2026ನೇ ಸಾಲಿನ ಮಾಣಿಕ್ಯ ಪ್ರಕಾಶನದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರಕಟ: 28 ಕೃತಿಗಳು ಭಾಜನ!

ಹಾಸನ: ಕಳೆದ ಒಂದು ದಶಕದಿಂದ ಸಾಹಿತ್ಯ ಸೇವೆ ಸಲ್ಲಿಸುತ್ತಿರುವ ಹಾಸನದ ‘ಮಾಣಿಕ್ಯ ಪ್ರಕಾಶನ (ರಿ.)’ ತನ್ನ 2026ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ರಾಜ್ಯ ಹಾಗೂ ಹೊರರಾಜ್ಯಗಳಿಂದ ಬಂದಿದ್ದ 300ಕ್ಕೂ ಹೆಚ್ಚು ಕೃತಿಗಳನ್ನು ಪರಿಶೀಲಿಸಿ, 13 ವಿವಿಧ ಸಾಹಿತ್ಯ ಪ್ರಕಾರಗಳ 28 ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್ ತಿಳಿಸಿದ್ದಾರೆ.
ಆಯ್ಕೆ ಸಮಿತಿಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಗೌರವಾಧ್ಯಕ್ಷ ರಂಜಾನ್ ದರ್ಗಾ, ಮಹಾರಾಷ್ಟ್ರ ರಾಜ್ಯಾಧ್ಯಕ್ಷ ಡಾ. ವಿಶ್ವೇಶ್ವರ ಎನ್. ಮೇಟಿ, ಗೌರವಾಧ್ಯಕ್ಷ ಡಾ. ಅಮರೇಶ ಪಾಟೀಲ, ಕುವೆಂಪು ವಿವಿ ಪ್ರಾಧ್ಯಾಪಕಿ ಡಾ. ಎಚ್.ಕೆ. ಹಸೀನಾ, ಸಾಹಿತಿಗಳಾದ ಎನ್. ಶೈಲಜಾ ಹಾಸನ, ಶಿವಲೀಲಾ ಹುಣಸಗಿ ಹಾಗೂ ಎ.ಎ. ದರ್ಗಾ ಭಾಗವಹಿಸಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭ:
ಆಯ್ಕೆಯಾದ ಸಾಹಿತಿಗಳಿಗೆ 2026ರ ಅಕ್ಟೋಬರ್ 11 (ಭಾನುವಾರ) ಬೆಳಿಗ್ಗೆ 10 ಗಂಟೆಗೆ ಹಾಸನದ ಅರಳೀಕಟ್ಟೆ ವೃತ್ತದಲ್ಲಿರುವ ಸಂಸ್ಕೃತ ಭವನದಲ್ಲಿ ನಡೆಯಲಿರುವ ಪ್ರಕಾಶನದ 11ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಾಜ್ಯಮಟ್ಟದ ಕವಿಕಾವ್ಯ ಸಂಭ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿ ಪುರಸ್ಕೃತರ ಹಾಗೂ ಕೃತಿಗಳ ವಿವರ:
