತ್ರಕ್ಕೆ ಸಿಲುಕಿ ಭೀಕರವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಹಾರೋಬೆಳವಾಡಿ ಗ್ರಾಮದಲ್ಲಿ ನಡೆದಿದೆ.

​ಗ್ರಾಮದ ಯಲ್ಲವ್ವ ದುರಂತ ಅಂತ್ಯಕಂಡ ದುರದೃಷ್ಟಕರ ಮಹಿಳೆ.

​ಘಟನೆಯ ವಿವರ:

ಮೀನುಗಾರಿಕೆ ಹಾಗೂ ಕೃಷಿ ಕೂಲಿ ಕೆಲಸ ಮಾಡುತ್ತಿದ್ದ ಯಲ್ಲವ್ವ, ಹೊಲದಲ್ಲಿ ಹೆಸರು ಬೆಳೆ ಕಟಾವು ಮಾಡುವಾಗ ಯಂತ್ರದಿಂದ ಕೆಳಗೆ ಬಿದ್ದ ಕಾಳುಗಳನ್ನು ಆರಿಸುತ್ತಿದ್ದರು. ಈ ವೇಳೆ ಗಮನಿಸದೇ ಹಿಂದಿನಿಂದ ಬಂದ ಹೆಸರು ಕಟಾವು ಯಂತ್ರ (Harvester Machine) ಯಲ್ಲವ್ವನ ಮೇಲೆಯೇ ಹರಿದಿದೆ. ಯಂತ್ರದ ಚಕ್ರ ಮತ್ತು ಭಾಗಗಳಿಗೆ ಸಿಲುಕಿ ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

​ಕುಟುಂಬದ ಏಕೈಕ ಆಸರೆಯಾಗಿದ್ದ ಯಲ್ಲವ್ವ ಅವರ ಸಾವಿನ ಸುದ್ದಿ ಕೇಳಿ ದೃಷ್ಟಿಹೀನ ಪತಿ ಹಾಗೂ ಮೂವರು ಮಕ್ಕಳು ದಿಕ್ಕುತೋಚದೆ ಕಣ್ಣೀರಿಡುತ್ತಿದ್ದು, ಗ್ರಾಮಸ್ಥರಲ್ಲಿ ತೀವ್ರ ಶೋಕ ಸಾಗರ ಮುಳುಗಿದೆ.

​ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!