ಲಲಿತ ಪ್ರಬಂಧ (ಎನ್. ಶೈಲಜಾ ಹಾಸನ ದತ್ತಿ):
ಸುಚಿತ್ರಾ ಹೆಗಡೆ (ಉತ್ತರ ಕನ್ನಡ) – ‘ಮಿಂಚುಹುಳದ ದಾರಿ’
ಜ್ಯೋತಿ ಬದಾಮಿ (ಬೆಳಗಾವಿ) – ‘ಕುಂಬಳಕಾಯಿ ಕಳ್ಳ ಅಂದ್ರೆ’
ಕಾವ್ಯ (ದಿ. ಸಿ.ಪಿ. ನಾರಾಯಣಚಾರ್ಯ ಸ್ಮಾರಕ ದತ್ತಿ):
ಡಾ. ಶೈಲೇಶ್ ಕುಮಾರ್ (ಬೆಂಗಳೂರು) – ‘ರಿಯಾಯಿತಿ ದರದ ಬುದ್ಧ’
ಶೋಭಾ ನಾಯಕ್ (ಬೆಳಗಾವಿ) – ‘ಅರ್ಧ ಮುಖಗಳ ಶಹರು’
ಶರಣಪ್ಪ ತಳ್ಳಿ ಕುಪ್ಪಿಗುಡ್ಡ (ಕೊಪ್ಪಳ) – ‘ನಾಕು ತಾವಿನ ತಿರುವು’
ವನರಾಗಶರ್ಮ (ಉತ್ತರ ಕನ್ನಡ) – ‘ಕೊಳಲನೇಕೆ ನುಡಿಸದಿರುವೆ’
ಸಂಶೋಧನೆ (ದಿ. ನಿಂಗಪ್ಪ ಮಲ್ಲಪ್ಪ ಮೇಟಿ ಸ್ಮಾರಕ ದತ್ತಿ):
ಡಾ. ದುರ್ಗಪ್ಪ ಕೋಟಿಯವರ್ (ಮುಂಬೈ) – ‘ಮುಂಬಯಿ ಕನ್ನಡ ಗದ್ಯ ವಾಹಿನಿ’
ಈರಣ್ಣ ಬೆಂಗಾಲಿ (ರಾಯಚೂರು) – ‘ನಮ್ಮ ರಾಯಚೂರು’
ವಚನ ಸಾಹಿತ್ಯ (ದಿ. ದೊಡ್ಡಚಂದಪ್ಪ ತಳ್ಳಿ ಪಾಟೀಲ ಸ್ಮಾರಕ ದತ್ತಿ):
ಡಾ. ಪುಷ್ಪಾವತಿ ಶಲವಡಿಮಠ (ಹಾವೇರಿ) – ‘ಅನುಭಾವ ದೀಪ್ತಿ’
ಗೀತಾ ಮಲ್ಲನಗೌಡ (ಕೊಪ್ಪಳ) – ‘ವಚನ ಸಿರಿ’
ನಾಟಕ (ಪ್ರಭಾವತಿ ಶೆಡ್ತಿ ದತ್ತಿ):
ಗಣೇಶ ಅಮೀನಗಡ (ಬಾಗಲಕೋಟೆ) – ‘ಬಂಗಾರದ ಮನುಷ್ಯ’
ವಿನುತಾ ಹಂಚಿನಮನಿ (ಧಾರವಾಡ) – ‘ಪರಾಜಿತೆಯರು’
ಕಾದಂಬರಿ (ದಿ. ಫೆಲಿಕ್ಸ್ ಅಲ್ಬುಕರ್ಕ್ ಮಂಡಂತ್ಯಾರ್ ಸ್ಮಾರಕ ದತ್ತಿ):
ರಂಜಿತಾ ವಿಕ್ರಮ ಮಹಾಜನ (ಬೆಳಗಾವಿ) – ‘ಅವಳೇ ನನ್ನ..’
ರವೀಂದ್ರ ಮುದ್ದಿ (ಹಾವೇರಿ) – ‘ಗಾಡ್ ಈಸ್ ನಾಟ್ ರೀಚಬಲ್’
ಗಜಲ್ (ದಿ. ಫಾತಿಮಾ ಜನಾಬ್ ಸೈಯದ್ ಅಬ್ದುಲ್ ಘನೀ ಸಾಬ್ ಸ್ಮಾರಕ ದತ್ತಿ):
ಲಕ್ಷ್ಮೀಕಾಂತ್ ಮಿರಜಕರ (ಹಾವೇರಿ) – ‘ಖಾಲಿ ಜೋಳಿಗೆಯ ಫಕೀರ’
ಡಾ. ರೇಣುಕಾತಾಯಿ ಸಂತ ಬಾ (ಧಾರವಾಡ) – ‘ದಿಲ್‌ಕಶ್ ಗಜಲ್’
ಕಥೆ (ಕೊಣನೂರು ಅಣ್ಣಯ್ಯ ದತ್ತಿ):
ಎಂ.ಡಿ. ಚಿತ್ತರಗಿ (ಬಾಗಲಕೋಟೆ) – ‘ಚಟ್ಟದ ಬಿಕ್ಕು’
ಡಾ. ಉಮೇಶ ತಿಮ್ಮಾಪುರ (ಗದಗ) – ‘ಕಗ್ಗಲ್ಲ ಕ್ರಾಸ್’
ಚುಟುಕು ಸಾಹಿತ್ಯ (ಕೆ. ವೈ. ಕಂದಕೂರ ದತ್ತಿ):
ನಂದಾದೀಪ (ಮಂಡ್ಯ) – ‘ರಾತ್ರಿ ಸುರಿದ ಮಲ್ಲಿಗೆ’
ಜಯಶ್ರೀ ಹಕ್ಕಂಡಿ (ಕೊಪ್ಪಳ) – ‘ಮಿಣುಕು ದೀಪಗಳು’
ವಿಮರ್ಶೆ (ಕುಂದೂರು ಜಯಪದ್ಮ ಧರಣೇಂದ್ರರಾಜ್ ದತ್ತಿ):
ಡಾ. ಜಿ.ಎಸ್. ಅಶೋಕ (ಶಿವಮೊಗ್ಗ) – ‘ಡಾ. ಜಿ.ಎಸ್.ಶಿವರುದ್ರಪ್ಪ ಮತ್ತು ಚನ್ನವೀರ ಕಣವಿಯವರ ಕಾವ್ಯದಲ್ಲಿನ ಕಾವ್ಯ ಮೀಮಾಂಸೆ ಮತ್ತು ತೌಲನಿಕ ವಿವೇಚನೆ’
ಹರೀಶ ಟಿ.ಜಿ. (ವಿಜಯಪುರ) – ‘ಹೊಳೆದದ್ದೇ ತಾರೆ’
ಮಕ್ಕಳ ಸಾಹಿತ್ಯ (ದಿ. ರಾಮಣ್ಣ ಸುಬ್ಬಣ್ಣ ಹುಣಸಗಿ ದತ್ತಿ):
ಕೃಪಾ ಬಿ.ಎಂ. (ಶಿವಮೊಗ್ಗ) – ‘ಮಕ್ಕಳ ಮ್ಯಾಜಿಕ್’
ಮಮತಾ ಅರಸೀಕೆರೆ (ಹಾಸನ) – ‘ಗೂಡು ಸೇರಿದ ಹಕ್ಕಿಗಳು’
ಬಿಡಿ ಲೇಖನಗಳು (ದಿ. ರಾಮಸ್ವಾಮಿ ಎಚ್. ಶ್ರೀಮತಿ ರಂಗಲಕ್ಷ್ಮಿ ದತ್ತಿ):
ಗಜಾನನ ಭಟ್ಟ (ಉತ್ತರ ಕನ್ನಡ) – ‘ಕಣದಂಗ’
ಎನ್.ಟಿ. ಈರಸ್ವಾಮಿ (ದಾವಣಗೆರೆ) – ‘ಸಾಧನೆಗೆ ಹಾದಿ ನೂರು’
ಹಾಸ್ಯ ಸಾಹಿತ್ಯ (ದಿ. ಕರಿಯಯ್ಯ, ದಿ. ದೇವಮ್ಮ ಸ್ಮಾರಕ ದತ್ತಿ):
ಪಿ. ವೆಂಕಟೇಶ ಬಾಗಲವಾಡ (ರಾಯಚೂರು) – ‘ನಿಮಗ ತಿಳಿಯೋದಿಲ್ಲ ಬಿಡ್ರಿ’
ಸುಮಾರಮೇಶ್ (ಹಾಸನ) – ‘ಚೆಲ್ಲಿದರು ಮಲ್ಲಿಗೆಯ’



